ದಕ್ಷಿಣ ಭಾರತದ ಈ 8 ವಿಲ್ಲನ್ ಗಳ ಪತ್ನಿಯರು ಕೂಡ ಟಾಪ್ ನಟಿಯರು. ಯಾರ್ಯಾರು ಗೊತ್ತೆ??

34

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಖ್ಯಾತ ನಟರಾಗಿ ಗುರುತಿಸಿಕೊಳ್ಳೋದು ನೋಡೇ ಇರ್ತೀರಾ. ಆದರೆ ಖಳನಟರಾಗಿ ಕೂಡ ಅದೇ ಗತ್ತನ್ನು ಇಂದಿನ ದಿನಗಳಲ್ಲಿ ಕೂಡ ಉಳಿಸಿಕೊಂಡು ಬಂದವರು ಸಿಗೋದು ಬೆರಳೆಣಿಕೆಯಷ್ಟು ಮಾತ್ರ. ಇಂದು ನಾವು ಹೇಳಹೊರಟಿರೋ ವಿಷಯದಲ್ಲಿ ಗಂಡರು ವಿಲನ್ ಆಗಿ ಖ್ಯಾತರಾಗಿದ್ದರೆ ಅವರ ಹೆಂಡತಿಯರು ಕೂಡ ನಾವೇನು ಕಮ್ಮಿಯಲ್ಲ ಎಂಬಂತೆ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.

ಇಂದು ಅಂತಹ ಕೆಲವು ಜೋಡಿಗಳ ಕುರಿತಂತೆ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ. ಗಂಡ ಹೆಂಡತಿಯರು ಇಬ್ಬರೂ ಚಿತ್ರರಂಗದಲ್ಲಿ ಸಕ್ರಿಯರಾಗಿ ದುಡಿಯುತ್ತಿರುವುದು ಅವರ ಬಾಂಧವ್ಯ ವನ್ನು ಇನ್ನಷ್ಟು ಗಟ್ಟಿ ಮಾಡಿದೆ. ಯಾಕೆಂದರೆ ಒಂದೇ ಕ್ಷೇತ್ರದಲ್ಲಿ ಇಬ್ಬರು ದುಡಿಯುವಃದರಿಂದ ಅವರಿಬ್ಬರ ಕಷ್ಟ ಸುಖಗಳನ್ನು ಪರಸ್ಪರ ಅರ್ಥೈಸಿಕೊಂಡು ಪರಸ್ಪರ ಸಹಾಯಕರಾಗಿ ಇರಲು ಸಾಧ್ಯವಾಗಿದೇ. ಬನ್ನಿ ಈ ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ ಎಂದು ನೋಡೋಣ ಬನ್ನಿ.

ಮೊದಲನೆಯದಾಗಿ ರಘುವರನ್. ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದಲ್ಲಿ ಸೈಲೆಂಟ್ ವಿಲನ್ ಬ್ರಾಂಡ್ ಆಗಿದ್ದ ರಘುವರನ್ ರವರ ಪತ್ನಿ ಕೂಡ ನಟಿಯಾಗಿ 90 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಮಿಂಚಿದ್ದಾರೆ. ಇನ್ನು ಖ್ಯಾತ ನಟ ಅವಿನಾಶ್. ಅವಿನಾಶ್ ಎಂತಹ ಪವರ್ ಫುಲ್ ಪಾತ್ರಗಳೆಕೂಡ ಮಾಡಬಲ್ಲಂತಹ ನಟ. ಅವರ ಪತ್ನಿ ಮಾಳವಿಕಾ ಕೂಡ ಅವರಿಗೆ ಕಮ್ಮಿಯಿಲ್ಲದಂತೆ ಚಿತ್ರರಂಗದಲ್ಲಿ ಖ್ಯಾತರಾಗಿದ್ದಾರೆ.

ಅತುಲ್ ಕುಲಕರ್ಣಿ. ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಆತುಲ್ ರವರು ಸಹಜ ನಟನೆಯಿಂದ ಖ್ಯಾತರಾಗಿದ್ದಾರೆ. ಅವರ ಪತ್ನಿ ಗೀತಾಂಜಲಿ ಕೂಡ ನಟಿಯಾಗಿ ಹಲವಾರು ಭಾಷೆಗಳಲ್ಲಿ ಫೇಮಸ್ ಆದವರು. ಇನ್ನು ಆಶಿಶ್ ವಿದ್ಯಾರ್ಥಿ. ಪಂಚ ಭಾಷೆಗಳಲ್ಲಿ ಕೂಡ ತಮ್ಮ ವಿಭಿನ್ನ ಮ್ಯಾನರಿಸಂ ನಟನೆಯ ಮೂಲಕ ಖಡಕ್ ವಿಲನ್ ಆಗಿ ಹೆಸರು ಪಡೆದಿರುವ ಆಶಿಶ್ ವಿದ್ಯಾರ್ಥಿಯವರ ಮಡದಿ ರಾಜ್ವಿಶ್ಯ ವಿದ್ಯಾರ್ಥಿ ಕೂಡ ಬಾಲಿವುಡ್ ನ ಸಿನಿಮಾ ಹಾಗೂ ಕಿರುತೆರೆಯಲ್ಲಿ ಖ್ಯಾತಿ ಪಡೆದ ನಟಿ.

ಬಿಜು ಮೆನನ್. ದಕ್ಷಿಣ ಭಾರತದ ಸ್ಟೈಲಿಶ್ ವಿಲನ್ ಆಗಿ ಹೆಸರು ಪಡೆದಿರುವ ಬಿಜು ಮೆನನ್ ರವರ ಪತ್ನಿ ಸಂಯುಕ್ತ ಶರ್ಮಾ ಮಲಯಾಳಂ ಚಿತ್ರರಂಗದಲ್ಲಿ ಎರಡು ಬಾರಿ ಅವಾರ್ಡ್ ವಿನ್ನಿಂಗ್ ನಟಿ ಕೂಡ ಹೌದು. ಇನ್ನು ಮುರುಳಿ ಶರ್ಮಾ. ವಿಭಿನ್ನ ಡೈಲಾಗ್ ಡೆಲಿವರಿಯಿಂದ ಎಲ್ಲರ ಮನಗೆದ್ದಿರುವ ಯೂನಿಕ್ ವಿಲನ್ ಮುರುಳಿ ಶರ್ಮಾ ರವರ ಪತ್ನಿ ಅಶ್ವಿನಿ ಕೂಡ ಬಾಲಿವುಡ್ ನ ಖ್ಯಾತ ನಟಿ. ಅಜಯ್ ಕುಮಾರ್. ಇಂದಿನವರೆಗೂ ಕೂಡ ತಮ ನಟನೆಯ ವೈಖರಿಯಿಂದ ಕನ್ನಡ ಸೇರಿದಂತೆ ಹಲವಾರು ಭಾಷೆಯ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ನಟ ಅಜಯ್ ಕುಮಾರ್ ರವರ ಪತ್ನಿ ಶ್ವೇತಾ ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿ ಬ್ಯೂಟಿ ಕಾಂಪಿಟೇಶನ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಫೈನಲ್ ಕೂಡ ತಲುಪಿದ್ದಾರೆ.

ಅಶುತೋಶ್ ರಾಣಾ. ಕನ್ನಡ ಸೇರಿದಂತೆ ಬಾಲಿವುಡ್ ನಲ್ಲಿ ಬಹುಬೇಡಿಕೆಯ ವಿಲನ್ ಹಾಗೂ ನಟನಾಗಿರೋ ಅಶುತೋಶ್ ರಾಣಾ ರವರ ಪತ್ನಿ ರೇಣುಕಾ ಕೂಡ ಚಿತ್ರರಂಗದಲ್ಲಿ ಪ್ರಸಿದ್ದರು. ನೋಡಿದ್ರಲ್ಲಾ ಖಡಕ್ ವಿಲನ್ ಗಳ ಹೆಂಡತಿಯರು ಕೂಡ ನಟಿಮಣಿಯರಾಗಿ ಹೇಗೆ ತಮ್ಮದೇ ಆದಂತಹ ಗುರೂತನ್ನು ಪಡೆದು ಕೊಂಡಿದ್ದಾರೆ ಚಿತ್ರರಂಗದ ಮೂಲಕ ಎಂದು. ನೀನೆಲ್ಲೋ ನಾನಲ್ಲೇ ಎಂಬಂತೆ, ಗಂಡ ದುಡಿಯುತ್ತಿರುವ ಚಿತ್ರರಂಗದಲ್ಲಿ ತಾವು ಕೂಡ ನಟಿಯರಾಗಿ ಸಕ್ರಿಯರಾಗುವ ಮೂಲಕ ಸರಿಸಮಾನ ಭಾವವನ್ನು ಹೊಂದಿದ್ದಾರೆ. ಇಬ್ಬರೂ ಒಂದೇ ಪೊಫೇಷನ್ ನಲ್ಲಿದ್ದಾಗ ಇಬ್ಬರ ಕಷ್ಟ ಹಾಗೂ ಸುಖದ ಅರಿವು ಪರಸ್ಪರ ಆಗುತ್ತೆ ಅನ್ನೋದು ಇವರುಗಳು ತೋರಿಸಿ ಕೊಟ್ಟಿದ್ದಾರೆ. ಈ ವಿಲನ್ ಹಾಗೂ ಅವರ ನಟಿಮಣಿ ಹೆಂಡತಿಯರ ಕುರಿತಂತೆ ನಿಮ್ಮ. ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯೋದರ ಮೂಲಕ ತಪ್ಪದೇ ತಿಳಿಸಿ.

Get real time updates directly on you device, subscribe now.