ಸಿಂಗರ್ ಆಗ್ಬೇಕು ಅಂತ ಬಂದು, ನಿರೂಪಕಿಯಾಗಿ ಹಾಗೂ ಈಗ ಟಾಪ್ ನಟಿಯಾಗಿ ಮಿಂಚುತ್ತಿರುವ JJ ಪಾತ್ರದಾರಿ ಯಾರು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಾವು ಜೀವನದಲ್ಲಿ ಅಂದು ಕೊಂಡಿದ್ದ ಹಾಗೇ ಆಗೋ ಹಾಗಿದ್ದರೆ ಜೀವನ ಸ್ವರ್ಗಕ್ಕಿಂತ ಕಮ್ಮಿ ಏನಿಲ್ಲ ಎಂಬಂತೆ ಇರುತ್ತಿತ್ತು ಅಲ್ಲವೇ. ಕೆಲವೊಮ್ಮೆ ಜಂವನವಾಗಲೀ ಅಥವಾ ನಮ್ಮ ವೃತ್ತಿಯ ಆಯ್ಕೆ ಯಾಗಲೀ ನಾವೆಂದು ಕೊಂಡಂತೆ ನಡೆದರೆ ಕೆಲವೊಮ್ಮೆ ವಿಧಿಯ ಬರಹದಂತೆ ಆಗುತ್ತದೆ. ಕೆಲವೊಮ್ಮೆ ಅದು ನಮ್ಮ ಪ್ರಯೋಜನಕ್ಕೆ ಬಂದರೆ ಕೆಲವೊಮ್ಮೆ ದಿನನಿತ್ಯದ ಪಶ್ಚತ್ತಾಪಕ್ಕೆ ಬಂದಂತೆ ಇರುತ್ತದೆ.

ಜೀವನದಲ್ಲಿ ಕೆಲವೊಮ್ಮೆ ಏನೋ ಆಗೋಕೆ ಹೋಗಿ ಏನೋ ಆಗಿ ಈಗ ಒಂದು ಉತ್ತಮ ವೃತ್ತಿಯಲ್ಲಿ ಅವರಂದು ಕೊಂಡಿದ್ದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಇದ್ಜು ಜನರಿಂದ ಪ್ರೀತಿ ಹಾಗೂ ಪ್ರೋತ್ಸಾಹ ವನ್ನು ಪಡೆಯುತ್ತಿರುವವರ ಬಗ್ಗೆ ಇಂದಿನ ವಿಷಯದಲ್ಲಿ ಹೇಳೋಕೆ ಹೊರಟಿದ್ದೇವೆ. ಹೌದು ಇಂದು ನಾವು ಹೇಳೋಕೆ ಹೊರಟಿರೋದು ಅವರು ಅಂದು ಕೊಂಡಿದ್ದು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಆದರೆ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಜರ್ನಲಿಸಂ ಕ್ಷೇತ್ರ ಆದರೆ ಅವರು ಈಗ ಇರೋದು ಕಿರುತೆರೆಯಲ್ಲಿ.

ಕನ್ ಫ್ಯುಸ್ ಆದ್ರಾ. ಒಂದ್ನಿಮಿಷ ನಾವು ಇಂದು ಚರ್ಚಿಸೋಕೆ ಹೊರಟಿರೋದು ನಿಮಗೆ ಗೊತ್ತಿರೋರ ಬಗ್ಗೆಯೇ ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಟಿಆರ್.ಪಿ ರೇಟಿಂಗ್ ಹೊಂದಿರುವ ಜೊತೆ ಜೊತೆಯಲಿ ಧಾರವಾಹಿಯ ಆರ್ಯವರ್ಧನ್ ಪಾತ್ರದ ತಮ್ಮನ ಹೆಂಡತಿ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಶಿಲ್ಪಾ ರವರ ಬಗ್ಗೆ. ತಮ್ಮ ವಿಭಿನ್ನ ಡೈಲಾಗ್ ಡೆಲಿವರಿಯಿಂದ ಮ್ಯಾನರಿಸಂ ನಿಂದ ಶಿಲ್ಪಾ ಈಗಾಗಲೇ ರಾಜ್ಯಾದ್ಯಂತ ಸೀರಿಯಲ್ ಪ್ರಿಯರ ಮನಗೆದ್ದಿದ್ದಾರೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮಾಡಿದ ಶಿಲ್ಪ ಸಂಗೀತ ಕ್ಷೇತ್ರದಲ್ಲಿ ಸಿಂಗರ್ ಆಗಿ ಸಾಧನೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹೀಗೆ ಹಲವಾರು ಪ್ರಕಾರದ ಸಂಗೀತ ಶೈಲಿಯ ಯನ್ನು ಕಲಿತು ಪರಿಣತಿಯನ್ನು ಕೂಡ ಹೊಂದಿದ್ದರು. ನಂತರದ ದಿನಗಳಲ್ಲಿ ನೃತ್ಯ ರಂಗದಲ್ಲಿ ಏನಾದರೂ ಸಾಧಿಸುವ ಹೆಬ್ಬಯಕೆ ಹೊತ್ತು ನೃತ್ಯದಲ್ಲಿ ಕೂಡ ಪಾಂಡಿತ್ಯ ಸಾಧಿಸಿರುವ ಶಿಲ್ಪಾ ನಂತರದ ದಿನಗಳಲ್ಲಿ ನಿರೂಪಣೆಯತ್ತ ಒಲವು ತೋರಿಸಿದ ಶಿಲ್ಪಾ ತಮ್ಮ ಬಿಕಾಂ ಕಲಿಕೆಯ ನಂತರ ಪ್ರಜಾಟೀವಿ ಯಲ್ಲಿ ಬಂದ ಅವಕಾಶವನ್ನು ಸ್ವೀಕರಿಸಿ ಕೆಲಸಕ್ಕೆ ಸೇರಿದರು.

