ಟಾಪ್ ಧಾರಾವಾಹಿ ಗಟ್ಟಿಮೇಳ ಧ್ರುವ ಪಾತ್ರದಾರಿ ನಟನ ನಿಜ ಜೀವನ ಹೇಗಿದೆ ಗೊತ್ತಾ?? ಅವರು ನಿಜಕ್ಕೂ ಯಾರು ಗೊತ್ತೇ??

Cinema

ನಮಸ್ಕಾರ ಸ್ನೇಹಿತರೇ ಇದೀಗ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು, ನಂಬರ್1 ಸ್ಥಾನಕ್ಕಾಗಿ ಪೈಪೋಟಿ ನಡೆಸಿವೆ ಎಂದು ಹೇಳಬಹುದು. ಇನ್ನು ಹಲವರು ಧಾರಾವಾಹಿಗಳು ಜನರನ್ನು ಪ್ರತಿದಿನ ಮನರಂಜಿಸುತ್ತಾ ಜನರ ಪ್ರೀತಿಗೆ ಪಾತ್ರವಾಗಿವೆ. ಇಂತಹ ಧಾರಾವಾಹಿಗಳಲ್ಲಿ ಗಟ್ಟಿಮೇಳ ಧಾರವಾಹಿ ಕೂಡ ಒಂದು. ಈ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ಇದರಲ್ಲಿ ನಟಿಸಿರುವ ಕಲಾವಿದರು ಜನಮನ್ನಣೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಪ್ರಾರಂಭವಾದಾಗಿನಿಂದ ಇಂದಿನವರೆಗೂ ಜನರಲ್ಲಿ ಬೇಸರದ ಭಾವನೆಯನ್ನು ಮೂಡಿಸಿಲ್ಲ ಎಂದು ಕೂಡ ಹೇಳಬಹುದು. ಇನ್ನು ಇದರಲ್ಲಿ ಬರುವ ಧ್ರುವ ಎಂಬ ಪಾತ್ರದಲ್ಲಿ ನಟಿಸುತ್ತಿರುವ ನಟನೂ ಕೂಡ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಈ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟ ಯಾರು? ಅವರು ನಿಜಜೀವನದಲ್ಲಿ ಹೇಗಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ತಿಳಿಸಿಕೊಡುತ್ತೇವೆ ಬನ್ನಿ.

ಇನ್ನು ಗಟ್ಟಿಮೇಳ ಧಾರಾವಾಹಿಯಲ್ಲಿ ಧ್ರುವ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟನಾ ನಿಜವಾದ ಹೆಸರು ರಂಜಾನ್. ರಂಜನ್ ಅವರು ಹುಟ್ಟಿ ಬೆಳೆದಿದ್ದು ಮಂಡ್ಯದಲ್ಲಿ. ಬಾಲ್ಯದಿಂದಲೇ ಮೆಟ್ರೋ ನಿಯತ್ತು ಆಸಕ್ತಿ ಬೆಳೆಸಿಕೊಂಡ ರಂಜನ್ ಅವರು ವಿದ್ಯಾಭ್ಯಾಸದ ನಂತರ ಇವರು ನಟ ಹಾಗೂ ನಿರ್ದೇಶಕರಾಗಿರುವ ನಾಗಾಭರಣ ಅವರ ಅಭಿನಯ ತರಬೇತಿ ಶಾಲೆಗೆ 2017ರಲ್ಲಿ ಪ್ರವೇಶ ಪಡೆದರು. ತರಬೇತಿಯ ನಂತರ ರಂಜನ್ ಅವರು ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಲು ಪ್ರಾರಂಭಿಸಿದರು.

ಹೀಗೆ ಯಶಸ್ಸಿನ ಮೆಟ್ಟಿಲುಗಳನ್ನು ಇರುತ್ತಾ ಅವರು ಇಂದು ಗಟ್ಟಿಮೇಳ ಧಾರಾವಾಹಿಯಲ್ಲಿ ಧ್ರುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ರಂಜನ್ ಅವರು ಕೇವಲ ಕಿರುತೆರೆ ಅಷ್ಟೇ ಅಲ್ಲದೆ ಅನೇಕ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ‘ಇಷ್ಟ ದೇವತೆ’ ಎಂಬ ಧಾರಾವಾಹಿಯಲ್ಲಿ ಖಳನಾಯಕನ ಪಾತ್ರಕ್ಕೆ ಇವರನ್ನು ಆಯ್ಕೆ ಮಾಡಲಾಯಿತು. ಇನ್ನು ಈ ಪಾತ್ರದಲ್ಲಿ ಅದ್ಭುತವಾಗಿಯೇ ನಟಿಸುವ ಮೂಲಕ ಜನರ ಮನಸ್ಸನ್ನು ಗೆದ್ದು ಇಂದು ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಪಡೆದರು.

ಈ ಧಾರವಾಹಿಯ ಮೂಲಕವೇ ಅವರು ಎಲ್ಲಿ ಹೋದರು ಜನ ಅವರನ್ನು ಗುರುತಿಸುವಂತಾಯಿತು. ಇನ್ನೂ ಅವರು ತಾವು ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ಗಟ್ಟಿಮೇಳ ಧಾರಾವಾಹಿ ಕಾರಣ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಈ ಧಾರಾವಾಹಿಯು ನಟ ರಂಜನ್ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು ಎಂದು ಹೇಳಬಹುದು. ಇನ್ನು ಇವರಿಗೆ ಕನ್ನಡದ ನಟರಲ್ಲಿ ನಿಮಗೆ ಯಾರು ತುಂಬಾ ಇಷ್ಟ ಎಂದು ಕೇಳಿದರೆ ಅವರು ಉತ್ತರಿಸುವ ಒಂದೇ ಹೆಸರು ಪುನೀತ್ ರಾಜಕುಮಾರ್. ಹೌದು ಅವರಿಗೆ ಪುನೀತ್ ರಾಜಕುಮಾರ್ ಎಂದರೆ ತುಂಬಾ ಇಷ್ಟವಂತೆ.

ಇನ್ನು ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ಹಾಗೂ ನಡತೆ ನನಗೆ ಸ್ಪೂರ್ತಿ ತಂದುಕೊಟ್ಟಿದೆ ಎಂದು ರಂಜನ್ ಹೇಳಿದ್ದಾರೆ. ಇನ್ನು ನಟ ರಂಜನ್ ಅವರು ಕೇವಲ ನಟರಾಗಿ ಅಷ್ಟೇ ಅಲ್ಲದೆ ಜಿಮ್ ಟ್ರೈನರ್ ಕೂಡ ಆಗಿದ್ದಾರೆ. ಹೌದು ಒಂದು ಜಿಮ್ ನಲ್ಲಿ ಅವರು ತರಬೇತಿಯನ್ನು ನೀಡುತ್ತಾರಂತೆ. ಹೀಗೆ ಒಂದರ ಮೇಲೆ ಒಂದು ಯಶಸ್ಸಿನ ಮೆಟ್ಟಿಲವನ್ನು ಏರುತ್ತ ಬಂದ ನಟರಾಜನ್ ಅವರಿಗೆ ಇದೀಗ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಕೂಡ ಒದಗಿಬರುತ್ತವೆಯಂತೆ. ಹೀಗೆ ಅವರಿಗೆ ಬೆಳ್ಳಿತೆರೆಯಲ್ಲಿ ಕೂಡ ಅಭಿನಯಿಸುವ ಅವಕಾಶಗಳು ಮತ್ತಷ್ಟು ಸಿಗಲಿ ಎಂದು ನಾವು ಈ ಮೂಲಕ ಹಾರೈಸೋಣ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *