ಸುಮಲತಾ ಅವರ ತಂದೆ ಯಾರು ಗೊತ್ತೇ?? ಇಡೀ ಭಾರತದ ಚಿತ್ರರಂಗವೇ ಇವರ ಕೈಯಲ್ಲಿತ್ತು, ಯಾರು ಗೊತ್ತೇ??

0

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಹಿರಿಯ ನಟಿಯರಲ್ಲಿ ಸುಮಲತಾ ಅಂಬರೀಶ್ ಅವರು ಕೂಡ ಒಬ್ಬರು. ಹೌದು ಸುಮಲತಾ ಅವರು ಕನ್ನಡದ ಹಿರಿಯ ನಟ ಹಾಗೂ ರಾಜಕಾರಣಿ ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಇನ್ನು ಸುಮಲತಾ ಅಂಬರೀಶ್ ಅವರು ಸುಮಾರು ಎರಡು 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಹೀಗೆ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲಿ ಮಿಂಚಿದರೆ ಸುಮಲತಾ ಅವರು ಎಂದು ಹೇಳಬಹುದು. ಇನ್ನು ಸುಮಲತಾ ಅವರು ನಮ್ಮ ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಅಂಬರೀಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಸುಮಲತಾ ಅವರಿಗೆ ಅಭಿಷೇಕ್ ಎಂಬ ಮಗನಿದ್ದು, ಅವರು ಕೂಡ ಕನ್ನಡ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಅಂಬರೀಶ್ ಅವರು ಇಹಲೋಕ ತ್ಯಜಿಸಿದ ಬಳಿಕ ಸುಮಲತಾ ಅವರು ಮಂಡ್ಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಸುಮಲತಾ ಅಂಬರೀಶ್ ಅವರ ಬಗ್ಗೆ ಎಲ್ಲರಿಗೂ ತಿಳಿದಿರುವ ಮಾಹಿತಿ ಅಂದರೆ ಅವರು ಅಂಬರೀಶ್ ಅವರ ಧರ್ಮಪತ್ನಿ, ಅವರು ಆಂಧ್ರ ಮೂಲದವರು ಇದಿಷ್ಟೇ ಮಾಹಿತಿಗಳು ನಮ್ಮ ಕನ್ನಡಿಗರಿಗೆ ಗೊತ್ತಿದೆ. ಆದರೆ ಅವರ ತಂದೆ ಯಾರು? ಕುಟುಂಬದ ಹಿನ್ನೆಲೆ ಏನು ಎಂಬುದರ ಬಗ್ಗೆ ಯಾರಿಗೂ ಕೂಡ ಅಷ್ಟೊಂದು ಮಾಹಿತಿಯಿಲ್ಲ. ಇನ್ನು ಕೆಲವು ಮಾಹಿತಿಗಳ ಪ್ರಕಾರ ನಟಿ ಸುಮಲತಾ ಅವರ ತಂದೆ ಕೂಡ ಅಂದಿನ ದಿನಗಳಲ್ಲಿ ಸ್ಟಾರ್ ಆಗಿದ್ದರು.

ಹಾಗಾದರೆ ಅವರು ಯಾರು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ. ಸುಮಲತಾ ಅಂಬರೀಶ್ ಅವರು ಚೆನ್ನೈನಲ್ಲಿ 1963 ರಲ್ಲಿ ಮದನ್ ಮೋಹನ್ ಹಾಗೂ ರೂಪ ಅವರ ಮಗಳಾಗಿ ಜನಿಸಿದರು. ಇನ್ನು ಈ ದಂಪತಿಗೆ ಐದು ಜನ ಮಕ್ಕಳಿದ್ದು, ಮೊದಲನೆಯವರು ರೇಣುಕಾ, ಎರಡನೆಯವರು ರೋಹಿಣಿ, ಮೂರನೆಯವರು ರಾಜೇಂದ್ರ ಪ್ರಸಾದ್, ನಾಲ್ಕನೆಯವರು ಸುಮಲತಾ ಅಂಬರೀಶ್ ಹಾಗೂ ಕೊನೆಯ ಐದನೆಯವರಾಗಿ ಕೃಷ್ಣಪ್ರಿಯ ಜನಿಸಿದರು.

ಹೀಗೆ ಒಟ್ಟು ನಾಲ್ಕು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗುವಿಗೆ ಜನ್ಮ ನೀಡಿದರು. ಇನ್ನು ಸುಮಲತಾ ಅಂಬರೀಶ್ ಅವರು ಕನ್ನಡ ಸೇರಿದಂತೆ ಸಾಕಷ್ಟು ಭಾಷೆಯ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇನ್ನು ಇವರ ತಂದೆ ಕೂಡ ಅಂದಿನ ದಿನಗಳಲ್ಲಿ ಖ್ಯಾತ ಸ್ಟಾರ್ ಆಗಿದ್ದರು. ಹೌದು ಅಂದಿನ ದಿನಗಳಲ್ಲಿ ಇಂದಿನ vfx ಅನ್ನು ಹಾಗೂ ಸಿರಿ ಕೆಲಸಗಳನ್ನು ಅಂದಿನ ದಿನಗಳಲ್ಲಿ ಸ್ಪೆಷಲ್ ಎಫೆಕ್ಟ್ ಎನ್ನುತ್ತಿದ್ದರು. ಇದರಲ್ಲಿ ಸುಮಲತಾ ಅವರ ತಂದೆ ಮದನ್ ಮೋಹನ್ ಅವರು ಯು.ಕೆ ಯಿಂದ ತರಬೇತಿ ಪಡೆದು ಬಂದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಅವರು ಪ್ರಸಾದ್ ಪ್ರೊಡಕ್ಷನ್ ಎಂಬಲ್ಲಿ ಕೆಲಸ ಮಾಡುತ್ತಿದ್ದರು. ಅಂದಿನ ದಿನಗಳಲ್ಲಿ ಹಿಂದಿ ಸೇರಿದಂತೆ ತಮಿಳಿನ ಅನೇಕ ಚಿತ್ರಗಳಲ್ಲಿ ಟೈಟಲ್ ಹಾಗೂ ಸ್ಪೆಷಲ್ ಎಫೆಕ್ಟ್ ಮಾಡುತ್ತಿದ್ದರು. ಅಂದಿನ ದಿನಗಳಲ್ಲಿ ಇದರಲ್ಲಿ ಪರಿಣಿತಿ ಹೊಂದಿದ ವ್ಯಕ್ತಿ ಕೂಡ ಚಿತ್ರರಂಗದಲ್ಲಿ ಇರಲಿಲ್ಲ. ಇನ್ನು ಇದರಲ್ಲಿ ಪರಿಣಿತಿ ಹೊಂದಿದ ಏಕೈಕ ವ್ಯಕ್ತಿ ಸುಮಲತಾ ಅವರ ತಂದೆಯಾಗಿದ್ದರು. ಹೀಗಾಗಿ ಅಂದಿನ ದಿನಗಳಲ್ಲಿ ಅವರು ಚಿತ್ರರಂಗದ ಸ್ಟಾರ್ ಆಗಿದ್ದರು.