ಗಟ್ಟಿಮೇಳ ಖ್ಯಾತಿಯ ಅನ್ವಿತಾ ಸಾಗರ್ ಹೊಂದಿರುವ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?? ನಿಜಕ್ಕೂ ಶಾಕ್ ಆಗ್ತೀರಾ.

Cinema

ನಮಸ್ಕಾರ ಸ್ನೇಹಿತರೇ ಇದೀಗ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು, ಅಂತಹ ಧಾರವಾಹಿಗಳಲ್ಲಿ ಗಟ್ಟಿಮೇಳ ಧಾರವಾಹಿ ಕೂಡ ಪ್ರಮುಖವಾದದ್ದು. ಹೌದು ಸಾಕಷ್ಟು ಫೇಮಸ್ ಕಲಾವಿದರನ್ನು ಒಳಗೊಂಡಿರುವ ಈ ಧಾರವಾಹಿ ಇದೀಗ ಜನಮೆಚ್ಚಿದ ಧಾರಾವಾಹಿಗಳಲ್ಲಿ ಟಾಪ್ ಸ್ಥಾನ ಪಡೆದಿದೆ. ಇನ್ನು ಈ ಧಾರಾವಾಹಿಯ ಚಿತ್ರಕಥೆ, ಸಂಭಾಷಣೆ ಹಾಗೂ ತಾರಾಬಳಗದ ಜನರಿಗೆ ತುಂಬಾ ಇಷ್ಟವಾಗಿದೆ.

ಇನ್ನೂ ಧಾರವಾಹಿಯಲ್ಲಿ ಸಾಕಷ್ಟು ಪಾತ್ರಗಳು ಜನರ ಮನಸ್ಸನ್ನು ಗೆದ್ದು ಅವುಗಳಲ್ಲಿ ಅಭಿನಯಿಸುತ್ತಿರುವ ನಟಿಯರು ಕೂಡ ಸಾಕಷ್ಟು ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದಾರೆ. ಈ ಧಾರವಾಹಿಯಲ್ಲಿ ವೇದಾಂತ ಪಾತ್ರದಲ್ಲಿ ರಕ್ಷಿತ ಗೌಡ ಅವರು ಅಭಿನಯಿಸಿದರೆ, ಅಮೂಲ್ಯ ಪಾತ್ರದಲ್ಲಿ ನಟಿ ನಿಶಾ ರವಿಕೃಷ್ಣನ್ ಅವರು ನಟಿಸುತ್ತಿದ್ದಾರೆ. ಇವರಷ್ಟೇ ಅಲ್ಲದೇ ಸಾಕಷ್ಟು ಜನರು ಕೂಡಾ ಜನಪ್ರಿಯತೆ ಪಡೆದು ಕೊಂಡಿದ್ದಾರೆ.

ಇನ್ನು ಗಟ್ಟಿಮೇಳ ಧಾರಾವಾಹಿಯಲ್ಲಿ ಜನಪ್ರಿಯತೆ ಪಡೆದುಕೊಂಡ ಪಾತ್ರಗಳಲ್ಲಿ ಆದ್ಯ ಪಾತ್ರ ಕೂಡ ಒಂದು. ಈ ಪಾತ್ರವನ್ನು ನೋಡಿದ ಸಾಕಷ್ಟು ಜನರು ಇಂತಹ ತಂಗಿ ನನಗೂ ಇರಬೇಕಿತ್ತು. ಇಂತಹ ಸೊಸೆ ನನಗೂ ಇರಬೇಕಿತ್ತು. ಇಂತಹ ಮಗಳು ಬೇಕು ಎಂದುಕೊಳ್ಳುವುದು ಸತ್ಯ. ಅಷ್ಟರಮಟ್ಟಿಗೆ ಆಧ್ಯಾ ಪಾತ್ರ ಜನರಿಗೆ ಇಷ್ಟವಾಗಿದೆ. ಇನ್ನು ಈ ಪಾತ್ರದಲ್ಲಿ ನಟಿಸುತ್ತಿರುವ ನಟಿ ನಿಜವಾದ ಹೆಸರು ಅನ್ವಿತಾ ಸಾಗರ್.

ಹೌದು ಅನ್ವಿತಾ ಸಾಗರ್ ಅವರು ಮೂಲತಃ ಸಾಗರ್ ನವರು. ಮೊದಮೊದಲಿಗೆ ತುಳು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದವರು ನಂತರದಲ್ಲಿ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಮೊದಮೊದಲು ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ಅವರು ಇದೀಗ ಗಟ್ಟಿಮೇಳ ಧಾರವಾಹಿಯ ಮೂಲಕ ಧಾರಾವಾಹಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಅನ್ವಿತಾ ಸಾಗರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು ಸಾಕಷ್ಟು ಫ್ಯಾನ್ ಪೇಜುಗಳನ್ನು ಕೂಡ ಹೊಂದಿದ್ದಾರೆ.

ಇದೀಗ ಅನ್ವಿತಾ ಸಾಗರ್ ಅವರು ತಮ್ಮ ಕುಟುಂಬದೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನು ಇವರ ತಂದೆ ಯೊಬ್ಬರು ಶ್ರೀಮಂತ ಉದ್ಯಮಿ. ಇನ್ನು ಇವರಿಗೆ ಸಹೋದರ ಕೂಡ ಇದ್ದಾನೆ. ಇವರು ಕೂಡ ನಟರಾಗಿದ್ದ ತುಳು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇವರ ಕುಟುಂಬ ಮೊದಲಿನಿಂದಲೂ ಶ್ರೀಮಂತ ಕುಟುಂಬ. ಅಷ್ಟೇ ಅಲ್ಲದೆ ಅನ್ವಿತಾ ಸಾಗರ್ ಅವರು ಆದ್ಯ ಎಂಬ ಐಷಾರಾಮಿ ಕೆಫೆ ಕೂಡ ಇಟ್ಟುಕೊಂಡಿದ್ದಾರೆ. ಹೀಗೆ ಕಿರುತೆರೆಯಲ್ಲಿ ಮಾತ್ರವಲ್ಲದೆ ಬಿಜಿನೆಸ್ ಕೂಡ ಅವರು ಮಾಡುತ್ತಿದ್ದಾರೆ. ಇದೀಗ ಗಟ್ಟಿಮೇಳ ಧಾರಾವಾಹಿಯಲ್ಲಿ ಮಿಂಚುತ್ತಿರುವ ಅನ್ವಿತಾ ಸಾಗರ್ ಅವರು ಆಧ್ಯ ಎಂತಲೇ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಇನ್ನು ಇದೇ ರೀತಿ ಯಶಸ್ಸನ್ನು ಪಡೆದ ಮತ್ತಷ್ಟು ಧಾರವಾಹಿಗಳಲ್ಲಿ ಅನ್ವಿತಾ ಸಾಗರ್ ಅವರು ಅಭಿನಯಿಸಲಿ ಎಂದು ನಾವು ಈ ಮೂಲಕ ಹಾರೈಸೋಣ.

Leave a Reply

Your email address will not be published. Required fields are marked *