ಕನ್ನಡದ ಖ್ಯಾತ ನಟಿ ಸುಮಿತ್ರಾ ಅವರ ಮಕ್ಕಳು ಕೂಡ ಖ್ಯಾತ ನಟಿಯರಂತೆ! ಅವರು ಯಾರು ಗೊತ್ತಾ??

32

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟಿಯರು ಹಲವರು ಸಿನಿಮಾಗಳಲ್ಲಿ ಭಿನ್ನವಾದ ಪಾತ್ರಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದಾರೆ. ಹೌದು ತಮ್ಮ ನಟನೆಯ ಮೂಲಕ ಸಾಕಷ್ಟು ಕನ್ನಡಿಗರ ಮನೆಮಾತಾಗಿರುವ ನಟಿಯರಲ್ಲಿ ನಟಿ ಸುಮಿತ್ರಾ ಕೂಡ ಒಬ್ಬರು. ಅನೇಕ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಸುಮಿತ್ರಾ ಅವರು ಇಂದಿಗೂ ಕೂಡ ಚಿತ್ರರಂಗದ ಬಹು ಬೇಡಿಕೆಯ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಇವರು ಸಪ್ಟೆಂಬರ್ 18 1953 ರಲ್ಲಿ ಮೈಸೂರಿನಲ್ಲಿ ಜನಿಸಿದರು. ಕರ್ನಾಟಕದಲ್ಲಿ ಜನಿಸಿದರು ಕೂಡ ನಟಿ ಸುಮಿತ್ರಾ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಮಾತ್ರ ತಮಿಳು ಸಿನಿಮಾದ ಮೂಲಕ. ಆನಂತರದಲ್ಲಿ ಅವರು ಮಲಯಾಳಂ, ಕನ್ನಡ, ತೆಲುಗು ಸಿನಿಮಾಗಳಲ್ಲಿ ಸುಮಾರು 1974 ರಿಂದ 1986 ವರೆಗೆ ನಾಯಕ ನಟಿಯಾಗಿ ನಡೆಸಿ ನಂತರ ಅವರು 1990 ರಿಂದ ಈಚೆಗೆ ಪೋಷಕ ನಟಿಯಾಗಿ ಗುರುತಿಸಿಕೊಂಡರು. ಅತ್ತೆಯಾಗಿ, ತಾಯಿಯಾಗಿ, ಮಕ್ಕಳಾಗಿ ಹೀಗೆ ನಾನಾ ಪಾತ್ರಗಳಲ್ಲಿ ಅವರು ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಇನ್ನು ಇವರು 1972ರ ಲ್ಲಿ ತಮಿಳು ಸಿನಿಮಾ ಒಂದರ ಮೂಲಕ ಬಣ್ಣದ ಲೋಕಕ್ಕೆ ಬಂದು, ನಂತರದ ದಿನಗಳಲ್ಲಿ ಕನ್ನಡ ಸೇರಿದಂತೆ ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲಿ ಕೂಡ ನಟಿಸಲು ಪ್ರಾರಂಭಿಸಿದರು. ಹೀಗೆ ಅವರು ಬಹುಭಾಷಾ ತಾರೆಯಾಗಿ ಜನಪ್ರಿಯತೆ ಪಡೆದರು. ಹೀಗೆ ಪರಭಾಷೆಗಳಲ್ಲಿ ಕೂಡ ತಮ್ಮ ನಟನೆಯ ಛಾಪನ್ನು ಮೂಡಿಸಿದವರು ಸುಮಾರು ಎರಡು ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ರಾಮಾಚಾರಿ ಚಿತ್ರದಲ್ಲಿ ನಟ ರವಿಚಂದ್ರನ್ ಅವರ ತಾಯಿಯ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ನಟಿ ಸುಮಿತ್ರಾ ಅವರು,

ನಂತರದಲ್ಲಿ ಕನ್ನಡದ ಅನೇಕ ಸ್ಟಾರ್ ನಟರಿಗೆ ತಾಯಿಯಾಗಿ ಪಾತ್ರಗಳನ್ನು ನಿರ್ವಹಿಸಿದರು. ಇನ್ನು ನಟಿ ಸುಮಿತ್ರಾ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಖ್ಯಾತ ನಿರ್ದೇಶಕ ಡಿ. ರಾಜೇಂದ್ರಬಾಬು ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ‘ಉಮಾಶಂಕರಿ’ ಹಾಗೂ ‘ನಕ್ಷತ್ರ’ ಎಂಬ ಇಬ್ಬರು ಮಕ್ಕಳಿದ್ದಾರೆ. ಉಮಾಶಂಕರಿ ಅವರು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಅಭಿನಯಿಸಿರುವ ‘ಉಪ್ಪಿ ದಾದಾ ಎಂ.ಬಿ.ಬಿ.ಎಸ್’ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಈ ಸಿನಿಮಾದ ನಂತರ ಅವರು ಅನೇಕ ಸಿನಿಮಾ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರರಂಗ ಮಾತ್ರವಲ್ಲದೆ ಕನ್ನಡ ಕಿರುತೆರೆಯಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಚಿಕ್ಕಮ್ಮ’ ಎಂಬ ಧಾರಾವಾಹಿಯ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಇನ್ನು ಸುಮಿತ್ರ ಅವರ ಎರಡನೆಯ ಮಗಳಾದ ನಕ್ಷತ್ರ ಕೂಡ ನಟಿಯಾಗಿದ್ದಾರೆ. ಹೌದು ನಕ್ಷತ್ರ ಅವರು ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 2009ರಲ್ಲಿ ಬಿಡುಗಡೆಯಾಗಿದ್ದ ‘ಗೋಕುಲ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ನಂತರದ ದಿನಗಳಲ್ಲಿ ಹರೇ ರಾಮ ಹರೇ ಕೃಷ್ಣ, ಕುಚಿಕು ಕುಚಿಕು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ ನಟಿ ಸುಮಿತ್ರಾ ಅವರ ಮಕ್ಕಳು ಕೂಡ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು ಅವರು ಕೂಡ ನಟಿಯಾಗಿದ್ದಾರೆ. ಇನ್ನು ಅವರ ಮಕ್ಕಳು ಇನ್ನೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಲಿ ಹಾಗೂ ನಟಿ ಸುಮಿತ್ರಾ ಅವರು ಇನ್ನೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಎಂದು ನಾವು ಈ ಮೂಲಕ ಹಾರೈಸೋಣ.

Get real time updates directly on you device, subscribe now.