ಬಾಹುಬಲಿ ಕಟ್ಟಪ್ಪ ಸತ್ಯರಾಜ್ ರವರ ಮಗಳು ಯಾರು ಗೊತ್ತೇ ?? ಈ ಅಪ್ರತಿಮ ಸುಂದರಿ ನಟಿಯಾರು ಗೊತ್ತೇ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗದ ತೆಗೆದುಕೊಂಡಾಗ ಅದರಲ್ಲಿ ದೊಡ್ಡ ಭಾಗವನ್ನು ಪಡೆಯುವುದು ಬಾಲಿವುಡ್ ಚಿತ್ರರಂಗ. ಬಾಲಿವುಡ್ ಎಂದಾಗ ನಮಗೆ ನೆನಪಿಗೆ ಬರುವುದು ಐಷಾರಾಮಿ ಹಾಗೂ ಶ್ರೀಮಂತಿಕೆ. ಬಿಗ್ ಬಜೆಟ್ ನ ಸಿನಿಮಾಗಳು ಮೊದಲಿಗೆ ತಯಾರಾಗಲು ಪ್ರಾರಂಭವಾಗಿದೆ ಬಾಲಿವುಡ್ನಲ್ಲಿ ಎಂದು ಹೇಳಬಹುದು. ಆದರೆ ಯಾವಾಗ ಆ ದಕ್ಷಿಣ ಭಾರತ ಚಿತ್ರರಂಗದ ಈ ಇಂಡಸ್ಟ್ರಿ ಸೆಡ್ಡು ಹೊಡೆಯಿತು ಆಗ ಬಾಲಿವುಡ್ ನ ಸ್ಥಾನಮಾನಗಳು ಕೊಂಚ ಶೇಕ್ ಆಗಲು ಸ್ಟಾರ್ಟ್ ಆಯ್ತು. ಹೌದು ಚಿತ್ರರಂಗ ಯಾವುದು ಗೊತ್ತೆ.

ದಕ್ಷಿಣ ಭಾರತದ ಅತ್ಯಂತ ದೊಡ್ಡ ಚಿತ್ರರಂಗ ಎಂದೇ ಹೇಳಬಹುದಾದ ತೆಲುಗು ಭಾಷೆಯ ಟಾಲಿವುಡ್ ಬಾಲಿವುಡ್ ಗೆ ಸೆಡ್ಡುಹೊಡೆದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದೊಡ್ಡದೊಡ್ಡ ಸಿನಿಮಾಗಳ ನಿರ್ಮಾಣಕ್ಕೆ ಕೈ ಹಾಕಿತು. ಅದರಲ್ಲಿ ಇತಿಹಾಸ ಪ್ರಸಿದ್ಧ ಬಾಹುಬಲಿ ಸರಣಿ ಚಿತ್ರಗಳು ಹೌದು. ರಾಜಮೌಳಿ ಎಂಬ ಮಹತ್ವಾಕಾಂಕ್ಷಿ ಇಂಡಸ್ಟ್ರಿ ಹಿಟ್ಸ್ ನಿರ್ದೇಶಕ ಟಾಲಿವುಡ್ ಚಿತ್ರರಂಗಕ್ಕೆ ದೊಡ್ಡ ಕನಸನ್ನು ಕಾಣುವ ಕನಸಿನ ವಿದ್ಯೆಯನ್ನು ಹೇಳಿಕೊಟ್ಟವರು.

ಅದರ ಪರಿಣಾಮವೇ ಬಾಹುಬಲಿ 1 ಬಾಹುಬಲಿ 2 ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿದಂತಹ ಚಿತ್ರಗಳು ಎಂಬ ಹಣೆಪಟ್ಟಿಯನ್ನು ಹೊತ್ತು ಇಂದಿಗೂ ದಕ್ಷಿಣ ಭಾರತ ಚಿತ್ರರಂಗ ತಲೆಯೆತ್ತಿ ನಿಲ್ಲುವಂತೆ ಮಾಡಿದೆ. ಬಾಹುಬಲಿ ಕೇವಲ ದಕ್ಷಿಣ ಭಾರತದಲ್ಲೇ ಅಥವಾ ಇಡೀ ಇಂಡಿಯಾದಲ್ಲೇ ಮಾತ್ರವಲ್ಲದೆ ಜಪಾನ್ ಚೀನಾ ಹಾಗೂ ಇನ್ನಿತರ ವಿದೇಶಗಳಲ್ಲೂ ಕೂಡ ಬಾಕ್ಸಾಫೀಸನ್ನು ಸಂಪೂರ್ಣವಾಗಿ ತನ್ನೆಡೆಗೆ ಸೆಳೆದುಕೊಂಡಿತ್ತು. ಬಾಹುಬಲಿ ಎಂದಾಗ ನಮಗೆ ನೆನಪಾಗುವುದು ರೆಬೆಲ್ ಸ್ಟಾರ್ ಪ್ರಭಾಸ್ ಅಥವಾ ರಾಣಾ ದಗ್ಗುಬಾಟಿ ಇನ್ನು ನಟಿಯರ ವಿಚಾರಕ್ಕೆ ಬಂದರೆ ತಮನ್ನಾ ಭಾಟಿಯಾ ಅಥವಾ ಅನುಷ್ಕಾ ಶೆಟ್ಟಿ.

ಇವರಷ್ಟೇ ಜನ ಮಾತ್ರವಲ್ಲದೆ ಇನ್ನೊಂದು ಪ್ರಮುಖ ಹೆಸರು ಈ ಚಿತ್ರದಲ್ಲಿ ನಮಗೆ ಕೇಳಿಸುತ್ತದೆ. ಹೌದು ಬಾಹುಬಲಿ ಇಡೀ ಜಗತ್ತನ್ನೇ ಕುತೂಹಲದ ಸಮುದ್ರದಲ್ಲಿ ಮುಳುಗುವಂತೆ ಮಾಡಿದ್ದು ಒಂದೇ ಒಂದು ಕಾರಣದಿಂದ. ಅದೇನೆಂದರೆ ಕಟ್ಟಪ್ಪ ಬಾಹುಬಲಿ ಅನ್ನು ಏಕೆ ಹತ ಮಾಡಿದ. ಆ ಕಟ್ಟಪ್ಪ ಪಾತ್ರದಾರಿ ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ನಟನಾಗಿ ಚಾಲ್ತಿಯಲ್ಲಿರುವ ಹಿರಿಯ ನಟ ಸತ್ಯರಾಜ್ ರವರು.

ಅಂದಿನ ಕಾಲದಿಂದಲೂ ಪೋಷಕ ನಟರಾಗಿ ಬಹುಬೇಡಿಕೆಯ ನಟ ಸತ್ಯರಾಜ ರವರು ಬಾಹುಬಲಿ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಈಗಂತೂ ಫುಲ್ ಬ್ಯುಸಿ ಆಗಿರುವ ನಟ ಸತ್ಯರಾಜ್. ಸತ್ಯರಾಜ್ ರವರು ಪೋಷಕ ನಟನಾಗಿ ಈಗಾಗಲೇ ಹಲವಾರು ವೀಕ್ಷಕರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ಹಾಗೂ ನಿರ್ದೇಶಕ ಹಾಗೂ ನಿರ್ಮಾಪಕರ ಮೊದಲಿನ ಆಯ್ಕೆಯಾಗಿದ್ದಾರೆ. ಇನ್ನು ಇವರ ಮಗಳು ಯಾರೆಂದು ಗೊತ್ತೇ. ಹೌದು ನಟನಾ ರಂಗದಲ್ಲಿ ಖ್ಯಾತವಾಗಿರುವ ಹಿರಿಯ ನಟ ಸತ್ಯರಾಜ್ ರವರ ಮಗಳ ಹೆಸರು ದಿವ್ಯ ಎಂದು. ಸತ್ಯರಾಜ್ ರವರ ಮಗಳು ದಿವ್ಯ ಕೂಡ ತುಂಬಾ ಸುಂದರವತಿ.

ತಂದೆಯ ನಟನೆಯನ್ನು ಚಿಕ್ಕವಯಸ್ಸಿನಿಂದಲೇ ನೋಡಿಕೊಂಡು ಬೆಳೆದವರು. ಹಾಗೂ ತಂದೆಯವರ ಪ್ರತಿಭೆ ಮಗಳ ಮೇಲೆ ಕೂಡ ಪ್ರಭಾವ ಬೀರಿತ್ತು. ಆದರೆ ದಿವ್ಯ ಚಿತ್ರರಂಗದ ಕ್ಷೇತ್ರಕ್ಕೆ ಹೋಗದೆ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಹೌದು ಸತ್ಯರಾಜ್ ರವರ ಮಗಳು ದಿವ್ಯ ಒಬ್ಬ ನ್ಯೂಟ್ರಿಷಿಯನ್. ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಹೆಸರನ್ನು ಹೊಂದಿದ್ದಾರೆ ದಿವ್ಯ. ನಟನ ಮಗಳು ನಟಿಯಾಗಬೇಕೆಂದು ಇಲ್ಲವಲ್ಲ ಸತ್ಯರಾಜ್ ರವರ ಮಗಳು ದಿವ್ಯ ತಾನಂದುಕೊಂಡಂತೆ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ನೋಡಿದ್ರಲ್ಲ ಸ್ನೇಹಿತರೆ ನಟ ಸತ್ಯರಾಜ್ ಅವರ ಮಗಳು ತಾನಂದುಕೊಂಡಂತೆ ಸಾಧಿಸಿರುವ ಕಥೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Get real time updates directly on you device, subscribe now.