ಮೊದಲು ಪ್ರಜಾಟಾಕೀಸ್ ಎಂಬ ಕಾರ್ಯಕ್ರಮವನ್ನು ಮಾಡಿದರು. ನಂತರದ ದಿನಗಳಲ್ಲಿ ನಿರೂಪಕಿಯಾಗಿ ಕೂಡ ಭಡ್ತಿಯನ್ನು ಪಡೆದರು. ಪ್ರಜಾಟೀವಿಯಲ್ಲಿ ವಾರ್ತಾ ವಾಚಕಿಯಾಗಿ ಕೂಡ ಶಿಲ್ಪಾ ಕಾರ್ಯನಿರ್ವಹಿಸಿದ್ದಾರೆ. ಈ ಎಲ್ಲಾ ಅನುಭವಗಳೊಂದಿಗೆ ಶಿಲ್ಪಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ ಎಂಬ ಪ್ರೋಗ್ರಾಮ್ ನ ಮೂಲಕ ಕಿರುತೆರೆಯ ಲೋಕಕ್ಕೆ ಕಾಲಿಟ್ಟರು. ಇದಾದ ನಂತರ ಶಿಲ್ಪಾ ರವರಿಗೆ ಯೋಚಿಸುವ ಪ್ರಮೇಯವೇ ಬರಲಿಲ್ಲ ಒಂದಾದ ಮೇಲೋಂದರಂತೆ ಅವಕಾಶ ಗಳು ಅವರನ್ನು ಹುಡುಕಿಕೊಂಡು ಬಂದವು.

ಈಗಾಗಲೇ ಹಲವಾರು ವಾಹಿನಿಯಲ್ಲಿ ಹಲವಾರು ಧಾರವಾಹಿ ಗಳಲ್ಲಿ ನಟಿಸಿದ್ದಾರೆ ಶಿಲ್ಪಾ ಆದರೆ ಅವರಿಗೆ ಜೊತ ಜೊತೆಯಲಿ ಧಾರವಾಹಿಯ ಮಾನ್ಸಿ ಪಾತ್ರ ನೀಡಿದಷ್ಟು ಜನಪ್ರಿಯತೆ ಯಾವ ಪಾತ್ರವೂ ನೀಡಿಲ್ಲ. ಶಿಲ್ಪಾ ಇದೆಲ್ಲದರ ನಂತರ ದೊಡ್ಡ ಪರದೆಗೂ ಕೂಡ ಮೈಲಾಪುರ ಎಂಬ ಚಿತ್ರದ ಮೂಲಕ ಎಂಟ್ರಿ ನೀಡಿದ್ದಾರೆ. ಚಿತ್ರರಂಗದಿಂದ ಹಲವಾರು ಅವಕಾಶಗಳು ಅವರಿಗೆ ಅರಸಿ ಬಂದಿದ್ದು ಶಿಲ್ಪಾ ರವರ ಸಿನಿ ಕರಿಯರ್ ಕೂಡ ಅದ್ಧೂರಿಯಾಗಿ ಪ್ರಾರಂಭವಾಗಲಿದೆ. ಶಿಲ್ಪಾ ರವರು ಅಂದು ಕೊಂಡಿದ್ದೇ ಒಂದು ಈಗ ಅವರು ನಟಿಯಾಗಿ ಖ್ಯಾತರಾಗುತ್ತಿದ್ದಾರೆ ಇದರ ಕುರಿತಂತೆ ನಿಮ್ಮ. ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.

Get real time updates directly on you device, subscribe now.