ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರವರ ಅರಮನೆ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

Cinema

ನಮಸ್ಕಾರ ಸ್ನೇಹಿತರೇ ಈಗ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿತ್ರರಂಗವೆಂದರೆ ನಿಸ್ಸಂಶಯವಾಗಿ ಅದು ತೆಲುಗು ಭಾಷೆಯ ಟಾಲಿವುಡ್ ಚಿತ್ರರಂಗ. ಈ ಚಿತ್ರರಂಗದಲ್ಲಿ ಈಗ ಬಿಗ್ ಬಜೆಟ್ ನ ಸಿನಿಮಾಗಳ ಹೊಳೆಯ ಹರಿಯಲು ಪ್ರಾರಂಭವಾಗಿದೆ. ಹೌದು ಇಲ್ಲಿನ ಶ್ರೀಮಂತಿಕೆ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲದೆ ಇಲ್ಲಿನ ನಟರು ಕೂಡ ಭರ್ಜರಿಯಾಗಿ ಸಂಭಾವನೆ ಪಡೆದು ತಮ್ಮ ಶ್ರೀಮಂತಿಕೆಯನ್ನು ಹೊಂದಿದ್ದಾರೆ. ಇಂದು ಇದೇ ಸಾಲಿನಲ್ಲಿರುವ ಒಬ್ಬ ಸ್ಟಾರ್ಟರ್ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ.

ಹೌದು ನಾವಿಂದು ಹೇಳಲು ಹೊರಟಿರುವುದು ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಸ್ಟೈಲಿಶ್ ಸ್ಟಾರ್ ಎಂದು ಖ್ಯಾತರಾಗಿರುವ ಡ್ಯಾನ್ಸಿಂಗ್ ಐಕಾನ್ ಅಲ್ಲು ಅರ್ಜುನ್ ರವರ ಬಗ್ಗೆ. ಹೌದು ಅಲ್ಲು ಅರ್ಜುನ್ ಇಡೀ ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ನಟ ಹಾಗೂ ಡ್ಯಾನ್ಸರ್ ಎಂದೇ ಹೇಳಬಹುದು. ನಟ ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟ ಅಲ್ಲು ಅರವಿಂದ್ ರವರ ಪುತ್ರ.

ಇವರಿಗೆ ಅಲ್ಲು ಸಿರೀಶ್ ಎಂಬ ಸಹೋದರ ಕೂಡ ಇದ್ದಾರೆ. ಅಲ್ಲು ಅರ್ಜುನ್ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 2003ರಲ್ಲಿ ಬಿಡುಗಡೆಯಾದ ಗಂಗೋತ್ರಿ ಎಂಬ ಚಿತ್ರದ ಮೂಲಕ. ನಂತರದ ದಿನಗಳಲ್ಲಿ ಅಂದರೆ ಒಂದು ವರ್ಷದ ನಂತರ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನದ ಆರ್ಯ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದರು. ಇದರಿಂದ ಅವರು ಆಂಧ್ರ ಪ್ರದೇಶದ ಅತ್ಯುನ್ನತ ಸಿನಿಮಾ ಪ್ರಶಸ್ತಿಯಾದ ನಂದಿ ಅವಾರ್ಡ್ಸ್ ಅನ್ನು ಗೆದ್ದರು. ಇದಾದ ನಂತರ ಅವರು ಹಲವಾರು ಚಿತ್ರಗಳನ್ನು ನಟಿಸಿ ನಿರ್ಮಿಸಿ ಕೂಡ ಇದ್ದಾರೆ.

ಇವರು ನಟಿಸಿರುವ ರೇಸ್ ಗುರ್ರಮ್, ಸರೈನೋಡು, ಡಿಜೆ ಚಿತ್ರಗಳು ಬಾಕ್ಸಾಫೀಸಿನಲ್ಲಿ ನೂರು ಕೋಟಿಯ ಕ್ಲಬ್ ಗೆ ಸೇರಿದವು. ಈ ಚಿತ್ರಗಳು ಇವರ ಅಭಿಮಾನಿ ಬಳಗದ ಪವರ್ ಅನ್ನು ಇಡೀ ಚಿತ್ರರಂಗಕ್ಕೆ ತೋರಿಸಿಕೊಟ್ಟಿದ್ದು. ಇದಾದ ನಂತರ ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಅಲಾ ವೈಕುಂಠ ಪುರಂಲೋ ಚಿತ್ರ ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 262 ಕೋಟಿ ರೂಪಾಯಿಗಳನ್ನು ಗಳಿಸಿತು. ಇನ್ನು ಅಲ್ಲು ಅರ್ಜುನ್ ರವರು 2011ರಲ್ಲಿ ಸ್ನೇಹ ರೆಡ್ಡಿ ಎಂಬುವರೊಂದಿಗೆ ವಿವಾಹಕ್ಕೆ ಒಳಗಾದರು.

ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಕೂಡ ಇವರಿಗೆ ಜನಿಸಿದೆ. ಇಡೀ ಸೌತ್ ಇಂಡಿಯಾದಲ್ಲಿ ಟಾಪ್ ಸ್ಟಾರ್ ಆಗಿ ಮೆರೆಯುತ್ತಿರುವ ಅಲ್ಲುಅರ್ಜುನ್ ರವರ ಸಂಭಾವನೆ ಹಾಗೂ ಅವರ ಮನೆಯ ಬೆಲೆ ಎಷ್ಟೆಂದು ಗೊತ್ತೇ. ಅದನ್ನು ಕೂಡ ಹೇಳ್ತೀವಿ ಬನ್ನಿ. ತೆಲುಗು ಟಾಪ್ ನಟರಾಗಿರುವ ಅಲ್ಲು ಅರ್ಜುನ್ ನಿರ್ಮಾಪಕರು ಹಾಗೂ ನಿರ್ದೇಶಕರ ಬಹುಬೇಡಿಕೆ ನಟ. ಸಿನಿಮಾ ಹಿನ್ನೆಲೆಯಿಂದ ಬಂದಿದ್ದರೂ ಸಹ ತನ್ನ ಸ್ವಂತ ಪ್ರತಿಭೆಯಿಂದ ಇಷ್ಟೊಂದು ಸಾಧಿಸಿದ್ದಾರೆ. ಇವರು ಪ್ರತಿ ಸಿನಿಮಾಗೆ ಪಡೆದುಕೊಳ್ಳುವ ಸಂಭಾವನೆ ಬರೋಬ್ಬರಿ 30 ಕೋಟಿ ರೂಪಾಯಿಗಳು.

ಇನ್ನು ಇವರ ಮನೆ ಬರೋಬ್ಬರಿ 100 ಕೋಟಿ ಮೌಲ್ಯದ್ದಾಗಿದೆ. ಪಾಶ್ಚಾತ್ಯ ದೇಶಗಳ ವಿನ್ಯಾಸದಂತೆ ನಿರ್ಮಾಣಗೊಂಡಿರುವ ಈ ಮನೆ ಯಾವುದೇ ಅರಮನೆಗೆ ಕಮ್ಮಿ ಇಲ್ಲದಂತೆ ಮೂಡಿಬಂದಿದೆ. ಈ ಮನೆಯಲ್ಲಿ ಕೇವಲ ಅಲ್ಲು ಅರ್ಜುನ್ ದಂಪತಿಗಳು ಮಾತ್ರವಲ್ಲದೆ ಅವರ ಇಡೀ ಫ್ಯಾಮಿಲಿ ನೆಲೆಸುತ್ತದೆ. ಸದ್ಯ ಅಲ್ಲು ಅರ್ಜುನ್ ರವರು ಸುಕುಮಾರ್ ಹಾಗೂ ರಶ್ಮಿಕ ಮಂದಣ್ಣ ಇರುವ ಅವರ ಮುಂದಿನ ಚಿತ್ರ ಪುಷ್ಪ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರ ಫ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್ ರವರ ಈ ಮಾಹಿತಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ.

Leave a Reply

Your email address will not be published. Required fields are marked *