ದಕ್ಷಿಣ ಭಾರತದ ಖ್ಯಾತ ನಟಿ ಸೌಂದರ್ಯ ಅವರ ಪತಿ ಇನ್ನೊಂದು ಮದುವೆಯಾಗಿರುವುದು ಯಾರನ್ನು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸುಮಾರು 80 90ರ ದಶಕದಲ್ಲಿ ಅದೆಷ್ಟು ನಟ ಹಾಗೂ ನಟಿಯರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಬಹುದು. ಇನ್ನು ಈ ದಶಕಗಳು ಚಿತ್ರರಂಗಕ್ಕೆ ಅದೃಷ್ಟದ ದಶಕಗಳು ಎಂದು ಕೂಡ ಹೇಳಬಹುದು. ಏಕೆಂದರೆ ಆ ಸಮಯದಲ್ಲಿ ಅದೆಷ್ಟೋ ನಟ ಹಾಗೂ ನಟಿಯರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅರವತ್ತು ದಶಕಗಳ ಕಾಲ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದವರು.

ಅಂತಹ ನಟಿಯರಲ್ಲಿ ಸೌಂದರ್ಯ ಕೂಡ ಒಬ್ಬರು. ಹೌದು ನಟಿ ಸೌಂದರ್ಯ ಅವರು ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಬಂದು ನಂತರದ ದಿನಗಳಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಖ್ಯಾತ ನಟಿಯಾಗಿ ತಮ್ಮ ಪ್ರತಿಭೆಯನ್ನು ಹೊರಹಾಕಿದವರು. ಸುಮಾರು 100ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ ನಟಿ ಸೌಂದರ್ಯ ಸೌಂದರ್ಯ ಅವರು ಚಿತ್ರರಂಗದಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಕೂಡ ತಮ್ಮ ಮುಡಿಗೇರಿಸಿಕೊಂಡಿದ್ದರು.

ನಟಿ ಸೌಂದರ್ಯ ಅವರು 1972ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಜನಿಸಿದರು. ಇನ್ನು ಇವರ ನಿಜವಾದ ಹೆಸರು ಸೌಮ್ಯ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಇವರು ತಮ್ಮ ಹೆಸರನ್ನು ಬದಲಾಯಿಸಿ ಸೌಂದರ್ಯ ಎಂದು ಇಟ್ಟುಕೊಂಡರು. ಇನ್ನೂ ಇವರ ತಂದೆ ಸತ್ಯನಾರಾಯಣ ಅವರು ಕೂಡ ಚಿತ್ರಂಗದ ಬರಹಗಾರರಾಗಿ ಗುರುತಿಸಿಕೊಂಡಿದ್ದರು. ಇನ್ನೂ ತೆಲುಗು ಚಿತ್ರರಂಗದ ಖ್ಯಾತ ನಟಿ ಸಾವಿತ್ರಿ ಅವರ ನಂತರ ಅವರ ಸ್ಥಾನವನ್ನು ತುಂಬಿದ ನಟಿಯೆಂದರೆ ಅದು ಸೌಂದರ್ಯ. ಇನ್ನು ಇವರನ್ನು ಆಧುನಿಕ ಯುಗದ ಸಾವಿತ್ರಿ ಎಂದು ಕರೆಯಲಾಗುತ್ತಿತ್ತು.

ಇನ್ನು ಸೌಂದರ್ಯ ಅವರಿಗೆ ವೈದಿಕ ವೃತ್ತಿಯಲ್ಲಿ ಆಸಕ್ತಿ ಹೊಂದಿದ್ದರು. ಇದಕ್ಕಾಗಿ ಅವರು ಸಕಲ ವಿದ್ಯಾಭಾಸ ಗಳನ್ನು ಪಡೆದು ಎಂ. ಬಿ. ಬಿ. ಎಸ್ ಸೀಟು ಕೂಡ ಪಡೆದುಕೊಂಡಿದ್ದರು. ಇನ್ನು ಈ ಸಂತೋಷವನ್ನು ಅವರ ತಂದೆ ಹಂಚಿಕೊಳ್ಳಲು ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಹಂಸಲೇಖ ಅವರ ಮನೆಗೆ ತೆರಳಿದ್ದರು. ಈ ಸಮಯದಲ್ಲಿ ಹಂಸಲೇಖ ಅವರು ತಮ್ಮ ‘ಗಂಧರ್ವ’ ಎಂಬ ಸಿನಿಮಾಗೆ ನಾಯಕ ನಟಿಯ ಹುಡುಕಾಟದಲ್ಲಿದ್ದರು. ಈ ಸಮಯದಲ್ಲಿ ಹಂಸಲೇಖ ಅವರು ಸೌಂದರ್ಯ ಅವರನ್ನು ನೋಡಿ ನಿಮ್ಮ ಮಗಳನ್ನು ನನ್ನ ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಲು ಹೇಳಿ ಎಂದು ಸತ್ಯನಾರಾಯಣ ಅವರಿಗೆ ಹೇಳಿದ್ದರಂತೆ. ಅಷ್ಟೇ ಅಲ್ಲದೆ ಸೌಂದರ್ಯ ಅವರೇ ನಟಿಸಬೇಕೆಂದು ಹಠಹಿಡಿದಿದ್ದರಂತೆ. ಹೀಗಾಗಿ ಸೌಂದರ್ಯ ಅವರು ಗಂಧರ್ವ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು.

ಇನ್ನು ಈ ಸಿನಿಮಾದ ನಂತರ ತೊಂದರೆ ಅವರು ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಕೂಡ ಅವಕಾಶ ಪಡೆಯಲು ಶುರುಮಾಡಿದರು. ಹೀಗೆ ಅವರ ಚಿತ್ರರಂಗದ ಪಯಣ ಪ್ರಾರಂಭವಾಗಿದ್ದು ಅವರು ಎಂದಿಗೂ ಕೂಡ ಹಿಂತಿರುಗಿ ನೋಡಲೇ ಇಲ್ಲ. ನಟಿಸಿದ ಸಾಕಷ್ಟು ಸಿನಿಮಾಗಳು ಯಶಸ್ಸನ್ನು ಕಂಡ ನಂತರ ಅವರು ಬಹಳ ಜನಪ್ರಿಯತೆಯನ್ನು. ಹೀಗೆ ಜನಪ್ರಿಯತೆ ಪಡೆದ ಸೌಂದರ್ಯ ಅವರು ತಮ್ಮ ಬಹುಕಾಲದ ಗೆಳೆಯ ರಘು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ 2004ರಲ್ಲಿ ಸೌಂದರ್ಯ ಅವರು ಗರ್ಭಿಣಿಯಾಗಿದ್ದಾಗ ವಿಮಾನ ಅ-ಪ-ಘಾ-ತವೊಂದರಲ್ಲಿ ಇಹಲೋಕ ತ್ಯಜಿಸಿದರು.

ಇನ್ನು ಇದೀಗ ಬಂದ ಸುದ್ದಿಗಳ ಪ್ರಕಾರ ಸೌಂದರ್ಯ ಅವರ ಪತಿ ರಘು ಅವರು ಎರಡನೆಯ ಮದುವೆಯಾಗಿದ್ದಾರೆ. ಹೌದು ರಘು ಅವರು ಗೋವಾ ಮೂಲದ ಡಾ. ಅರ್ಪಿತ ಎಂಬುವರನ್ನು ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಗೋವಾ ರೆಸಾರ್ಟ್ ಒಂದರಲ್ಲಿ ರೂಂ ಬುಕ್ ಮಾಡುವಾಗ ರಘು ಅವರು ತಮ್ಮ ಪತ್ನಿಯ ಹೆಸರು ಅರ್ಪಿತ ಎಂದು ಬರೆಸಿದ್ದಾರೆ. ಇದಾದ ಮೇಲೆ ಅವರು ಎರಡನೇ ಮದುವೆಯಾಗಿದ್ದಾರೆ ಎಂದು ಖಚಿತವಾಗಿದೆ. ಸದ್ಯಕ್ಕೆ ರಘು ಅವರು ತಮ್ಮ ಎರಡನೆಯ ಪತ್ನಿಯೊಂದಿಗೆ ವಿದೇಶದಲ್ಲಿ ವಾಸವಾಗಿದ್ದಾರೆ. ಇನ್ನೂ ಅವರ ಎರಡನೆಯ ಮದುವೆ ಬೆಳಕಿಗೆ ಬಂದ ನಂತರ ಅವರು ಮತ್ತೆ ಭಾರತಕ್ಕೆ ಮರಳಿ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಅವರು ವಿದೇಶದಲ್ಲಿದ್ದು ಸುಖ ಸಂಸಾರ ನಡೆಸುತ್ತಿದ್ದಾರೆ.

Get real time updates directly on you device, subscribe now.