ಧನುಶ್ರೀ ನಂತರ ಟಿಕ್ ಟಾಕ್ ನಿಂದ ಕುಲಾಯಿಸಿದ ಅದೃಷ್ಟ, ಸಿನಿಮಾ ಅವಕಾಶ ಗಿಟ್ಟಿಸಿಕೊಂಡ ಬ್ಯೂಟಿ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೆವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಧಾರವಾಹಿ, ಅಷ್ಟೇ ಯಾಕೆ ಮಾಜಿ ಟಿಕ್ ಟಾಕ್ ಈಗ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಮಿಂಚುತ್ತಿರೋವವರು ಕೂಡ ಜನ ಮೆಚ್ಚಿದರೆ ಸೆಲಬ್ರೆಟಿ ಆಗಬಹುದು ಎಂಬುದು ಹಲವಾರು ಬಾರಿ ಈಗಾಗಲೇ ತಿಳಿದಿದೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಗಳನ್ನು ಪೋಸ್ಟ್ ಮಾಡೋದರ ಮೂಲಕ ಕೂಡ ಅಭಿಮಾನಿಗಳನ್ನು ಹಾಗೂ ನಟ ಅಥವಾ ನಟಿಯಾಗುವ ಅದೆಷ್ಟೋ ಅವಕಾಶಗಳನ್ನು ಪಡೆಯಬಹುದು ಎಂದು ಈಗಾಗಲೇ ಹಲವಾರು ಜನರು ತೋರಿದ್ದಾರೆ.

ಇದೇ ಶಾರ್ಟ್ ವೀಡಿಯೋ ಮಾಡಿಕೊಂಡು ಅದೆಷ್ಟೋ ಜನರು ಚಿತ್ರಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ಅವಕಾಶ ಪಡೆದು ತಮ್ಮ ಪೂರ್ಣ ಪ್ರಮಾಣದ ಪ್ರತಿಭೆಯನ್ನು ಸಾರಿದ್ದಾರೆ. ಉದಾಹರಣೆಗೆ ಧಾರವಾಹಿ ನಟಿ ಭವ್ಯ ಗೌಡ, ಟಿಕ್ ಟಾಕ್ ಫೇಮ್ ನಿಂದಲೇ ಧನುಶ್ರೀ ಬಿಗ್ ಬಾಸ್ ಗೆ ಕೂಡ ಹೋಗಿದ್ದು. ಇನ್ನು ಕೆಲ ನಟ ನಟಿಯರು ಕೂಡ ವೃತ್ತಿಪರ ನಟರಾದ ಮೇಲೂ ಕೂಡ ಈ ಇನ್ಸ್ಟಾಗ್ರಾಮ್ ರೀಲ್ಸ್ ಎಂಬ ಶಾರ್ಟ್ ವೀಡಿಯೋ ಪ್ಲಾಟ್ ಫರ್ಮ್ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ.

ಈ ಶಾರ್ಟ್ ವೀಡಿಯೋ ಮಾಡುವವರನ್ನು ಟ್ರಾಲ್ ಪೇಜಿಗರು ಟ್ರಾಲ್ ಮಾಡಬಹುದು ಆದರೆ ಅವರು ಆ ಟ್ರಾಲ್ ನಿಂದಾಗಿಯೇ ಸ್ಟಾರ್ ಆಗಿದ್ದು ಇದೆ. ಹೌದು ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ನಿಮಗೆಲ್ಲರಿಗೂ ಗೊತ್ತೇ ಇರುತ್ತಾರೆ. ಟ್ರಾಲಿಗರು ಇವರಿಗೆ ಟ್ರಾಲ್ ಮಾಡಿದಷ್ಟು ಬೇರೆ ಯಾರಿಗೂ ಮಾಡಿಲ್ಲ ಅನ್ಸುತ್ತೆ. ಆದರೆ ಈಗ ಇವರಿಗೆ ಈಗ ಚಿತ್ರವೊಂದರ ಆಫರ್ ಕೂಡ ಬಂದಿದೆ. ಕಾರಣ ಈ ಟ್ರಾಲ್ ಗಳಿಂದಾಗಿ ಇವರ ಪೋಸ್ಟ್ ಗೆ ರೀಚ್ ಜಾಸ್ತಿಯಾಗುತ್ತಾ ಹೋಗಿದೆ.

ಇದನ್ನು ಗಮನಿಸಿದ ಚಿತ್ರತಂಡ ಇವರನ್ನು ನಮ್ಮ ಚಿತ್ರದಲ್ಲಿ ಹಾಕಿಕೊಂಡರೆ ಪಬ್ಲಿಸಿಟಿ ಕೂಡ ಸಿಗುತ್ತದೆ ಎಂಬುದನ್ನು ಯೋಚಿಸಿರುತ್ತಾರೆ. ಈಗ ಸೋನು ಧರ್ಮ ಕೀರ್ತಿ ರಾಜ್ ಹಾಗೂ ಅದ್ವಿತಿ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಕ್ಯಾಡ್ಬರೀಸ್ ಚಿತ್ರದಲ್ಲಿ ವಿಶೇಷ ಪಾತ್ರವೊಂದನ್ನು ಮಾಡಲಿದ್ದಾರೆ. ಇನ್ನು ಒಂದು ವೆಬ್ ಸೀರೀಸ್ ಹಾಗೂ ಶಾರ್ಟ್ ಫಿಲ್ಮ್ ಒಂದರಲ್ಲಿ ಕೂಡ ಸೋನು ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿದೆ. ಇಷ್ಟೆಲ್ಲಾ ಅವಕಾಶಗಳು ಖಂಡಿತ ಟ್ರಾಲಿಗರ ಪ್ರಚಾರದಿಂದಲೇ ಬಂದಿರುತ್ತೆ ಎಂಬುದು ಹೊರಗಿನವರ ಮಾತು.

ನೋನು ಶ್ರೀನಿವಾಸ ಗೌಡ ಈ ಹೊಸ ಇನ್ನಿಂಗ್ಸ್ ನಲ್ಲಿ ಹೇಗೆ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳುತ್ತಾರೆ ನೋಡೋಣ. ಸೋನು ರವರ ಪ್ರಕಾರ ಕ್ಯಾಡ್ಬರೀಸ್ ಚಿತ್ರ ಅವರ ಲೈಫ್ ನಲ್ಲಿ ತಿರುವು ನೀಡಲಿದೆಯಂತೆ. ಈ ಚಿತ್ರದ ಪಾತ್ರದ ಕುರಿತಂತೆ ನಾನು ಹೆಚ್ಚಿಗೆ ಹೇಳೋದಿಲ್ಲ, ತುಂಬಾ ಮುಖ್ಯವಾದ ಪಾತ್ರವನ್ನೇ ಮಾಡುತ್ತಿದ್ದೇನೆ ಎಂದು ಸೋನುರವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಟಿಕ್ ಟಾಕ್ ನಿಂದ ಇನ್ಸ್ಟಾಗ್ರಾಮ್ ಗೆ ಬಂದು ನಂತರ ಈಗ ಡೈರೆಕ್ಟ್ ಚಿತ್ರವೊಂದರ ಮುಖ್ಯ ಪಾತ್ರಕ್ಕೆ ಭಡ್ತಿ ಪಡೆದಿರುವ ಸೋನು ಗೌಡರವರ ಲಕ್ ಗೆ ನಾವು ತಲೆಬಾಗಲೇಬೇಕು. ಸೋನು ಗೌಡರವರು ಸುಲಭವಾಗಿ ಸಿಕ್ಕಿರುವ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಕಾದು ನೋಡಬೇಕಾಗಿದೆ. ಯಾಕೆಂದರೆ 15 ಸೆಕೆಂಡ್ ವೀಡಿಯೋ ಗೂ ಗಂಟೆಗಳ ಕಾಲ ಚಿತ್ರೀಕರಿಸುವ ಸಿನಿಮಾಗೂ ಆಕಾಶ ಭೂಮಿಯ ವ್ಯತ್ಯಾಸವಿದೆ. ಸೋನು ಶ್ರೀನಿವಾಸ ಗೌಡರವರಿಗೆ ಸಿಕ್ಕಿರುವ ಈ ಸಿನಿಮಾ ಚಾನ್ಸ್ ಬಗ್ಗೆ ನೀವೆನು ಹೇಳುತ್ತೀರಾ ಕಾಮೆಂಟ್ ನ ಮೂಲಕ ತಿಳಿಸಿ.