ವರನಟ ರಾಜ್ ಕುಮಾರ್ ರವರು ಕೋಟಿ ಕೋಟಿ ದುಡ್ಡಿದ್ದರೂ ಕೂಡ ಕೊಳೆತ ಹಣ್ಣು ತಿಂದಿದ್ದು ಯಾಕೆ ಗೊತ್ತೆ??

Cinema

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅದೆಷ್ಟೋ ಸ್ಟಾರ್ ನಟರು ಆಳಿ ಅಳಿದು ಕೂಡ ಹೋಗಿದ್ದಾರೆ. ಆದರೆ ಬೆರಳೆಣಿಕೆಯ ನಟರಷ್ಟೇ ಇಂದಿಗೂ ಕೂಡ ದೇವರಂತೆ ಅಭಿಮಾನಿಗಳಿಂದ ಪೂಜಿಸಲ್ಪಡುತ್ತಿದ್ದಾರೆ. ಅಭಿಮಾನಿಗಳನ್ನು ದೇವರೆಂದು ಕರೆದು ಚಿತ್ರರಂಗ ವಿದು. ಈ ಚಿತ್ರರಂಗದಲ್ಲಿ ಇದ್ದು ರಾಜನಂತೆ ಆಳಿಹೋದ ನಟರೊಬ್ಬರ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ. ಹೌದು ನಾವು ಮಾತನಾಡಲು ಹೊರಟಿರೋದು ನಾಡುಕಂಡ ಸರ್ವಶ್ರೇಷ್ಠ ಕಂಠೀರವ ನಟಸಾರ್ವಭೌಮ ನಾಮಾಂಕಿತ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ.

ಕನ್ನಡದ ಚಿತ್ರರಂಗದ ಭಗವದ್ಗೀತೆ ಎಂದೆ ಹೇಳಲಾಗುವ ನಟ ನಮ್ಮ ಅಣ್ಣಾವ್ರು. ಎಂತಹ ನಟನೆಯನ್ನು ಕೂಡ ಅವರು ಸುಲಲಿತವಾಗಿ ಮಾಡಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲರಾಗುತ್ತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡಿದ ಪಾತ್ರವಿಲ್ಲ ಎಂಬಂತೆ ಅಣ್ಣಾವ್ರ ನಟನೆ ಅಷ್ಟೊಂದು ಪರಿಪಕ್ವ ಹಾಗೂ ಪರಿಪೂರ್ಣ ವಾಗಿರುತ್ತಿತ್ತು. ಪುರಾತನ ಐತಿಹಾಸಿಕ ಮಾಡರ್ನ್ ಎಂತಹ ಪಾತ್ರಗಳೇ ಕೇಳಿ ಅಣ್ಣಾವ್ರು ಆ ಪಾತ್ರಗಳಲ್ಲಿ ನಟಿಸಿದ್ದಾರೆ ಎಂಬುದು ಶತಸಿದ್ಧ.

ನಟನೆ ಮಾತ್ರವಲ್ಲದೆ ಎಂತಹ ಸಾಹಸ ದೃಶ್ಯಗಳನ್ನು ಆಗಲಿ ಅಥವಾ ಮನೋರಂಜನೆಯಲ್ಲಿ ಅಣ್ಣಾ ಅವರನ್ನು ಮೀರಿಸಿದ ಮತ್ತೊಬ್ಬ ನಟ ಕರುನಾಡಿನಲ್ಲಿ ಜನಿಸಿಲ್ಲ. ಅಭಿಮಾನಿಗಳನ್ನು ದೇವರೆಂದು ಕರೆದ ಮೊದಲ ನಟ. ಅವರು ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಿದ್ದರೆ ಎಂದರೆ ಅಭಿಮಾನಿಗಳೇ ನನಗೆ ಎಲ್ಲಾ ಅಭಿಮಾನಿಗಳೇ ನನ್ನ ದೇವರು ಎಂಬುದಾಗಿ ಎಂಬುದಾಗಿ ಸಂಭೋದಿಸುತ್ತಿದ್ದ ರಂತೆ. ಕನ್ನಡ ಚಿತ್ರರಂಗವನ್ನು ಇಡೀ ಭಾರತೀಯ ಚಿತ್ರರಂಗ ಗುರುತಿಸಲು ಸಾಧ್ಯವಾಗಿದ್ದೇ ನಮ್ಮ ಅಣ್ಣಾವ್ರಿಂದ.

