ರಾತ್ರಿ ಮಲಗುವಾಗ ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನಿರಿ, 655 ವರ್ಷ ಬಂದರೂ ಮುದುಕರಂತಾಗದೆ ಗಟ್ಟಿಮುಟ್ಟಾಗಿ ಇರ್ತೀರ

1

ಈ ಪ್ಲಾಸ್ಟಿಕ್ ಯುಗದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟದ ಟಾಸ್ಕ್ ಆಗಿಬಿಟ್ಟಿದೆ. ಆರೋಗ್ಯ ಆಹಾರಗಳು ಎಷ್ಟೇ ನಮ್ಮ ಜೀವನದ ಆಮ್ಲಜನಕ ಎಂದು ಹೇಳಬಹುದು. ಯಾಕೆಂದರೆ ಈಗಿನ ಕಾಲದಲ್ಲಿ ಜನರು ಮನೆಯ ಆಹಾರಕ್ಕಿಂತ ಹೊರಗಿನ ಆಹಾರವನ್ನು ತಿನ್ನೋದು ಜಾಸ್ತಿಯಾಗಿದೆ. ಹಾಗಾಗಿ ಸಮತೋಲಿತ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಳ್ಳುವುದು ಈ ವೇಗದ ದುನಿಯಾದಲ್ಲಿ ಕಷ್ಟ ಎಂದರೆ ಅತಿಶಯೋಕ್ತಿಯಲ್ಲ.

ಆದ್ದರಿಂದ ನಾವು ಹೇಳ ಹೊರಟಿರುವ ವಿಷಯದ ಬಗ್ಗೆ ಗಮನವಿಟ್ಟು ಕೇಳಿ ಇದು ನಿಮ್ಮನ್ನು 65ನೇ ವಯಸ್ಸಿನಲ್ಲಿ ಕೂಡ 25ರ ಹರೆಯದ ಶಕ್ತಿಯನ್ನು ಹೊಂದಿರುವಂತೆ ಮಾಡುತ್ತದೆ. ನೀವು ಮಾಡಬೇಕಾಗಿರುವುದಿಷ್ಟೇ ನಾವು ಹೇಳುವ 5 ಪದಾರ್ಥಗಳನ್ನು ನೆನೆಸಿ ಪ್ರತಿನಿತ್ಯ ಬೆಳಗ್ಗೆ ತಿನ್ನಿ. 5 ಆರೋಗ್ಯಭರಿತ ಆಹಾರ ಯಾವುದು ಎಂದು ನಾವು ಹೇಳುತ್ತೇವೆ ಬನ್ನಿ. ಮೊದಲೆಲ್ಲಾ ನಮ್ಮ ಪೂರ್ವಜರಿಗೆ ಹಾಗೂ ಹಿರಿಯರಿಗೆ ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಅಥವಾ ಬಿಳಿ ಕೂದಲು ಎಲ್ಲ 60 ವರ್ಷ ವಯಸ್ಸಿನಲ್ಲಿ ಬರುತ್ತಿತ್ತು. ಆದರೆ ಈಗೆಲ್ಲಾ 30 35 ವರ್ಷಕ್ಕೆಲ್ಲಾ ದೇಹದಲ್ಲಿ ರೋಗ ಲಕ್ಷಣಗಳು ಹಾಗೂ ಬಿಳಿ ಕೂದಲು ಬರಲು ಪ್ರಾರಂಭವಾಗಿದೆ.

ಇಂದು ನಾವು ಹೇಳ ಹೊರಡುವ ವಸ್ತುಗಳನ್ನು ರಾತ್ರಿ ಮಲಗುವ ಮುನ್ನ ನೀರಲ್ಲಿ ನೆನೆಸಿಟ್ಟು ನಂತರ ಮಾರನೆ ದಿನ ಬೆಳಿಗ್ಗೆ ಬ್ರಶ್ ಮಾಡಿದ ನಂತರ ಅಂದರೆ ಖಾಲಿಹೊಟ್ಟೆಯಲ್ಲಿ ಸೇವಿಸುವುದರ ಮೂಲಕ ನಿಮಗೆ ಆರೋಗ್ಯದಲ್ಲಿ ಹಲವಾರು ಪ್ರಯೋಜನಗಳು ದೊರಕುತ್ತದೆ. ಹೌದು ಮೊದಲಿಗೆ ಒಂದು ಸ್ಪೂನ್ ನಷ್ಟು ಅಗಸೆ ಬೀಜವನ್ನು ನೆನಸಿಡಬೇಕು. ಇದರ ಉಪಯೋಗ ಹಲವಾರು ಇದೆ. ನಮ್ಮ ಮೆಂಟಲ್ ಹೆಲ್ತ್ ಅನ್ನು ಕಂಟ್ರೋಲ್ನಲ್ಲಿ ಇಡುತ್ತದೆ. ಅಲ್ಲದೆ ಹೃದಯದ ರಕ್ತ ಶುದ್ಧೀಕರಣ ಕಾರ್ಯದಲ್ಲಿ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಅಲ್ಲದೆ ಇದರಲ್ಲಿರುವ ಆಂಟಿ ಏಜಿಂಗ್ ಗುಣಾಂಶಗಳು ನಮ್ಮ ವಯಸ್ಸಾದರೂ ಕೂಡ ಅದು ಕಾಣದ ರೀತಿಯಲ್ಲಿ ನಮಗೆ ಪ್ರಯೋಜನಕಾರಿಯಾಗುತ್ತದೆ. ಅಲ್ಲದೆ ತಲೆಕೂದಲು ಉದುರದಂತೆ ತಲೆಯಲ್ಲಿ ಹೊಟ್ಟು ನಿಲ್ಲದಂತೆ ನಮಗೆ ಸಹಕಾರಿಯಾಗುತ್ತದೆ. ಇದು ಚರ್ಮದ ನೆರಿಗೆಗಳು ಮೂಡದಂತೆ ಹಾಗೂ ಚರ್ಮದಲ್ಲಿ ಮೊಡವೆಗಳು ಬಾರದಂತೆ ಹಾಗೂ ಮೊಡವೆ ಕಲೆಗಳು ಇರದಂತೆ ಕ್ಲೀನ್ ಮಾಡುತ್ತದೆ. ಹಾಗೂ ಮಹಿಳೆಯರಿಗೆ ಆ ಸಮಯದಲ್ಲಿ ನೋವು ಇರದಂತೆ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಶರೀರದಲ್ಲಿ ಹೆಚ್ಚಿಸಿ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕೂಡ ಕಡಿಮೆ ಮಾಡುತ್ತದೆ. ಇನ್ನು ಎರಡನೇ ಆಹಾರ ಪದಾರ್ಥ ಅಂದರೆ ಅದು ಒಣ ದ್ರಾಕ್ಷಿ.

ಒಣದ್ರಾಕ್ಷಿಯನ್ನು ಕೂಡ ಮುಂಚಿನ ದಿನ ನೆನೆಸಿಟ್ಟು ತಿನ್ನುವುದರಿಂದ ಜೀರ್ಣಕ್ರಿಯೆ ಹಾಗೂ ರೋಗ ಪ್ರತಿ ನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಾಗುತ್ತಿದೆ. ಇದನ್ನು ತಪ್ಪದೆ ಪ್ರತಿದಿನ ಮುಂಜಾನೆ ತೆಗೆದುಕೊಳ್ಳುವುದರಿಂದ ಉಸಿರಾಟದ ಸಮಸ್ಯೆ ಯನ್ನು ಕೂಡ ತಗ್ಗಿಸಿ ಕೊಳ್ಳಬಹುದು. ಇಷ್ಟು ಮಾತ್ರವಲ್ಲದೆ ಇದು ಸ್ನಾಯು ಹಾಗೂ ಮೂಲೆ ಸಮಸ್ಯೆಗಳಿಗೆ ಕೂಡ ರಾಮಬಾಣ. ಒಣ ದ್ರಾಕ್ಷಿ ಸೇವನೆ ಕೊಲೆಸ್ಟ್ರಾಲ್ ಅನ್ನು ತಗ್ಗಿಸಿ ಹೃದಯ ಸಂಬಂಧಿ ರೋಗಗಳನ್ನು ಪ್ರತಿರೋಧಿಸುವ ಲ್ಲಿ ಸಹಾಯಕಾರಿಯಾಗುತ್ತದೆ. ಇದರಲ್ಲಿರುವ ವಿಟಮಿನ್ ಅಂಶಗಳು ನಿಮ್ಮ ದೇಹದಲ್ಲಿರುವ ಸುಸ್ತನ್ನು ಕಡಿಮೆ ಮಾಡಿ ದೇಹದಲ್ಲಿ ಎನರ್ಜಿ ಲೆವೆಲ್ ಅನ್ನು ಜಾಸ್ತಿ ಮಾಡುತ್ತದೆ.

ಇನ್ನು ಮೂರನೇದಾಗಿ ಇದಕ್ಕೆ ನೀವು ಸೇರಿಸ ಬೇಕಾಗಿರೋದು ಒಂದು ಚಮಚದಷ್ಟು ಗಸಗಸೆ. ಇದರ ಉಪಯೋಗದಿಂದ ನಿಮ್ಮ ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ನಿಮಗೆ ನಿದ್ದೆ ಬರುವುದಿಲ್ಲ ಎಂಬ ಸಮಸ್ಯೆ ಇದ್ದರೆ ಈ ಗಸಗಸೆಯ ಸೇವನೆ ಖಂಡಿತ ನಿಮಗೆ ಸಹಕಾರಿಯಾಗುತ್ತದೆ ಹಾಗೂ ನಿಮ್ಮ ದೇಹದಲ್ಲಿರುವ ಉಷ್ಣತೆ ಅಂಶವನ್ನು ಕಡಿಮೆ ಮಾಡುತ್ತದೆ. ಅಸಿಡಿಟಿ ಸಮಸ್ಯೆಗೆ ಗಸಗಸೆ ಉಪಯೋಗ ತುಂಬಾ ಪ್ರಯೋಜನಕಾರಿ. ಹಾಗಂತ ಇದನ್ನು ಮನಬಂದಂತೆ ಸೇವಿಸುವುದಿಲ್ಲ ಕೇವಲ ಒಂದು ಸ್ಪೂನ್ ನಷ್ಟು ಮಾತ್ರ ಗಸಗಸೆ ಉಪಯೋಗಿಸುವುದು ಜೀವಕ್ಕೆ ಆರೋಗ್ಯಕರ.

ಇನ್ನು ಇದಕ್ಕೆ ಸೇರಿಸಬೇಕಾದ ನಾಲ್ಕನೆಯ ವಾಹನ ಪದಾರ್ಥ ಎಂದರೆ ಅದು ಮೆಂತ್ಯೆ ಕಾಳು. ಇದನ್ನು ರಾತ್ರಿ ನೆನೆಸಿ ಬೆಳಗ್ಗೆ ಸೇವಿಸುವುದರಿಂದ ಮಧುಮೇಹದ ಸಂಬಂಧಿತ ಕಾಯಿಲೆಗಳು ನಿವಾರಣೆಯಾಗುತ್ತದೆ. ಇದರ ಸೇವನೆ ಕೂಡ ಚರ್ಮರೋಗದ ನಿವಾರಣೆಗೆ ಪರ್ಫೆಕ್ಟ್ ಔಷಧಿ ಎಂದು ಹೇಳಬಹುದು. ಇದು ಕೂಡ ಕೊಬ್ಬಿನ ನಿವಾರಣೆಗೆ ಉತ್ತಮ ಆಹಾರ ಪದಾರ್ಥ ಎಂದು ಹೇಳಬಹುದು. ಇನ್ನು ಐದನೇ ವಸ್ತು ಇದಕ್ಕೆ ಹಾಕ ಬೇಕಾಗಿರುವುದು ಕಡಲೇಕಾಳು. ಇದರ ಉಪಯೋಗ ದೇಹದಲ್ಲಿ ಎನರ್ಜಿ ಲೆವೆಲ್ ಅನ್ನು ಹೆಚ್ಚಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಕೂಡ ಕ್ರಮೇಣವಾಗಿ ಜಾಸ್ತಿ ಮಾಡುತ್ತದೆ.

ದೇಹ ತೂಕವನ್ನು ಕಡಿಮೆ ಮಾಡಬೇಕೆಂದು ಬಯಸುವವರು ಇದನ್ನು ಸೇವಿಸಿದರೆ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳು ಅತಿವೇಗವಾಗಿ ಕಡಿಮೆಯಾಗುತ್ತದೆ. ಇದು ಕೂಡ ನಮ್ಮ ತ್ವಚೆಯಲ್ಲಿ ಹೊಸ ಕಾಂತಿಯನ್ನು ಮೂಡುವಂತೆ ಮಾಡುತ್ತದೆ. ಇವೆಲ್ಲವನ್ನು ಒಟ್ಟಿಗೆ ನೆನೆಸಿ ತಿನ್ನುವುದರಿಂದ ಹಾಗೂ ಇದರ ನೀರನ್ನು ಕೂಡ ಕುಡಿಯುವುದರಿಂದ ನಮ್ಮ ದೇಹದಲ್ಲಿ ಹಾಗೂ ಮುಖದಲ್ಲಿ 60 ವಯಸ್ಸು ದಾಟಿದರೂ ಯಾವುದೇ ವಯಸ್ಸಿನ ಸೂಚನೆ ಕಾಣುವುದಿಲ್ಲ ಹಾಗೂ ನಾವು ಸದಾ ಆರೋಗ್ಯದಿಂದ ಇರಲು ಆಹಾರ ಸೇವನೆ ಸಹಾಯಕಾರಿಯಾಗುತ್ತದೆ. ನೀವು ಕೂಡ ನಿಮ್ಮ ದಿನನಿತ್ಯದ ಜೀವನದಲ್ಲಿ ಆರೋಗ್ಯವಾದ ಆಹಾರ ಪದಾರ್ಥ ಸೇವನೆಯನ್ನು ಸೇವಿಸಲು ಪ್ರಾರಂಭಿಸಿ ಹಾಗೂ ಅದರ ಫಲಿತಾಂಶವನ್ನು ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.