ಸ್ವಾತಿ ಮುತ್ತು ಮೀನಾ ನೆನಪಿದ್ದಾರಾ?? ಇವರ ತಂಗಿ ಯಾರು ಗೊತ್ತೇ?? ಇವರು ಕೂಡ ಟಾಪ್ ನಟಿ. ಅಷ್ಟಕ್ಕೂ ಯಾರು ಗೊತ್ತೇ??

Cinema

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ನಟೀಮಣಿಯರು ಪರಭಾಷೆಗಳಿಂದ ಬಂದು ಕನ್ನಡ ಚಿತ್ರರಂಗದಲ್ಲಿ ನೆಲೆಯನ್ನು ಕೊಂಡುಕೊಂಡಿದ್ದು ನೀವು ನೋಡಿದ್ದೀರಾ. ಇಂತಹ ನಟಿಮಣಿಯ ರಲ್ಲಿ ಕೆಲವರು ಹೀಗೆ ಬಂದು ಹಾಗೆ ಹೋದರು ಕೆಲವರು ಇಲ್ಲೇ ನಟಿಸಿ ಕನ್ನಡ ಚಿತ್ರರಂಗವನ್ನೇ ತಮ್ಮ ವೃತ್ತಿ ಕ್ಷೇತ್ರವನ್ನಾಗಿ ಮಾಡಿಕೊಂಡು ಇಲ್ಲೇ ಇದ್ದು ಬಿಟ್ಟಿದ್ದಾರೆ. ಕೆಲ ನಟಿಯರು ಆಗೊಮ್ಮೆ-ಈಗೊಮ್ಮೆ ಬಂದರು ಸಹ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಸಹ ಖಾಯಂ ಆಗಿ ನೆಲೆಸಿದ್ದಾರೆ.

ಇಂದು ಅಂತಹ ಕೆಲವು ನಟಿಯರಲ್ಲಿ ಪ್ರಮುಖವಾದ ಒಬ್ಬ ನಟಿಯ ಕುರಿತಂತೆ ನಾವು ಹೇಳಿದ್ದೇವೆ. ಹೌದು ನಾವು ಹೇಳಲು ಹೊರಟಿರುವುದು ದಕ್ಷಿಣ ಭಾರತದ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದ ಮೀನಾ ರವರ ಕುರಿತಂತೆ. ಹೌದು ಅಂದಿನ ಕಾಲಕ್ಕೆ ತಮಿಳು ತೆಲುಗು ಕನ್ನಡ ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಕೂಡ ತಮ್ಮ ನಟನೆಯ ಛಾಪನ್ನು ಮೀನಾ ರವರು ಮೂಡಿಸಿದ್ದರು. ತಮಿಳು ಚಿತ್ರರಂಗದಿಂದ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ನಟಿ ಮೀನಾ,

ಕಾಲ ಕ್ರಮೇಣ ಸ್ಯಾಂಡಲ್ವುಡ್ ಬಾಲಿವುಡ್ ಟಾಲಿವುಡ್ ಹಾಗೂ ಮಾಲಿವುಡ್ ಚಿತ್ರರಂಗದಲ್ಲಿ ಒಂದೊಂದಾಗಿ ನಟಿಸುತ್ತಾ ಜನರ ಮೆಚ್ಚುಗೆಯನ್ನು ಗಳಿಸಲಾರಂಭಿಸಿದರು. ನಂತರ ಬರುಬರುತ್ತಾ ಎಲ್ಲಾ ಭಾಷೆಯ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಮಿನಾರ್ ಅವರ ತಮ್ಮ ಚಿತ್ರದಲ್ಲಿ ನಟಿಸುವ ಬೇಡಿಕೆಯಿಟ್ಟರು. ನಂತರದ ದಿನಗಳಲ್ಲಿ ನಟಿ ಮೀನಾ ರವರು ದಕ್ಷಿಣ ಭಾರತದ ಎಲ್ಲಾ ಚಿತ್ರರಂಗ ಹಾಗೂ ಬಾಲಿವುಡ್ ನಲ್ಲಿ ಕೂಡ ಬಹುಬೇಡಿಕೆಯ ನಟಿಯಾಗಿ ರೂಪುಗೊಂಡರು. ಎಲ್ಲಾ ಭಾಷೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ನಟಿ ಮೀನಾ ರವರು ನಟನೆ ನೋಡುವುದೆಂದರೆ ಕಣ್ಣಿಗೆ ಹಬ್ಬ ಎಂಬಂತೆ ಆಗಿತ್ತು ಆ ಕಾಲದಲ್ಲಿ. ಸತತ ಎರಡು ದಶಕಗಳ ಕಾಲ ದಕ್ಷಿಣ ಭಾರತ ಚಿತ್ರರಂಗದ ಅನಭಿಷಕ್ತ ರಾಣಿಯಾಗಿ ಮೆರೆದರು. ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮೀನಾ ಬೆಂಗಳೂರಿನ ವಿದ್ಯಾಸಾಗರ ರವರನ್ನು ಮದುವೆಯಾದರು. ಮದುವೆಯಾದ ನಂತರ ಆಗೊಮ್ಮೆ-ಈಗೊಮ್ಮೆ ಅಷ್ಟೇ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಕೇವಲ ನಟಿಯಾಗಿ ಮಾತ್ರವಲ್ಲದೆ ಗಾಯಕಿಯಾಗಿ ನೃತ್ಯಗಾರ್ತಿ ಆಗಿ ಹಾಗೂ ರಿಯಾಲಿಟಿ ಶೋಗಳ ತೀರ್ಪುಗಾರ್ತಿ ಕೂಡ ಜನಮನ್ನಣೆಗಳಿಸಿ ಕೊಂಡಿದ್ದಾರೆ.

ಅವರಿಗೆ ನೈನಿಕ ವಿದ್ಯಾಸಾಗರ್ ಎಂಬ ಮಗಳು ಕೂಡ ಇದ್ದಾರೆ ಮಗಳು ಕೂಡ ತಾಯಿಯಂತೆ ನಟಿಯಾಗಿ ಚಿತ್ರರಂಗಕ್ಕೆ ಕಾಲಿಡಲು ಈಗಾಗಲೇ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಹೌದು ತಲಪತಿ ವಿಜಯ್ ನಟನೆಯ ತೇರಿ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಮೀನಾ ರವರ ತಂಗಿ ಕೂಡ ಚಿತ್ರರಂಗದಲ್ಲಿ ಫೇಮಸ್ ಗೊತ್ತಾ. ಅವರು ಯಾರೆಂದು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ನಟಿ ಮೀನಾ ರವರಂತೆ ಅವರ ತಂಗಿ ಅಂದರೆ ಸಂಬಂಧದಲ್ಲಿ ತಂಗಿ ಅವರು ಕೂಡ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಸಿದ್ಧಿಯನ್ನು ಪಡೆದವರು.

ಹೌದು ಅವರ ತಂಗಿ ಹೆಸರು ಶ್ರೀದೇವಿ ವಿಜಯಕುಮಾರ್ ಇವರು ಮೀನಾ ರವರಿಗೆ ಸಹೋದರಿ ಸಂಬಂಧಿ ಆಗಬೇಕು. ನಮ್ಮ ರೋರಿಂಗ್ ಸ್ಟಾರ್ ಶ್ರೀ ಮುರಳಿ ಜೊತೆಗಿನ ಪ್ರೀತಿಗಾಗಿ ಚಿತ್ರದಲ್ಲಿ ನಟಿಸಿದ್ದರು. ಹಾಗೂ ಶಿವಣ್ಣ ಹಾಗೂ ಇತರ ನಟರೊಂದಿಗೆ ಕೂಡ ನಟಿಸಿ ಕನ್ನಡದಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು. ಇವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಜನಮನ್ನಣೆಗಳಿಸಿ ಪ್ರಖ್ಯಾತಿ ಆಗಿದ್ದರು. ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *