ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿ ಅಸಮಾಧಾನ ವ್ಯಕ್ತ ಪಡಿಸಿದ ಯುವರಾಜ್. ಯಾಕೆ ಗೊತ್ತೇ??

sports

ನಮಸ್ಕಾರ ಸ್ನೇಹಿತರೇ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹತ್ತಿರವಾಗುತ್ತಿದ್ದಂತೆ ಆಟಗಾರರ ಮಧ್ಯೆ ಮಾತಿನ ಕಾವು ಜೋರಾಗಿದೆ. ಹಲವಾರು ಮಾಜಿ ಕ್ರಿಕೇಟರ್ ಗಳು ಈಗ ಪಂದ್ಯದ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹಾಗೂ ಸಲಹೆ, ಸೂಚನೆಗಳನ್ನ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್ ಐಸಿಸಿ ನಿಯಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ದೊಡ್ಡ ಸರಣಿಯ ಫಲಿತಾಂಶವನ್ನು ಒಂದು ಪಂದ್ಯದ ಮೂಲಕ ನಿರ್ಧರಿಸುವುದು ಸರಿಯಲ್ಲ, ಇದರ ಬದಲು ಮೂರು ಪಂದ್ಯಗಳ ಸರಣಿ ಏರ್ಪಡಿಸಿ ಆ ಮೂಲಕ ವಿಜೇತರನ್ನ ಗುರುತಿಸಬಹುದಿತ್ತು ಎಂದು ಹೇಳಿದ್ದರು. ಎರಡು ದಿನಗಳ ಹಿಂದೆ ಭಾರತ ತಂಡದ ಕೋಚ್ ರವಿಶಾಸ್ತ್ರಿ ಸಹ ಇದೇ ಮಾತನ್ನು ಹೇಳಿದ್ದರು. ರವಿಶಾಸ್ತ್ರಿಯವರ ಹೇಳಿಕೆಯನ್ನು ಯುವರಾಜ್ ಸಿಂಗ್ ಬೆಂಬಲಿಸಿದ್ದಾರೆ.

ಇನ್ನು ಪಂದ್ಯದ ಬಗ್ಗೆ ಮಾತನಾಡಿರುವ ಯುವಿ, ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚು ವರವಾಗುವ ಸಾಧ್ಯತೆಯಿದೆ. ಆ ತಂಡ ಇಂಗ್ಲೆಂಡ್ ತಂಡದ ವಿರುದ್ದ ಎರಡು ಟೆಸ್ಟ್ ಪಂದ್ಯವಾಡುವ ಕಾರಣ, ಟೆಸ್ಟ್ ಕ್ರಿಕೇಟ್ ಆಡಲು ಎಲ್ಲಾ ಥರ ಸಿದ್ದವಾಗಿದೆ. ಆದರೇ ಭಾರತ ತಂಡ ಏಕಾಏಕಿ ಇಂತಹ ದೊಡ್ಡ ಸರಣಿಯ ಟೆಸ್ಟ್ ಆಡುವುದು ಸ್ವಲ್ಪ ಕಷ್ಟವಾಗುತ್ತದೆ. ಇದರ ಜೊತೆ ಭಾರತ ತಂಡದ ಆರಂಭಿಕ ಬ್ಯಾಟ್ಸಮನ್ ಗಳಾದ ಶುಭಮಾನ್ ಗಿಲ್ ಮತ್ತು ರೋಹಿತ್ ಶರ್ಮಾ ಇದೇ ಮೊದಲ ಭಾರಿ ಇಂಗ್ಲೆಂಡ್ ನಲ್ಲಿ ಟೆಸ್ಟ್ ನಲ್ಲಿ ಆರಂಭಿಕರಾಗಿ ಆಡುತ್ತಿದ್ದಾರೆ. ಇದು ಸಹ ಕೊಂಚ ಹಿನ್ನಡೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಯುವರಾಜ್ ಸಿಂಗ್ ರವರ ಈ ಅಭಿಪ್ರಾಯಕ್ಕೆ ನಿಮ್ಮ ಮುಕ್ತ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *