ನಟಿಯಾಗುವ ಮುನ್ನ ಪರಿಣಿತಿ ಚೋಪ್ರಾ ಬಾಲಿವುಡ್ ನಲ್ಲಿ ಮಾಡುತ್ತಿದ್ದ ಕೆಲಸ ಏನು ಗೊತ್ತೇ?? ಯಾರ ಕೈ ಕೆಳಗಡೆ ಗೊತ್ತಾ??

Cinema

ನಮಸ್ಕಾರ ಸ್ನೇಹಿತರೇ ಹಲವಾರು ಕಲಾವಿದರು ತಮ್ಮ ಸಿನಿ ಜರ್ನಿ ಆರಂಭಿಸುವುದಕ್ಕಿಂತ ಮೊದಲು ಬೇರೆ ಬೇರೆ ಕೆಲಸಗಳನ್ನ ಮಾಡುತ್ತಿರುತ್ತಾರೆ ಎಂದು ನೀವು ಹಲವಾರು ಸಂದರ್ಶನಗಳಲ್ಲಿ ಓದಿರುತ್ತಿರಿ. ಆದರೇ ಕಲೆಯ ಸೆಲೆಯೇ ಹಾಗೇ, ನೀವು ಯಾವ ವೃತ್ತಿಯಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರೂ, ಗುಪ್ತವಾಗಿ ಅದು ನಿಮ್ಮನ್ನ ಸೆಳೆದು ಕಲಾ ಲೋಕದಲ್ಲಿ ಮುಳುಗಿಸಿಬಿಡುತ್ತದೆ.

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಬಗ್ಗೆ ಕೇಳಿರುತ್ತಿರಿ. ನಟಿ ಪ್ರಿಯಾಂಕಾ ಚೋಪ್ರಾರವರ ಸಹೋದರಿ. ಪರಿಣಿತಿ ಕೇವಲ ನಟನೆಯಲ್ಲಿ ಮಾತ್ರವಲ್ಲದೇ ಉತ್ತಮ ಹಿನ್ನಲೆ ಗಾಯಕರು ಸಹ. ಕೇಸರಿ ಸಿನಿಮಾ ತೇರಿ ಮಿಟ್ಟಿ ಮೇ ಹಾಡನ್ನು ಸಹ ಇವರು ಹಾಡಿದ್ದನ್ನ ನೋಡಿರುತ್ತಿರಿ. ಪರಿಣಿತಿ ಚೋಪ್ರಾ ಇತ್ತಿಚಿನ ಸಂದರ್ಶನದಲ್ಲಿ ತಾವು ನಟಿಯಾಗುವ ಮುನ್ನ ಮಾಡುತ್ತಿದ್ದ ಕೆಲಸ ಯಾವುದು ಎಂಬುದನ್ನ ಬಹಿರಂಗಪಡಿಸಿದ್ದಾರೆ. ಬಾಲಿವುಡ್ ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಕಂಪನಿಯಾದ ಯಶ್ ರಾಜ್ ಫಿಲಂಸ್ ನಲ್ಲಿ ಪರಿಣಿತಿ ಚೋಪ್ರಾ ಪಿ.ಆರ್‌.ಒ (ಸಾರ್ವಜನಿಕ ಸಂಪರ್ಕ ಅಧಿಕಾರಿ)ಯಾಗಿ ಕೆಲಸ ನಿರ್ವಹಿಸುತ್ತಿದ್ದರಂತೆ. ಅದು ಬಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶರ್ಮಾರವರ ಪಿ.ಆರ್.ಓ ಆಗಿ ಹಲವು ತಿಂಗಳುಗಳ ಕಾಲ ಕೆಲಸ ಮಾಡಿದ್ದರಂತೆ.

ಈ ಮಧ್ಯೆ ಯಶ್ ರಾಜ್ ಬ್ಯಾನರ್ ನಿಂದ ಹೊಸದಾಗಿ ಘೋಷಿಸಿದ ಸಿನಿಮಾ ಲೇಡಿಸ್ ವರ್ಸಸ್ ರಿಕ್ಕಿ ಬೆಹ್ಲ್ ಚಿತ್ರಕ್ಕೆ ಸಹನಟಿಯರನ್ನ ಹುಡುಕುತ್ತಿದ್ದರಂತೆ. ಆಗ ಸಹನಟಿಯಾಗಿ ಪರಿಣಿತಿ ಚೋಪ್ರಾರವರನ್ನೇ ಆಯ್ಕೆ ಮಾಡಿದರಂತೆ. ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಜೊತೆ ಇವರು ಕಾಣಿಸಿಕೊಂಡರು. ಅಲ್ಲಿಂದ ಬಾಲಿವುಡ್ ನಲ್ಲಿ ನಟಿ ಪರಿಣಿತಿ ಚೋಪ್ರಾಗೆ ಹಲವಾರು ಅವಕಾಶಗಳು ಹುಡುಕಿಕೊಂಡು ಬಂದವು. ಹೀಗೆ ಯಾವ ನಟಿಗೆ ಪಿ.ಆರ್.ಒ ಆಗಿ ಕೆಲಸ ಮಾಡುತ್ತಿದ್ದಾರೋ, ಆ ನಟಿಯ ಜೊತೆಯೆ ಸಹನಟಿಯಾಗಿ ಬಾಲಿವುಡ್ ನಲ್ಲಿ ನಟಿಯಾಗಿ ನನ್ನ ಕರಿಯರ್ ಆರಂಭಿಸಿದೆ ಎನ್ನುತ್ತಾರೆ ಪರಿಣಿತಿ ಚೋಪ್ರಾ. ಪರಿಣಿತಿ ಚೋಪ್ರಾರವರು ಅಭಿನಯಿಸಿದ ಯಾವ ಪಾತ್ರ ನಿಮಗೆ ಇಷ್ಟ ಎಂಬುದನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *