ಥೇಟ್ 20 ವರ್ಷದ ಹುಡುಗಿಯಂತೆ ಕಾಣುವ ನಮ್ರತಾ ಗೌಡ ರವರ ನಿಜವಾದ ವಯಸ್ಸೆಷ್ಟು ಗೊತ್ತೇ??

Cinema

ನಮಸ್ಕಾರ ಸ್ನೇಹಿತರೇ ಈಗಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ನಾಯಕ ನಟಿಯರ ಹೆಸರು ವೀಕ್ಷಕರಿಗೆ ಗೊತ್ತೋ ಇಲ್ವೋ , ಆದರೆ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರವಾಹಿಗಳಲ್ಲಿ ನಟಿಸುವ ನಟಿಯರ ಪರಿಚಯವಂತೂ ವೀಕ್ಷಕರಿಗೆ ಪಕ್ಕಾ ಗೊತ್ತಿರುತ್ತದೇ . ಅವರ ನಿಜವಾದ ಹೆಸರು ಗೊತ್ತಿರುತ್ತೋ ಇಲ್ಲವೋ ಕೊನೇ ಪಕ್ಷ ಅವರ ಧಾರವಾಹಿಗಳಲ್ಲಿ ಬಂದಿರುವ ಪಾತ್ರದ ಹೆಸರನಿಂದಂತೂ ಕೂಗಿ ಕರೆದೇ ಕರೆಯುತ್ತಾರೆ.

ಕರ್ನಾಟಕದಲ್ಲಿ ಸಿನಿಪ್ರಿಯರಷ್ಟೇ ಸೀರಿಯಲ್ ಪ್ರಿಯರು ಕೂಡ ಇದ್ದಾರೆ. ಕನ್ನಡ ಕಿರುತೆರೆಯಲ್ಲಿ ಕೂಡ ಅದೆಷ್ಟೋ ಪ್ರತಿಭೆಗಳಿವೆ ಅದರಲ್ಲಿ ಪುಟ್ಟಗೌರಿ ಮದುವೆ ಮೂಲಕ ಜನಪ್ರಿಯತೆಯನ್ನು ಪಡೆದು ಕೊಂಡ ನಮ್ರತಾ ಗೌಡ ಕೂಡ ಒಬ್ಬರು. ಧಾರಾವಾಹಿಗಳಲ್ಲಿ ನಟನೆ ಮಾಡಿ ಉತ್ತಮ ಕಲಾವಿದೆ ಎನಿಸಿಕೊಂಡಿದ್ದಾರೆ. ಹೀಗೆ ವಿವಿಧ ಧಾರಾವಾಹಿಗಳಲ್ಲಿ ನಟನೆ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದು ಕೊಂಡು ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಭಾಗ-2 ಧಾರಾವಾಹಿಯಲ್ಲಿ ನಾಯಕಿ ನಟಿಯಾಗಿ ಮಿಂಚುತ್ತಿದ್ದಾರೆ. ಜನರ ಮನಗೆದ್ದು ಭವಿಷ್ಯದ ಸ್ಟಾರ್ ನಟಿಯಾಗುವ ಸುಳಿವನ್ನು ನೀಡಿದ್ದಾರೆ.

ಧಾರವಾಹಿಗಳಲ್ಲಿ ನಟನೆಯ ಮಾಡಿಯೇ ನಮ್ರತಾ ಗೌಡ ಈಗಾಗಲೇ ಈ ಮಟ್ಟಿಗೆ ಯಶಸ್ಸು ಹಾಗೂ ಜನರಿಂದ ಅಪಾರ ಪ್ರಮಾಣದಲ್ಲಿ ಮೆಚ್ಚುಗೆ ಹಾಗೂ ಫ್ಯಾನ್ ಫಾಲೋವಿಂಗ್ ಹೊಂದಿದ್ದು , ಇನ್ನು ಚಿತ್ರರಂಗಕ್ಕೆ ಎಂಟ್ರಿ ನೀಡಿದರೆ ಖಂಡಿತವಾಗಿಯೂ ಧೂಳೆಬ್ಬಿಸೋದು ಗ್ಯಾರಂಟಿ. ನಮ್ರತಾ ಗೌಡ ಹುಟ್ಟಿ ಬೆಳೆದಿದ್ದು ರಾಜಧಾನಿ ಬೆಂಗಳೂರಿನಲ್ಲಿ. ಆಚಾರ್ಯ ಎನ್ ಆರ್ ವಿ ಕಾಲೇಜಿನಿಂದ ಪದವಿಯನ್ನು ಪಡೆದು ಕೊಂಡಿರುವ ನಮ್ರತಾ ಗೌಡ ರವರು ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ತದ ನಂತರ ಪುಟ್ಟಗೌರಿ ಮದುವೆ ಯಲ್ಲಿ ಹಿಮಾ ಪಾತ್ರದಲ್ಲಿ ನಟಿಸುವ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು. ಅದ್ಭುತವಾಗಿ ಡ್ಯಾನ್ಸ್ ಕೂಡ ಮಾಡುವ ನಮ್ರತಾ ರವರು ತಕದಿಮಿತ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಟಾಪ್ ಐದರ ಸ್ಪರ್ಧಿಗಳಲ್ಲಿ ಹೆಸರು ಪಡೆದು ಕೊಂಡಿದ್ದರು.

ಕೇವಲ ಅಮೋಘ ನಟನೆಯಿಂದ ಮಾತ್ರವಲ್ಲದೆ , ಅದ್ಭುತ ಡ್ಯಾನ್ಸಿಂಗ್ ಸ್ಕಿಲ್ಸ್ ನ್ನು ಹೊಂದಿರುವ ನಮ್ರತಾ ರವರ ಮುಂದಿನ ಭವಿಷ್ಯ ಉಜ್ವಲವಾಗಿದೆ ಎಂಬುದೇ ಎಲ್ಲರ ಚರ್ಚೆಯಾಗಿದೆ. ಇಷ್ಟೆಲ್ಲಾ ಪ್ರತಿಭಾನ್ವಿತೆ ಹಾಗೂ ಸುಂದರಿಯಾಗಿರುವ ನಮ್ರತಾ ರವರ ವಯಸ್ಸು ನೋಡಲು 20 ವರ್ಷದಂತೆ ಕಂಡರೂ ಈಕೆ 27ವರ್ಷದವರು. ಈಗಾಗಲೇ ಟೆಲಿವಿಷನ್ ರಂಗದಲ್ಲಿ ಭರವಸೆಯ ನಟಿಯಾಗಿ ಹೆಸರು ಮಾಡಿರುವ ಈಕೆ ಇನ್ನು ಮುಂದಿನ ದಿನಗಳಲ್ಲಿ ಸ್ಟಾರ್ ನಟಿಯಾಗಿ ಕಾಣಿಸಿಕೊಂಡರೂ ಆಶ್ಚರ್ಯ ಪಡಬೇಕಾಗಿದ್ದಿಲ್ಲ.

Leave a Reply

Your email address will not be published. Required fields are marked *