ಕೊನೆಗೂ ಸಿಕ್ಕಿತು ಖಚಿತ ಮಾಹಿತಿ, ಯುವರಾತನ್ ಪುನೀತ್, ರಾಬರ್ಟ್ ದರ್ಶನ ಇವರಿಬ್ಬರಲ್ಲಿ ಹೆಚ್ಚು ಸಂಭಾವನೆ ಪಡೆದವರು ಯಾರು ಗೊತ್ತೇ??

Cinema

ನಮಸ್ಕಾರ ಸ್ನೇಹಿತರೇ ಈ ವರ್ಷದಲ್ಲಿ ಅಷ್ಟೊಂದು ಕನ್ನಡ ಚಿತ್ರಗಳು ಬಿಡುಗಡೆಯಾಗದಿದ್ದರೂ ಸಹ 2 ಕನ್ನಡ ಚಿತ್ರಗಳು ಬಹಳಷ್ಟು ಸದ್ದು ಮಾಡಿವೆ. ಅದರಲ್ಲಿ ಮೊದಲನೆಯದು ಚಾಲೆಂಜಿಂಗ್ ಸ್ಟಾರ್ ದರ್ಶನ್ ದ ” ಡಿಬಾಸ್ ” ಅಭಿನಯದ ರಾಬರ್ಟ್ ಚಿತ್ರ . ಹೌದು ರಾಬರ್ಟ್ ಚಿತ್ರ ಬಿಡುಗಡೆಗೂ ಮೊದಲೇ ಸಾಕಷ್ಟು ಸದ್ದು ಮಾಡಿದ್ದಂತಹ ಚಿತ್ರ . ಕೇವಲ ಚೌಕ ಚಿತ್ರದ ಚಿಕ್ಕ ಪಾತ್ರದಿಂದ ಪ್ರಾರಂಭ ಡೆವಲಪ್ಮೆಂಟ್ ಒಂದು ಹಿಟ್ ಚಿತ್ರವನ್ನೆ ಕನ್ನಡ ಇಂಡಸ್ಟ್ರಿ ಗೆ ನೀಡಿತು.

ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದ, ಡಿಬಾಸ್ ಹಾಗೂ ಆಶಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಬರ್ಟ್ ಕೇವಲ ಜನರ ಮನಮಾತ್ರವಲ್ಲದೇ ಬಾಕ್ಸ್ ಆಫೀಸ್ ಕೂಡ ಪುಡಿಗಟ್ಟುವ ಮೂಲಕ ದಾಖಲೆ ನಿರ್ಮಿಸಿತ್ತು. ಕನ್ನಡದಲ್ಲಿ 100ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದರೆ, ಅತ್ತ ತೆಲುಗಿನಲ್ಲಿ ಕೂಡ ಸಖತ್ ಕಲೆಕ್ಷನ್ ಮಾಡಿ ಅಲ್ಲಿನ ಮಂದಿಯ ಮನಗೆದ್ದಿತ್ತು. ಕೇವಲ ಥಿಯೇಟರಿಕಲ್ ಮಾತ್ರವಲ್ಲದೇ , ಡಿಜಿಟಲ್ ಪ್ಲಾಟ್ ಫರ್ಮ್ ನಲ್ಲಿ ಕೂಡ ರಾಬರ್ಟ್ ಧೂಳೆಬ್ಬಿಸಿತ್ತು.

ಡಿಬಾಸ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ನ ರಾಬರ್ಟ್ ಪೈರಸಿಯ ನಡುವೆ ಕೂಡ ಒಂಟಿ ಸಲಗದಂತೆ ಗೆದ್ದು ಬೀಗಿತ್ತು. ಡಿಬಾಸ್ ರವರ ಎರಡು ಶೇಡ್ ನ ನಟನೆ, ಮಾಸ್ ಕ್ಲಾಸ್ ಕಾಂಬಿನೇಷನ್ , ನಟನೆ ಹಾಗೂ ಮರಿ ಟೈಗರ್ ವಿನೋದ್ ಪ್ರಭಾಕರ್ ರವರ ಪಾತ್ರ ಎಲ್ಲವೂ ಚಿತ್ರವನ್ನು ಇನ್ನಷ್ಟು ಜನರಿಗೆ ಹತ್ತಿರವಾಗುವಂತೆ ಮಾಡಿತ್ತು.

ಇನ್ನು ಎರಡನೇ ಚಿತ್ರದ ಬಗ್ಗೆ ಹೇಳೋದಾದ್ರೆ , ರಾಜಕುಮಾರ ಚಿತ್ರದಂತಹ ಇಂಡಸ್ಟ್ರಿ ಹಿಟ್ ಚಿತ್ರದ ನಂತರ ಮತ್ತೊಮ್ಮೆ ಬಹುನಿರೀಕ್ಷಿತ ಕಾಂಬಿನೇಷನ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ ಆನಂದರಾಮ್ ಇವರಿಬ್ಬರ ಸೂಪರ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಯುವರತ್ನ ಸಂಪೂರ್ಣವಾಗಿ ಶಿಕ್ಷಣ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತಿದ್ದ ಅವ್ಯವಹಾರ ಹಾಗೂ ವಿದ್ಯಾರ್ಥಿಗಳ ಪೋಷಕರು ಹೇಗೆ ತಮ್ಮ ಮಕ್ಕಳನ್ನು ಕಲಿಕೆಯ ನಿಟ್ಟಿನಲ್ಲಿ ಮಾರ್ಗದರ್ಶಕರಾಗಬೇಕೆಂಬ ಕಂಪ್ಲೀಟ್ ಸಾಮಾಜಿಕ ಕಳಕಳಿಯುಳ್ಳಂತಹ ಚಿತ್ರ.

ಪವರ್ ಸ್ಟಾರ್ ಪ್ರೊಫೆಸರ್ ಆಗಿ ವಿದ್ಯೆಯ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದವರ ವಿರುದ್ಧ ಹೋರಾಟ ಮಾಡೋ ರೀತಿ , ಅಪ್ಪು ರವರ ಡ್ಯಾನ್ಸ್, ಆಕ್ಷನ್ ಹಾಗೂ ಡೈಲಾಗ್ ಡೆಲಿವರಿ ಈ ಚಿತ್ರದಲ್ಲಿ ವಿಭಿನ್ನವಾಗಿ ಮೂಡಿಬಂದಿತ್ತು . ಸಂತೋಷ್ ಆನಂದರಾಮ್ ಕೂಡ ಮಿಸಸ್ ಆಂಡ್ ಮಿಸ್ಟರ್ ರಾಮಾಚಾರಿ ಹಾಗೂ ರಾಜಕುಮಾರ ಚಿತ್ರದ ನಂತರ ಯುವರತ್ನ ಚಿತ್ರದ ಮೂಲಕ ಹ್ಯಾಟ್ರಿಕ್ ಇಂಡಸ್ಟ್ರಿ ಹಿಟ್ ನಿರ್ದೇಶಕರಾಗುವ ಕನಸು ಕಂಡಿದ್ದರು .

ಆದರೆ ಕರೋನಾದ 2ನೇ ಅಲೆ ಈ ಕನಸನ್ನು ನುಚ್ಚು ನೂರು ಮಾಡಿತ್ತು. ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಉತ್ತಮ ಪಾಸಿಟಿವ್ ರಿಪೋರ್ಟ್ ಗಳನ್ನು ಸಹ ಪಡೆದಿತ್ತು. ಥಿಯೇಟರ್ ನಲ್ಲಿ ತಪ್ಪಿದರೇನಾಯಿತು , ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಕೆಜಿಎಫ್ ಚಾಪ್ಟರ್ 1 ಗೂ ಮೀರಿದ ವ್ಯಾಪಾರ ಮಾಡಿ ಕನ್ನಡ ಚಿತ್ರರಂಗದ ಇತಿಹಾಸದ ಯುವರತ್ನ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಸ್ವತಃ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟ್ ನ ಪ್ರಕಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಯುವರತ್ನ ಚಿತ್ರಕ್ಕಾಗಿ ಪಡೆದಂತಹ ಸಂಭಾವನೆ , ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರಾಬರ್ಟ್ ಗಾಗಿ ಪಡೆದಿರುವ ಸಂಭಾವನೆಗಿಂತ ಜಾಸ್ತಿ ಎಂಬುದು. ಆದರೆ ನಿಜವಾಗಿ ಇವರಿಬ್ಬರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಸುದ್ದಿ ತಪ್ಪು. ಈ ಸಂಭಾವನೆ ರೇಸ್ ನಲ್ಲಿ ಪವರ್ ಸ್ಟಾರ್ ರವರನ್ನು ಚಾಲೆಂಜಿಂಗ್ ಸ್ಟಾರ್ ಹಿಂದಿಕ್ಕಿದ್ದಾರೆ. ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಯುವರತ್ನ ಚಿತ್ರಕ್ಕಾಗಿ ತೆಗೆದುಕೊಂಡ ಸಂಭಾವನೆ 8 ಕೋಟಿಯಾದರೆ, ಇತ್ತ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ರಾಬರ್ಟ್ ಚಿತ್ರಕ್ಕೆ ಪಡೆದಂತಹ ಸಂಭಾವನೆ 16 ಟೋಟಿ. ಸೋ ಹಾಗಾಗಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ಧಿಯನ್ನು ನಂಬುವ ಅವಶ್ಯಕತೆಯಿಲ್ಲ. ಈ ರೇಸ್ ನಲ್ಲಿ ಡಿಬಾಸ್ ಡಬಲ್ ಮಾರ್ಜಿನ್ ನಿಂದ ಗೆದ್ದಿದ್ದಾರೆ.

Leave a Reply

Your email address will not be published. Required fields are marked *