ಹೆಂಡತಿಯನ್ನು ಕೆ.ಎ.ಎಸ್ ಓದಿಸಿ ತಹಸೀಲ್ದಾರ್ ಮಾಡಿದ ಗಂಡ ಆದರೆ ಇಂದು ಆಗಿದ್ದೇನು ಗೊತ್ತಾ? ಮನಕಲಕುವ ಘಟನೆ

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಜಗತ್ತಿನಲ್ಲಿ ಒಬ್ಬರಿಗೊಬ್ಬರು ಪ್ರೀತಿಸುವ ಮನಸ್ಸುಗಳು ಸಿಗೋದು ಅಪರೂಪ. ಇದೇನಪ್ಪಾ ಒಬ್ಬರನ್ನೊಬ್ಬರು ಪ್ರೀತಿಸುವ ಮನಸ್ಸುಗಳು ಸಿಗುವುದು ಅಪರೂಪ ಅಂತ ಅಂತಿದಾರಲ್ಲ ಅಂತ ಅನ್ಕೋತೀರಾ. ಪ್ರೀತಿಸುವುದೆಂದರೆ ಕೇವಲ ಅವರ ಬಗ್ಗೆ ಕಾಳಜಿ ಮಾತ್ರ ಅಲ್ಲ ಅವರ ಅಭಿಪ್ರಾಯಗಳಿಗೂ ಗೌರವ ನೀಡಿ ಅದನ್ನು ಸಾಧಿಸಲು ಅವರಿಗೆ ಅನುಮತಿ ನೀಡುವುದು ಹಾಗೂ ಪ್ರೋತ್ಸಾಹ ನೀಡುವುದು ಪ್ರೀತಿ ಅಂತ ಅನ್ನಿಸುತ್ತೆ. ಈ ಪ್ರೀತಿಯೇ ಈ ಕಾಲದಲ್ಲಿ ಕಡಿಮೆಯಾಗಿರುವುದು ಮದುವೆಯಾದರೆ ಸಾಕು ಹೆಂಡತಿ ಕೇವಲ ಮಕ್ಕಳನ್ನು ಹೆರುವ ಮಿಷಿನ್ ಅಥವಾ ಮನೆಕೆಲಸದಾಕೆ ಎನ್ನುವ ಕಾಲದಲ್ಲಿ ಅವರ ಕನಸುಗಳನ್ನು ಪೂರೈಸಲು ಗಂಡ ದುಡಿಯುವುದು ಕೇವಲ ಕನಸಿನ ಮಾತು. ಆದರೆ ಇಂದು ನಾವು ಹೇಳುವ ಕಥೆಯಲ್ಲಿ ಗಂಡ ಒಬ್ಬ ಜವಾಬ್ದಾರಿಯುತ ಪತಿಯಾಗಿ ತನ್ನ ಹೆಂಡತಿಯ ಕನಸನ್ನು ಹೇಗೆ ಪೂರೈಸಿ ನಂತರ ಏನಾದರೂ ಎಂಬ ಬಗ್ಗೆ ನಾವು ಒಂದು ಮನಕುಲುಕುವ ಕಥೆಯನ್ನು ಹೇಳಲಿದ್ದೇವೆ.

ಈ ಜಗತ್ತೇ ಹಾಗೆ ಒಬ್ಬರಿಗೊಬ್ಬರು ಬಹುವಾಗಿ ಪ್ರೀತಿಸುವ ಗಂಡ-ಹೆಂಡಿರನ್ನು ಜೊತೆಯಾಗಿ ಇರಲು ಬಿಡುವುದಿಲ್ಲ ಅದೇ ಅಲ್ಲವೇ ವಿಧಿಯ ಕೈವಾಡ ಅನ್ನೋದು. ಇಲ್ಲೂ ಕೂಡ ಹಾಗೆ ತನ್ನ ಹೆಂಡತಿಯನ್ನು ತನ್ನ ಹಾಗೆ ಕೆಲಸದಲ್ಲಿ ಇರಬಾರದು ಎಂದು ಓದಿಸಿ ಉತ್ತಮ ಆಫೀಸರ್ ಆಗಿ ಮಾಡುವ ಕನಸನ್ನು ಕಂಡು ಆಕೆಗೆ ಬೆಂಬಲಿಸಿದನು. ಆತ ಚಿಕ್ಕವಯಸ್ಸಿನಿಂದಲೇ ವಿದ್ಯದ ಗಂಧಗಾಳಿ ಹರಿಯದೆ ಕೇವಲ ಜೀವನೋಪಾಯಕ್ಕಾಗಿ ದುಡಿಮೆಯನ್ನೇ ನಂಬಿಕೊಂಡು ಬದುಕಿದವನು. ಆದರೆ ಆತನ ಹೆಂಡತಿ ಓದಿನಲ್ಲಿ ಸದಾ ಮುಂದು ಹಾಗೂ ಹುಟ್ಟುವಂತೆ ಎಂದು ಹೇಳಬಹುದು‌. ಗಂಡ ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಿದ್ದನೋ ಅದಕ್ಕಿಂತ ದುಪ್ಪಟ್ಟು ಗೌರವಿಸುತ್ತಿದ್ದ. ಅದಕ್ಕಾಗಿ ತಾನಂತೂ ಓದಿಲ್ಲ ತನ್ನ ಹೆಂಡತಿಯಾದರೂ ಓದಿ ಉತ್ತಮ ಸ್ಥಾನವನ್ನು ಪಡೆಯಲಿ ಎಂದು ಹೆಂಡತಿಗೆ ಕೆಎಎಸ್ ಓದಿಸಿದ. ಹೆಂಡತಿ ಕೂಡ ತನ್ನ ಗಂಡ ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಮನದಲ್ಲಿ ಇಟ್ಟು ಕೊಂಡು ಓದಿ ಕಳೆದ ವರ್ಷ ಬೆಂಗಳೂರಿನಲ್ಲಿ ತಹಶೀಲ್ದಾರ ಆಗಿ ನೇಮಕಗೊಂಡರು.

ನೋಡಿ ಲೈಫ್ ಎಷ್ಟು ಸ್ಮೂತ್ ಆಗಿ ಹೋಗುತ್ತದೆ ಅಂತ ಅನಿಸುತ್ತಿದೆ ಅಲ್ಲ. ಆದರೆ ಎಲ್ಲ ಅಂದುಕೊಂಡಂತೆ ನಡೆದರೆ ನಾವು ಕೂಡ ದೇವರ ಆಗುತ್ತೇವೆ ನಾವು ಕೂಡ ಕಷ್ಟವಿಲ್ಲದೆ ಬದುಕುತ್ತೇವೆ ಅದಕ್ಕಾಗಿಯೇ ವಿಧಿ ಒಂದು ಕಷ್ಟವನ್ನು ಸಿದ್ಧ ಮಾಡಿಟ್ಟಿದ್ದು. ಕೆಲ ವಾರಗಳ ಹಿಂದಷ್ಟೇ ಪ್ರತಿ ಸೀನಾ ಈ ಮಹಾಮಾರಿಗೆ ತುತ್ತಾಗಿದ್ದರು. ಪತ್ನಿ ಅಶ್ವಿನಿ ತನ್ನ ಗಂಡನನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಇನ್ನಿಲ್ಲದಂತೆ ಪ್ರಯತ್ನ ಮಾಡಿದರು. ಆದರೆ ವಿಧಿಯಾಟ ಬೇರೆನೇ ಬರೆದಿತ್ತು. ಕೆಲ ದಿನಗಳ ಹಿಂದಷ್ಟೇ ಈ ಮಹಾಮಾರಿಗೆ ತುತ್ತಾಗಿ ಸೀನಾ ವಿಧಿವಶರಾದರು. ನೋಡಿ ಎಂತಹ ದುರ್ವಿಧಿ ಅಲ್ಲವೇ ಅಷ್ಟೊಂದು ಪ್ರೀತಿಸುತ್ತಿದ್ದ ಗಂಡ ತನ್ನ ಹೆಂಡತಿಯನ್ನು ಉತ್ತಮ ಸ್ಥಾನದಲ್ಲಿ ಕೂಡಿಸಿದ ಮೇಲೆ ತನ್ನ ಬದುಕಿನ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಕಂಡಿದ್ದ ಆದರೆ ಕನಸುಗಳು ನನಸಾಗುವ ಮೊದಲೇ ಕನಸುಗಳಲ್ಲಿ ಮರೆಯಾಗಿ ಹೋದರು. ಪಾಪ ಈಗ ಪತ್ನಿಯಾದ ಅಶ್ವಿನಿ ಗಂಡನಿಲ್ಲದೆ ಪಡುತ್ತಿರುವ ಪಾಡು ಯಾರಿಗೂ ಬೇಡ ಈ ಜೋಡಿ ಬಗ್ಗೆ ನಿಮಗೇನಿಸಿತು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.