ಭಾರತೀಯ ಸುಂದರ ಮಹಿಳೆಯರನ್ನು ವಿವಾಹವಾದ ವಿದೇಶಿ ಕ್ರಿಕೇಟಿಗರು ಯಾರ್ಯಾರು ಗೊತ್ತೇ?? ಷಾಕಿಂಗ್ ಲಿಸ್ಟ್.

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮದುವೆ – ಮನಸ್ಸು ದುಡುಕಿದಾಗ ಪಡುವ ವೇದನೆ ಎಂದು ಗಂಗಾವತಿ ಪ್ರಾಣೇಶ್ ಹಾಸ್ಯಸೂಚಕವಾಗಿ ಹೇಳುತ್ತಾರೆ. ಆದರೇ ಪುರಾಣಗಳ ಪ್ರಕಾರ ಮದುವೆ ನಿಶ್ಚಯವಾಗುವುದು ಸ್ವರ್ಗದಲ್ಲಂತೆ. ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಹೆಣ್ಣಿಗೂ ಒಂದೊಂದು ಗಂಡನ್ನ ಆ ಭಗವಂತ ಸೃಷ್ಠಿಸಿರುತ್ತಾನೆ ಎಂದು ಹೇಳುತ್ತಾರೆ. ಕೆಲವೊಮ್ಮೆ ಆ ಗಂಡು ಊರಿನಲ್ಲಿ, ಕೆಲವೊಮ್ಮೆ ಬೇರೆ ಜಿಲ್ಲೆಯಲ್ಲಿ, ಕೆಲವೊಮ್ಮೆ ಬೇರೆ ರಾಜ್ಯದಲ್ಲಿ, ಇನ್ನು ಕೆಲವೊಮ್ಮೆ ಬೇರೆ ದೇಶದಲ್ಲಿಯೇ ಸಿಗಬಹುದು. ಕ್ರಿಕೇಟ್ ಜಗತ್ತಿನಲ್ಲಿಯೂ ಸಹ ಹೀಗೆ. ಹಲವಾರು ದಿಗ್ಗಜ ಕ್ರಿಕೇಟಿಗರು ಭಾರತೀಯ ಮಹಿಳೆಯರಿಗೆ ಬೌಲ್ಡ್ ಆಗಿದ್ದಾರೆ. ಅವರನ್ನೇ ವಿವಾಹವಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಭಾರತೀಯ ಮಹಿಳೆಯರನ್ನ ವಿವಾಹವಾದ ಫಾರೀನ್ ಕ್ರಿಕೇಟಿಗರ ಪಟ್ಟಿ ಈ ಕೆಳಗಿನಂತಿದೆ.

ಶೋಯೆಬ್ ಮಲೀಕ್ – ಎಲ್ಲರಿಗೂ ತಿಳಿದಂತೆ ಪಾಕಿಸ್ತಾನದ ಆಲ್ ರೌಂಡರ್ ಶೋಯೆಬ್ ಮಲಿಕ್ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾರನ್ನ ವಿವಾಹವಾಗಿದ್ದಾರೆ. 7 ವರ್ಷಗಹ ಅವರ ದಾಂಪತ್ಯಕ್ಕೆ ಗಂಡು ಮಗನೊಬ್ಬ ಸಾಕ್ಷಿಯಾಗಿದ್ದಾನೆ. ಶಾನ್ ಟೈಟ್ – ಆಸ್ಟ್ರೇಲಿಯಾ ತಂಡದ ಸ್ಪೀಡ್ ಗನ್ ಶಾನ್ ಟೈಟ್ ಸಹ ಭಾರತೀಯ ಲೇಡಿಗೆ ಬೌಲ್ಡ್ ಆದವರೇ. ಆಸ್ಟ್ರೇಲಿಯಾ ಪರ ಅತ್ಯಂತ ವೇಗದ ಬೌಲರ್ ಎಂದೇ ಹೆಸರಾಗಿದ್ದ ಟೈಟ್, ಭಾರತೀಯ ಮಹಿಳೆಯಾದ ಮಶೂಮ್ ಸಿಂಗ್ ರವರನ್ನ ಮದುವೆಯಾಗಿದ್ದಾರೆ. ಮಶೂಮ್ ಸಿಂಗ್ ಒಬ್ಬ ಮಾಡೆಲ್ ಆಗಿದ್ದು, ಹಲವಾರು ರ್ಯಾಂಪ್ ಶೋಗಳಲ್ಲಿ ಭಾಗವಹಿಸಿದ್ದಾರೆ.

ಮುತ್ತಯ್ಯ ಮುರಳೀಧರನ್ – ವಿಶ್ವದಲ್ಲಿಯೇ ಅತಿ ಹೆಚ್ಚು ವಿಕೇಟ್ ಪಡೆದ ಬೌಲರ್ ಎಂಬ ಖ್ಯಾತಿಗೆ ಒಳಗಾಗಿರುವ ಮುತ್ತಯ್ಯ ಮುರಳೀಧರನ್ ಸಹ ಭಾರತೀಯ ಹುಡುಗಿಯ ಗೂಗ್ಲಿಗೆ ಬೌಲ್ಡ್ ಆದವರೇ. ಇವರು ಚೆನ್ನೈನ ಮುದಿಮಲಾರ್ ರಾಮಮೂರ್ತಿಯವರನ್ನ 2005 ರಲ್ಲಿ ವಿವಾಹವಾಗಿದ್ದರು. ಹಸನ್ ಅಲಿ – ಪಾಕಿಸ್ತಾನದ ಕ್ರಿಕೇಟರ್ ಹಸನ್ ಅಲಿ ಸಹ ಮದುವೆಯಾಗಿದ್ದು ಭಾರತೀಯ ಹುಡುಗಿಯನ್ನೇ. ಸಾಮಿಯಾ ಅರ್ಜೂ ಎಂಬ ಭಾರತೀಯ ಮಹಿಳೆಯನ್ನ ಹಸನ್ ಅಲಿ 2019ರಲ್ಲಿ ವಿವಾಹವಾದರು. ಸಾಮಿಯಾ ಸದ್ಯ ದುಬೈನಲ್ಲಿ ವಾಸವಾಗಿದ್ದಾರೆ.

ಜಹೀರ್ ಅಬ್ಬಾಸ್ – ಪಾಕಿಸ್ತಾನದ ಕ್ರಿಕೇಟ್ ನ ದಂತಕಥೆ ಜಹೀರ್ ಅಬ್ಬಾಸ್ ಸಹ ಭಾರತೀಯ ಮೂಲದ ಮಹಿಳೆಯನ್ನ ಮದುವೆಯಾಗಿದ್ದಾರೆ. ಭಾರತೀಯ ಮೂಲದ ರೀಟಾ ಲಂಡನ್ ನಲ್ಲಿ ವಾಸವಾಗಿದ್ದರು. 1980ರಲ್ಲೇ ಜಹೀರ್ ಅಬ್ಬಾಸ್ ರೀಟಾರನ್ನ ಮದುವೆಯಾಗಿದ್ದರು. ಗ್ಲೆನ್ ಮ್ಯಾಕ್ಸ್ ವೆಲ್ – ಸದ್ಯ ಆರ್.ಸಿ.ಬಿ ತಂಡದಲ್ಲಿರುವ ಹಾಗೂ ಆಸ್ಟ್ರೇಲಿಯಾದ ಹೊಡಿಬಡಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಸಹ ಭಾರತೀಯ ಹುಡುಗಿಯನ್ನೇ ಮದುವೆಯಾಗಿದ್ದಾರೆ. ಚೆನ್ನೈ ಮೂಲದ ವಿನಿ ರಾಮನ್ ಜೊತೆಗೆ 2020 ರಲ್ಲಿ ಮ್ಯಾಕ್ಸ್ ವೆಲ್ ಸಪ್ತಪದಿ ತುಳಿದರು. ಮೊಹ್ಸಿನ್ ಖಾನ್ – ಪಾಕಿಸ್ತಾನದ ಮಾಜಿ ಕ್ರಿಕೇಟರ್ ಹಾಗೂ ಕೋಚ್ ಆಗಿದ್ದ ಮೊಹ್ಸಿನ್ ಖಾನ್ ಸಹ ಭಾರತೀಯ ನಟಿಗೆ ಕ್ಲೀನ್ ಬೌಲ್ಡ್ ಆಗಿದ್ದರು. ಬಾಲಿವುಡ್ ನಲ್ಲಿ ಅಭಿನಯಿಸುತ್ತಿದ್ದ ನಟಿ , ಬಂಗಾಳಿ ರೀನಾ ರಾಯ್ ರನ್ನು ಪ್ರೀತಿಸಿ ವಿವಾಹವಾಗಿದ್ದರು. ನಿಮ್ಮ ನೆಚ್ಚಿನ ಜೋಡಿ ಯಾವುದೆಂದು ಕಮೆಂಟ್ ಮೂಲಕ ನಮಗೆ ತಿಳಿಸಿ.

Get real time updates directly on you device, subscribe now.