ವೈಷ್ಣವಿ ಅವರಿಗೆ ಬಂತು ಮತ್ತೊಂದು ಬಿಗ್ ಮದುವೆ ಪ್ರಪೋಸಲ್! ಖ್ಯಾತ ಉದ್ಯಮಿಯಿಂದ. ಕೊನೆಗೂ ಸಿಹಿ ಸುದ್ದಿ ನೀಡಿದ ವೈಷ್ಣವಿ.

ನಮಸ್ಕಾರ ಸ್ನೇಹಿತರೇ ಇದೀಗಾಗಲೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳು ಜನಪ್ರಿಯತೆ ಪಡೆದುಕೊಂಡಿವೆ. ಕೇವಲ ಧಾರವಾಹಿ ಅಷ್ಟೇ ಅಲ್ಲದೆ ಅದರಲ್ಲಿ ಅಭಿನಯಿಸುವ ಸಾಕಷ್ಟು ಕಲಾವಿದರು ಕೂಡ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ಕೆಲವು ಧಾರಾವಾಹಿಗಳು ಇದೀಗಾಗಲೇ ಮುಕ್ತಾಯಗೊಂಡಿದ್ದು ಕೂಡ ಇಂದಿಗೂ ಕನ್ನಡ ಕಿರುತೆರೆಯಲ್ಲಿ ಮರೆಯಲಾಗದಂತಹ ಧಾರವಾಹಿಗಳಾಗಿ ಮಾರ್ಪಾಡು ಹೊಂದಿವೆ.

ಇಂಥ ಧಾರಾವಾಹಿಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅಗ್ನಿಸಾಕ್ಷಿ’ ಧಾರವಾಹಿ ಕೂಡ ಒಂದು. ಇನ್ನು ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದ ನಟಿ ವೈಷ್ಣವಿ ಗೌಡ. ಹೌದು ಈ ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ವೈಷ್ಣವಿ ಗೌಡ ಅವರು ಕನ್ನಡ ಕಿರುತೆರೆಯ ಟಾಪ್ ನಟಿಯಾಗಿದ್ದರು. ಅಷ್ಟೇ ಅಲ್ಲದೆ ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದರು. ಇನ್ನು ಇವರ ಅಮೋಘವಾದ ನಟನೆಯ ಮೂಲಕ ಸಾಕಷ್ಟು ಯುವ ಮನಸ್ಸುಗಳನ್ನು ಕದ್ದಿದ್ದರು.

ಇನ್ನು ಈ ಧಾರವಾಹಿ ಮುಗಿದ ನಂತರ ನಟಿ ವೈಷ್ಣವಿ ಗೌಡ ಅವರು ಯಾವ ಧಾರಾವಾಹಿಯಲ್ಲಿ ಅಭಿನಯಿಸುತ್ತಾರೆ? ಅಥವಾ ಸಿನಿಮಾದಲ್ಲಿ ನಟಿಸುತ್ತಾರಾ? ಹೊಸ ಸಾಕಷ್ಟ ಪ್ರಶ್ನೆಗಳು ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿದ್ದವು. ಅಷ್ಟೇ ಅಲ್ಲದೆ ಧಾರವಾಹಿಯ ನಂತರ ನಟಿ ವೈಷ್ಣವಿ ಗೌಡ ಅವರು ಯಾವ ಧಾರವಾಹಿ ಅಥವಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬಹುದಿನಗಳ ನಂತರ ಇತ್ತೀಚಿಗೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾದ ಕನ್ನಡದ ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಮತ್ತೆ ಕಿರುತೆರೆಗೆ ಮರಳಿದರು.

ಈ ಸಂದರ್ಭದಲ್ಲಿ ವೈಷ್ಣವಿ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿದ್ದರು. ಇನ್ನು ಕೇವಲ ಕಿರುತೆರೆ ಪರದೆ ಮೇಲೆ ನಟಿ ವೈಷ್ಣವಿ ಗೌಡ ಅವರನ್ನು ವೀಕ್ಷಿಸಿದ್ದ ಸಾಕಷ್ಟು ಅಭಿಮಾನಿಗಳಿಗೆ ಅವರು ನಿಜ ಜೀವನದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇತ್ತು. ಇನ್ನು ಅವರ ನಿರೀಕ್ಷೆಯಂತೆ ನಟಿ ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸುಮಾರು 10 ವಾರ ಕಾಲ ಇದ್ದರು. ಈ ಸಮಯದಲ್ಲಿ ಅವರ ಶಾಂತ ಸ್ವಭಾವ ಹಾಗೂ ಅವರ ಮುಗ್ಧತೆ ಎಲ್ಲಾ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು.

ಹೌದು ಬಿಗ್ ಬಾಸ್ ಮನೆಯಲ್ಲಿ ಯಾವ ಸ್ಪರ್ಧಿಗಳೊಂದಿಗೆ ಮನಸ್ತಾಪ ಜಗಳಗಳಿಲ್ಲದೆ ಎಲ್ಲರೊಂದಿಗೂ ಆತ್ಮೀಯವಾಗಿ ಬರುತ್ತಿದ್ದ ನಟಿ ವೈಷ್ಣವಿ ಗೌಡ ಅವರ ವ್ಯಕ್ತಿತ್ವ ಎಲ್ಲಾ ಅಭಿಮಾನಿಗಳಿಗೆ ತುಂಬಾ ಇಷ್ಟವಾಯಿತು. ಅಷ್ಟೇ ಅಲ್ಲದೆ ಅವರಿಗೆ ಮತ್ತೆ ಬಿಗ್ ಬಾಸ್ ಮನೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಕೆಲವರ ನಾಮಿನೇಟ್ ಆದರೂ ಕೂಡ ಅವರ ಅಭಿಮಾನಿಗಳು ಮತ ಹಾಕುವ ಮೂಲಕ ಅವರನ್ನು ಪ್ರತಿವಾರ ಸೇಫ್ ಮಾಡುತ್ತಿದ್ದರು.

ಆದರೆ ವಿಧಿಯಾಟ ಬಿಗ್ ಬಾಸ್ ರಿಯಾಲಿಟಿ ಶೋ ಕರುನಾ ಕಾರಣದಿಂದಾಗಿ ಮಧ್ಯದಲ್ಲಿ ನಿಂತು ಹೋಯಿತು. ಇದರಿಂದ ಬಿಗ್ ಬಾಸ್ ಸ್ಪರ್ಧಿಗಳು ಮತ್ತೆ ತಮ್ಮ ತಮ್ಮ ಮನೆಗೆ ಮರಳಿದರು. ಅದೇ ರೀತಿ ವೈಷ್ಣವಿ ಗೌಡ ಅವರು ತಮ್ಮ ಮನೆಗೆ ಮರಳಿದ್ದು, ಇದೀಗ ಅವರಿಗೆ ಸಾಕಷ್ಟು ಮದುವೆ ಪ್ರಪೋಸಲ್ ಗಳು ಬರುತ್ತಲೇ ಇವೆ.

ಹೌದು ಇತ್ತೀಚಿಗಷ್ಟೇ ವೈಷ್ಣವಿ ಅವರ ಅಣ್ಣನ ವಿವಾಹವಾಗಿದ್ದು, ಇದೀಗ ವೈಷ್ಣವಿ ಅವರ ಸರದಿ. ಇನ್ನು ಈಗಾಗಲೇ ಸಾಕಷ್ಟು ಪ್ರಪೋಸಲ್ ಅವಳು ಬಂದಿದ್ದು, ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ ಅವರು ಮದುವೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದರು. ಅದರ ಮೇಲಂತೂ ಅವರಿಗೆ ಸಾಲುಸಾಲು ಮದುವೆ ಪ್ರಪೋಸಲ್ ಗಳು ಬರುತ್ತವೆ. ಇದರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವೈಷ್ಣವಿ ಅವರು ನನಗೆ ವಿವಾಹ ಎಂದರೆ ಇಷ್ಟ.

ನನಗೆ ಅದರ ಬಗ್ಗೆ ಕೆಲವೊಂದು ಆಸೆ ಹಾಗೂ ನಿರೀಕ್ಷೆಗಳು ಕೂಡ ಇವೆ. ಆದರೆ ಬಿಗ್ ಬಾಸ್ ಮನೆ ಒಳಗೆ ನಾನು ಮದುವೆ ಬಗ್ಗೆ ಅಷ್ಟು ಮಾತನಾಡಿದ್ದು ಈಗ ಗೊತ್ತಾಗುತ್ತಿದೆ. ನನ್ನ ಇನ್ಸ್ಟಾಗ್ರಾಮ್ ಹಾಗೂ ಇಮೇಲ್ ತೆರೆದರೆ ಸಾಕು ಕೇವಲ ಮದುವೆ ಪ್ರಪೋಸಲ್ ಗಳು ಬರುತ್ತಿವೆ. ಸರಿಯಾದ ಸಮಯಕ್ಕೆ ನಾನು ವಿವಾಹವಾಗುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಅವರು ಯಾರೊಂದಿಗೆ ಹಾಗೂ ಯಾವಾಗ ವಿವಾಹವಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.