ಡೈವೋರ್ಸ್ ಆಗಿದ್ದ ಮಹಿಳೆಯರನ್ನ ಮದುವೆಯಾಗಿರುವ ಭಾರತೀಯ ಕ್ರಿಕೇಟಿಗರು ಯಾರ್ಯಾರು ಗೊತ್ತೇ??

0

ನಮಸ್ಕಾರ ಸ್ನೇಹಿತರೇ ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ಹಲವರ ನಂಬಿಕೆ. ಆದರೇ ಸದ್ಯದ ಭಾರತೀಯ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ವಿಚ್ಛೇಧನ ಪ್ರಕರಣಗಳು ಕಂಡು ಬರುತ್ತಿವೆ. ಆದರೇ ವಿಚ್ಛೇದನ ಪಡೆದು ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವ ಹಲವರ ಜೀವನ ನೀರಿಕ್ಷೆಗಿಂತಲೂ ಉತ್ತಮವಾಗಿರುತ್ತದೆ. ಭಾರತೀಯ ಕ್ರಿಕೇಟ್ ಆಟಗಾರರಲ್ಲಿಯೂ ಸಹ ಹಲವಾರು ಜನ ವಿಚ್ಛೇದಿತ ಮಹಿಳೆಯರನ್ನು ವಿವಾಹವಾಗಿ ಸುಖಜೀವನ ನಡೆಸುತ್ತಿದ್ದಾರೆ. ಅಂತಹ ಕೆಲವು ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ಮೊದಲನೆಯದಾಗಿ ಶಿಖರ್ ಧವನ್ – ಗಬ್ಬರ್ ಖ್ಯಾತಿಯ ಏಡಗೈ ಬ್ಯಾಟ್ಸಮನ್ ಶಿಖರ್ ಧವನ್ 2012ರಲ್ಲಿ ಆಯೇಶಾ ಮುಖರ್ಜಿ ಎಂಬುವವರನ್ನ ವಿವಾಹವಾದರು. ಶಿಖರ್ ಗಿಂತ ವಯಸ್ಸಿನಲ್ಲಿ 10 ವರ್ಷ ದೊಡ್ಡವಾಗಿರುವ ಆಯೇಶಾ, ಶಿಖರ್ ಜೊತೆ ಮದುವೆಗಿಂತ ಮುಂಚೆ ವಿಚ್ಛೇಧನ ಪಡೆದು ಎರಡು ಹೆಣ್ಣುಮಕ್ಕಳ ತಾಯಿಯಾಗಿದ್ದರು. ಶಿಖರ್ ಮದುವೆಯಾದ ನಂತರ ಈ ದಂಪತಿ ಸುಂದರ ಸುಖಮಯ ಜೀವನ ನಡೆಸುತ್ತಿದ್ದಾರೆ.

ಎರಡನೆಯದಾಗಿ ಮುರಳಿ ವಿಜಯ್ – ಮುರಳಿ ಕತೆ ಸಂಪೂರ್ಣ ವಿಭಿನ್ನ. ಭಾರತೀಯ ಕ್ರಿಕೇಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಜೊತೆ ಮದುವೆಯಾಗಿದ್ದ ನಿಖಿತಾ ವಂಜಾರರವರ ಜೊತೆ ಸ್ನೇಹ ಬೆಳೆದು ಅದು ಪ್ರೇಮಕ್ಕೆ ತಿರುಗಿತು. ನಂತರ ಈ ಕಾರಣಕ್ಕೆ ದಿನೇಶ್ ಕಾರ್ತಿಕ್ ನಿಖಿತಾ ಜೊತೆ ವಿವಾಹಕ್ಕೆ ಅಂತ್ಯ ಹಾಡಿದರು. ನಂತರ ಮುರಳಿ ವಿಜಯ್ ನಿಖಿತಾರನ್ನ ಮದುವೆಯಾಗಿ ಈಗ ಚೆನ್ನೈನಲ್ಲಿ ಸುಖ ಸಂಸಾರ ನಡೆಸುತ್ತಿದ್ದಾರೆ.

ಮೂರನೆಯದಾಗಿ ಮಹಮದ್ ಶಮಿ – ವೇಗದ ಬೌಲರ್ ಶಮಿ 2014 ರಲ್ಲಿ ಹಸೀನ್ ಜಹಾನ್ ರವರನ್ನ ಮದುವೆಯಾದರು. ಹಸೀನ್ ಇದಕ್ಕೂ ಮುನ್ನ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆದು ಶಮಿಯವರನ್ನ ವರಿಸಿದ್ದರು. ಸದ್ಯ ಇಬ್ಬರ ನಡುವೆ ಸಂಭಂದ ಹಳಸಿದ್ದು, ವಿಚ್ಛೇಧನ ಪಡೆಯದೇ ಬೇರೆ ಬೇರೆಯಾಗಿ ವಾಸಿಸುತ್ತಾರೆಂದು ಮೂಲಗಳು ತಿಳಿಸಿವೆ.

ನಾಲ್ಕನೆಯದಾಗಿ ಅನಿಲ್ ಕುಂಬ್ಳೆ – ಭಾರತೀಯ ಕ್ರಿಕೇಟ್ ನ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಸಹ ವಿಚ್ಛೇದಿತ ಮಹಿಳೆಯನ್ನ ವಿವಾಹವಾಗಿದ್ದಾರೆ. 1999 ರಲ್ಲಿ ವಿವಾಹ ಬಂಧನಕ್ಕೊಳಗಾದ ಅನಿಲ್ ರವರ ಪತ್ನಿ ಚೇತನಾ ಈ ಮೊದಲು ಮೊದಲ ಪತಿಯಿಂದ ಒಂದು ಹೆಣ್ಣುಮಗುವಿನ ತಾಯಿಯಾಗಿದ್ದರು. ಸದ್ಯ ಇಬ್ಬರು ಸುಖಮಯ ಜೀವನ ನಡೆಸುತ್ತಿದ್ದಾರೆ.

ಐದನೆಯದಾಗಿ ವೆಂಕಟೇಶ್ ಪ್ರಸಾದ್ – ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ವೇಗದ ಬೌಲರ್ ವೆಂಕಟೇಶ್​ ಪ್ರಸಾದ್ 1996ರಲ್ಲಿ ಜಯಂತಿ ಅವರನ್ನು ವರಿಸಿದರು. ಮೊದಲ ವಿವಾಹದಿಂದ ವಿಚ್ಛೇದನ ಪಡೆದು ಹೊರಬಂದಿದ್ದ ಜಯಂತಿ ಹಾಗೂ ವೆಂಕಟೇಶ್ ಪ್ರಸಾದ್ ರವರನ್ನ ಭೇಟಿ ಮಾಡಿಸಿದ್ದೇ ಅನಿಲ್​ ಕುಂಬ್ಳೆ ಎನ್ನುವುದು ವಿಶೇಷ. ಈ ಇಬ್ಬರೂ ಈಗ ಸುಂದರ ಸುಖಮಯ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.