ಈಗ ನಾವು ಹೇಳಹೊರಟಿರುವ ಘಟನೆ ನಿಮಗೆ ಡಾಕ್ಟರ್ ರಾಜಕುಮಾರ್ ಅವರು ತಮ್ಮ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದು ಅರ್ಥವಾಗುವಂತೆ ಮಾಡುತ್ತದೆ. ಬನ್ನಿ ಘಟನೆಯನ್ನು ಸಂಪೂರ್ಣವಾಗಿ ಸವಿಸ್ತರವಾಗಿ ನಿಮಗೆ ಮನದಟ್ಟು ಮಾಡುತ್ತೇವೆ. ಒಮ್ಮೆ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರು ಚೆನ್ನೈನಲ್ಲಿ ಕವಿರತ್ನ ಕಾಳಿದಾಸ ಎಂಬ ಚಿತ್ರಕ್ಕೆ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಆಗ ಹಳ್ಳಿಯಿಂದ ಡಾಕ್ಟರ್ ರಾಜಕುಮಾರ್ ಅವರನ್ನು ನೋಡಲು ಅಭಿಮಾನಿಗಳ ದಂಡೆ ಬಸ್ಸಿನಲ್ಲಿ ಹತ್ತಿಕೊಂಡು ಬಂದಿತ್ತು.

ಆಗ ಅಭಿಮಾನಿಗಳು ನನ್ನನ್ನು ನೋಡಲು ಬಂದಿದ್ದರು ತಿಳಿದು ಅವರನ್ನು ನೋಡಲು ಚಿತ್ರೀಕರಣವನ್ನು ಬಿಟ್ಟು ಡಾಕ್ಟರ್ ರಾಜಕುಮಾರ್ ಅವರು ಬಂದರು. ರಾಜಕುಮಾರ್ ಅವರು ಬಂದ ಎಲ್ಲಾ ರೈತ ಅಭಿಮಾನಿಗಳನ್ನು ಮಾತನಾಡಿಸಿ ಕ್ಷೇಮ ಕುಶಲ ವನ್ನು ವಿಚಾರಿಸಿದರು. ಒಬ್ಬ ರೈತ ಊರಿನಿಂದ ಬರಬೇಕಾದರೆ ತನ್ನ ರೂಮಾಲಿ ನಲ್ಲಿ ಅಣ್ಣವರಿಗೆ ಕೊಡೋದಕ್ಕೆ ಬಾಳೆಹಣ್ಣು ತಂದಿದ್ದ. ಆದರೆ ಅದನ್ನು ಕೊಡೋಕೆ ಹೋಗಬೇಕಾದರೆ ಅದು ಆಗಲೇ ಕೊಳೆತು ಹೋಗಿತ್ತು.

ಆದರೂ ಸಹ ಅಣ್ಣಾವ್ರು ಬೇಸರ ಮಾಡಿಕೊಳ್ಳದೆ ಕಳಿತ ಹಣ್ಣನ್ನು ತಿಂದು ರೈತನಿಗೆ ಮಾತನಾಡಿಸಿ ಕಳಿಸಿಕೊಟ್ಟರು. ಅಲ್ಲಿದ್ದ ಯಾರೋ ಒಬ್ಬರು ಯಾಕೆ ಸರ್ ನೀವು ಈ ಹಣ್ಣುಗಳನ್ನೆಲ್ಲಾ ತಿನ್ನುತ್ತೀರಾ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದಾಗ ಅಣ್ಣಾವ್ರು ಅವರು ಪಾಪ ಬಿಸಿಲಿನಿಂದ ಅದೆಷ್ಟು ದೂರದಿಂದ ಬಸ್ಸಿನಲ್ಲಿ ಬಂದಿದ್ದಾರೆ ನಾನು ಅವರು ಕೊಡುವ ಹಣ್ಣನ್ನು ತಿನ್ನದೆ ಇದ್ದರೆ ಅವರಿಗೆ ಎಷ್ಟು ಬೇಸರ ಆದೀತು. ನನಗೆ ನನ್ನ ಅಭಿಮಾನಿಗಳೇ ದೇವರು ಅವರು ಕೊಟ್ಟಂತಹ ಪ್ರಸಾದವನ್ನು ಸ್ವೀಕರಿಸುವುದು ನನ್ನ ಮಹಾಭಾಗ್ಯ ಎಂದು ಹೇಳಿದ್ದರಂತೆ. ಇದು ನಮ್ಮ ಅಣ್ಣಾವ್ರ ಮಹಾನ್ ಧೀಮಂತ ವ್ಯಕ್ತಿತ್ವದ ಬಣ್ಣನೆ ಮಾಡಲು ಇರುವಂತಹ ಒಂದು ಉದಾಹರಣೆ ಎಂದೇ ಹೇಳಬಹುದು. ಅಣ್ಣಾವ್ರ ಈ ಘಟನೆ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *