ನಮ್ಮ ನಿಮ್ಮಲ್ಲೆರ ನೆಚ್ಚಿನ ಟಾಪ್ ನಟಿ ರಾವಳಿ ರವರು ಇದೀಗ ಏನು ಮಾಡುತ್ತಿದ್ದಾರೆ ಗೊತ್ತಾ?? ಕುಟುಂಬವನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗಕ್ಕೆ ಪರಭಾಷಾ ನಟಿಯರು ಹಲವಾರು ಮಂದಿ ಬಂದು ಹೋಗಿದ್ದಾರೆ. ಕೆಲವರು ಕನ್ನಡಿಗರ ಕೈಯಲ್ಲಿ ಶಾಭಾಷ್ ಅನ್ನಿಸಿಕೊಂಡರೂ ಕೂಡ ಒಂದೇ ಚಿತ್ರಕ್ಕೆ ಕಣ್ಮರೆಯಾದವರೂ ಇದ್ದಾರೆ. ಕೆಲವರು ಪರಭಾಷೆಯಿಂದ ಬಂದು ಕನ್ನಡಿಗರಿಂದ ಕೈಚಪ್ಪಾಳೆ ತಟ್ಟಿಸಿಕೊಳ್ಳುವವರೆಗೆ ಬಿಡದೆ ಇಲ್ಲೇ ನಟಿಸಿ ಇಲ್ಲೇ ನೆಲೆಸಿದವರೂ ಇದ್ದಾರೆ. ಇಂದು ನಾವು ಹೇಳ ಹೊರಟಿರುವವರು ಪರಭಾಷೆಯಲ್ಲೂ ಫೇಮಸ್ ಕನ್ನಡ ಚಿತ್ರರಂಗದಲ್ಲಿ ಕೂಡ ಕಲಾಸೇವೆಯನ್ನು ಮಾಡಿ ಸೈ ಅನ್ನಿಸಿಕೊಂಡವರು.

ಮೂಲತಃ ತೆಲುಗುನವರಾದ ಇವರು ಕನ್ನಡದಲ್ಲಿ ಕೂಡ ಹಲವಾರು ಚಿತ್ರಗಳಲ್ಲಿನಟಿಸಿ ಜಯಿಸಿದ್ದಾರೆ. ನಾವು ಹೇಳ ಹೊರಟಿರೋದು ಖ್ಯಾತ ನಟಿ ರವಳಿ ಕುರಿತಂತೆ. ಆಂದ್ರಪ್ರದೇಶದಲ್ಲಿ ಹುಟ್ಟಿದ ಇವರ ಮೊದಲ ಹೆಸರು ಶೈಲಜಾ ಎಂದಾಗಿತ್ತು ಅದಾದ ನಂತರ ಅಪ್ಸರ ಎಂದು ಬದಲಾಯಿಸಿಕೊಂಡರು. ಯಾಕೋ ಏನೋ ಅಪ್ಸರ ಗಂಬ ಹಗಸರು ಕೂಡ ಸರಿಬರಲಿಲ್ಲ. ಅಪ್ಸರ ಎಂಬ ಹೆಸರಿನಿಂದ ರವಳಿ ಗಂದು ಚೇಂಜ್ ಮಾಡಿಕೊಂಡರು. ಮೂಲತಃ ತೆಲುಗಿನವರಾದ ಇವರು ತೆಲುಗಿನಲ್ಲೇ ತಮ್ಮ ಸಿನಿಜೀವನವನ್ನು ಆರಂಭಿಸಿದರು.

ತೆಲುಗಿನಲ್ಲಿ ಹಲವಾರು ಚಿತ್ರಗಳನ್ನು ಮಾಡಿದರು. ನಂತರದ ದಿನಗಳಲ್ಲಿ ರವಳಿ ಮಲಯಾಳಂ ತಮಿಳು ಹಿಂದಿ ಹಾಗೂ ಕನ್ನಡದಲ್ಲಿ ಕೂಡ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡರು. ಚಿತ್ರರಂಗದಲ್ಲಿ ನಟಿಯರಿಗೆ ಎಲ್ಲಿಂದಲೂ ಕೂಡ ಆಫರ್ ನ ಕರೆ ಯಾವಾಗಲೂ ಬರಬಹುದು. ರವಳಿ.ಅಷ್ಟೊಂದು ಬೇಡಿಕೆಯ ನಟಿಯಾಗಿದ್ದವರು. ಗಡಿಬಿಡಿ ಕೃಷ್ಣ ಎಂಬ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಿತರಾದ ರವಳಿ.

ನಂತರ ದಿನಗಳಲ್ಲಿ ಜಿಪುಣ ನನ್ನ ಗಂಡ ಹೀಗೆ ಹತ್ತು ಹಲವಾರು ಚಿತ್ರಗಳನ್ನು ಕನ್ನಡದಲ್ಲಿ ಮಾಡಿ ಕನ್ನಡಿಗ ವೀಕ್ಷಕರ ಮನದಲ್ಲಿ ಉಳಿದುಕೊಂಡರು. ಕನ್ನಡದಲ್ಲಿ ನಟಿಸಿದ ಚಿತ್ರಗಳಲ್ಲಿ ರವಳಿ ಯವರು ಹೆಚ್ಚಿನ ಚಿತ್ರಗಳಲ್ಲಿ ನಟಿಸಿದು ನವರಸ ನಾಯಕ ಜಗ್ಗೇಶ್ ರವರದ್ದು. ಇದಾದ ಕೆಲವೇ ವರ್ಷಗಳಲ್ಲಿ ಬ್ಯುಸಿ ನಟಿರಾಗಿದ್ದ ರವಳಿ ಚಿತ್ರಗಳಿಲ್ಲದೇ ಅವಕಾಶ ಗಳಿಲ್ಲದೇ ಒಂಟಿಯಾದರು. ನಂತರ ರವಳಿ ಧಾರವಾಹಿಗಳಲ್ಲಿ ನಟಿಸಲು ಪ್ರಯತ್ನಿಸಿದರಾದರೂ ಅವರ ದೇಹದಿಂದಾಗಿ ಇಲ್ಲೂ ಕೂಡ ಅವರ ವಿಫಲ ಯತ್ನ ನಡೆಯಿತು. ಅದಾಗಲೇ ಚಿತ್ರರಂಗದಲ್ಲಿ ಹೊಸ ನಟಿಯರ ಎಂಟ್ರಿಯಾಗಿತ್ತು.

ನಂತರ 2007 ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರನ್ನು ಮದುವೆಯಾದ ರವಳಿ ಕ್ರಮೇಣವಾಗಿ ಬರ ಬರುತ್ತಾ ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು. 2008ರಲ್ಲಿ ಮಗಳಿಗೆ ಜನ್ಮ ನೀಡಿದರು. ನಂತರ ತೆಲುಗು ದೇಶಂ ಪಾರ್ಟಿಗೆ ಸೇರುವ ಮೂಲಕ ರಾ ಜಕೀಯದಲ್ಲಿ ಕೂಡ ಸಕ್ರಿಯರಾದರು. ಈಗ ಸದ್ಯಕ್ಕೆ ಹೈದರಾಬಾದ್ ನಲ್ಲಿ ಚಿಕ್ಕ ಹಾಗೂ ಚೊಕ್ಕ ಕುಟುಂಬದೊಂದಿಗೆ ಸುಖ ಜೀವನ ನಡೆಸುತ್ತಿದ್ದಾರೆ 90 ರ ದಶಕದ ಎಲ್ಲರ ನೆಚ್ಚಿನ ನಟಿ ರವಳಿ. ರವಳಿಯವರ ಜೀವನದ ಬದಲಾವಣೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ನ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.