ಈ 3 ಬ್ಯಾಟ್ಸಮನ್ ಗಳಿಗೆ ಬೌಲಿಂಗ್ ಮಾಡೋದು ಕಷ್ಟ ಅಂದ ರಶೀದ್ ಖಾನ್, ಭಾರತೀಯ ಆಟಗಾರನು ಲಿಸ್ಟಿನಲ್ಲಿ. ಯಾರ್ಯಾರು ಗೊತ್ತೇ??

sports

ನಮಸ್ಕಾರ ಸ್ನೇಹಿತರೇ , ನಿಮಗೆ ಅಫಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಬಗ್ಗೆ ತಿಳಿದಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಆಗಿರುವ ಇವರು, ಐಪಿಎಲ್ ಇತಿಹಾಸದಲ್ಲಿಯೇ ಅತಿ ಕಡಿಮೆ ಎಕಾನಮಿ ಇವರ ಹೆಸರಿನಲ್ಲಿಯೇ ಇದೆ. ತಂಡಕ್ಕೆ ಬೇಕಾದಾಗ ವಿಕೇಟ್ ತೆಗೆದುಕೊಡುವ ಪ್ರಮುಖರು ಇವರೇ. ಕೇವಲ ಗೂಗ್ಲಿ ಹಾಗೂ ಲೆಗ್ ಸ್ಪಿನ್ ಮೂಲಕವೇ ಬ್ಯಾಟ್ಸಮನ್ ಗಳಿಗೆ ಕಬ್ಬಿಣದ ಕಡಲೆ ಆಗಿದ್ದಾರೆ. ಇತ್ತಿಚೆಗಷ್ಟೇ ಅಫಘಾನಿಸ್ತಾನದ ತಂಡದ ನಾಯಕತ್ವವನ್ನ ಬೇಡ ಎಂದು ಹೇಳಿದ್ದರು.

ಇವರು ಇತ್ತಿಚೆಗಷ್ಟೇ ಸಂದರ್ಶನದಲ್ಲಿ ನನಗೆ ಈ ಮೂವರು ಬ್ಯಾಟ್ಸಮನ್ ಗಳಿಗೆ ಬೌಲಿಂಗ್ ಮಾಡುವುದು ಬಹಳ ಕಷ್ಟ ಎಂದು ಹೇಳಿದ್ದರು. ಎಲ್ಲರೂ ಆ ಬ್ಯಾಟ್ಸಮನ್ ಗಳು ರೋಹಿತ್, ಕೊಹ್ಲಿ ಅಥವಾ ಇನ್ನಾರು ಎಂಬ ಯೋಚನೆಯಲ್ಲಿರುವಾಗಲೇ ಅವರು ಕೊಟ್ಟ ಉತ್ತರ ಮತ್ತಷ್ಟು ವಿಭಿನ್ನವಾಗಿದೆ. ಅಷ್ಟಕ್ಕೂ ರಶೀದ್ ಖಾನ್ ರವರಿಗೆ ತಲೆನೋವಾಗಿರುವ ಆ ಮೂವರು ಬ್ಯಾಟ್ಸಮನ್ ಗಳು ಯಾರು ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

ರಶೀದ್ ಖಾನ್ ಪ್ರಕಾರ ಬೌಲರ್ ಹಾಗೂ ಅಂಪೈರ್ ತಲೆ ಮೇಲೆ ಸಿಕ್ಸರ್ ಹೊಡೆಯುವ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಹಾಗೂ ಅದೇ ತಂಡದ ಆಂಡ್ರೆ ರಸೆಲ್ ಮತ್ತು ಭಾರತ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಬೌಲಿಂಗ್ ಮಾಡುವುದು ಕಷ್ಟ. ಗೂಗ್ಲಿ ಎಸೆತಗಳು ಕೆಲವೊಮ್ಮೆ ಅಂದುಕೊಂಡಷ್ಟು ಟರ್ನ್ ಆಗದೇ ನೇರವಾಗಿ ಬ್ಯಾಟ್ ಗೆ ಬಂದರೇ, ಈ ಮೂವರು ಆಟಗಾರರು ಅಂಪೈರ್ ತಲೆ ಮೇಲೆ ನೇರವಾಗಿ ಗೆರೆ ಎಳೆದಂತೆ ಸಿಕ್ಸರ್ ಭಾರಿಸುತ್ತಾರೆ. ಹಾಗಾಗಿ ಈ ಮೂವರು ಬ್ಯಾಟ್ಸಮನ್ ಗಳಿಗೆ ನಾನು ಬೌಲಿಂಗ್ ಮಾಡುವಾಗ , ನನ್ನ ಲೈನ್ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ ಎಂದು ಹೇಳಿದ್ದಾರೆ. ರಶೀದ್ ಖಾನ್ ರವರ ಈ ಹೇಳಿಕೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ಕಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *