ಕನ್ನಡದ ಸ್ಟಾರ್ ನಟರು ಎಷ್ಟು ಕೋಟಿಗಳಲ್ಲಿ ವ್ಯವಹಾರ ಮಾಡುತ್ತಾರೆ ಗೊತ್ತಾ? ಇವರಲ್ಲಿ ಅಗರ್ಭ ಶ್ರೀಮಂತರು ಯಾರು ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟರು ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಮ್ಮ ಸಿನಿಮಾರಂಗಕ್ಕೆ ನೀಡಿದ್ದಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್ ಹೀಗೆ ಸಾಕಷ್ಟು ನಟರು ಬಹುಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಇವರಷ್ಟೇ ಅಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್, ಶಿವರಾಜಕುಮಾರ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ ಅವರು ಕೂಡ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇನ್ನು ಇಂತಹ ಸ್ಟಾರ್ ನಟರಲ್ಲಿ ಆಗರ್ಭ ಶ್ರೀಮಂತರು ಯಾರು? ಎಷ್ಟು ಕೋಟಿ ವ್ಯವಹಾರ ಮಾಡುತ್ತಾರೆ? ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಕನ್ನಡ ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ನಟ ಉಪೇಂದ್ರ ಅವರು ಸಿನಿಮಾಗಳಷ್ಟೆ ಅಲ್ಲದೆ ರೆಸಾರ್ಟ್ ಹಾಗೂ ಹಲವಾರು ಅಪಾರ್ಟ್ಮೆಂಟ್ ಹೊಂದಿರುವ ಅವರು 140 ರಿಂದ 160 ಕೋಟಿ ರೂಪಾಯಿ ವ್ಯವಹಾರ ಮಾಡುತ್ತಾರೆ. ಇನ್ನು ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಒಂದುವರೆ ಎಕರೆಯಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇವರು ಬೆಂಗಳೂರು ಸೇರಿದಂತೆ ಹಲವು ಕಡೆ ಹೂಡಿಕೆ ಮಾಡಿದ್ದು, ಇವರು 180ರಿಂದ 220 ಕೋಟಿ ರೂಪಾಯಿವರೆಗೆ ವ್ಯವಹಾರ ಮಾಡುತ್ತಾರೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ಒಂದು ಸಿನಿಮಾದ ನಂತರ ಮತ್ತೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಕಿಚ್ಚ ಸುದೀಪ್ ಅವರು ಶೇರ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಿಚ್ಚ ಕ್ರಿಯೇಶನ್ಸ್ ಹಾಗೂ ಸರೋವರ ಗ್ರೂಪ್ ಗೆ ಮಾಲೀಕರಾಗಿದ್ದು, ಇವರು 200 ರಿಂದ 250 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಾರೆ. ಇನ್ನು ಅದೇ ರೀತಿ ಡಿ ಬಾಸ್ ದರ್ಶನ್ ಅವರು ಕೂಡ ಸಿನಿಮಾಗಳಷ್ಟೆ ಅಲ್ಲದೆ ಸಾಕಷ್ಟು ವ್ಯವಹಾರಗಳನ್ನು ಹೊಂದಿದ್ದು, 120 ರಿಂದ 170 ಕೋಟಿ ರೂಪಾಯಿ ವ್ಯವಹಾರ ಮಾಡುತ್ತಾರೆ ಎಂಬ ಸುದ್ದಿ ತಿಳಿದು ಬಂದಿದೆ.

ಇನ್ನು ತಮ್ಮ ನೃತ್ಯದ ಮೂಲಕ ಕನ್ನಡಿಗರ ಮನೆಮಾತಾಗಿರುವ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಸಾಕಷ್ಟು ಆಸ್ತಿಗಳ ಮೇಲೆ ಹೂಡಿಕೆ ಮಾಡಿದ್ದು, ಇವರು 200 ರಿಂದ 300 ಕೋಟಿ ರೂಪಾಯಿವರೆಗೆ ವ್ಯಾಪಾರ ಮಾಡುತ್ತಾರೆ. ಇನ್ನು ಕೆಜಿಎಫ್ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿರುವ ರಾಕಿಂಗ್ ಸ್ಟಾರ್ ಯಶ್ ಅವರು ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಹಲವೆಡೆ ಪ್ರಾಪರ್ಟಿ ಹಾಗೂ ಕೋಟಿ ಕೋಟಿ ಬೆಲೆಬಾಳುವ ಶೇರುಗಳನ್ನು ಹೊಂದಿದ್ದಾರೆ. ಇನ್ನು ಇವರು 100 ರಿಂದ 110 ಕೋಟಿ ರೂಪಾಯಿ ವರೆಗೆ ವ್ಯವಹಾರ ಮಾಡುತ್ತಾರೆ ಎಂದು ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ಮುಂಗಾರು ಮಳೆ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಪ್ರೇಮಕಹಾನಿ ಹೊಂದಿದ ಸಿನಿಮಾಗಳಲ್ಲಿ ಜನರಿಗೆ ತುಂಬಾ ಇಷ್ಟವಾಗಿದ್ದಾರೆ. ಇನ್ನು ಇವರು ಉಳಿದ ನಟರಂತೆ ದೊಡ್ಡ ಮೊತ್ತದ ಶೇರ್ ಹೊಂದಿದ್ದು, ಅನೇಕ ಪ್ರಾಪರ್ಟಿ ಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇನ್ನು ಇವರು 100 ರಿಂದ 150 ಕೋಟಿ ರೂಪಾಯಿವರೆಗೆ ವ್ಯವಹಾರ ಮಾಡುತ್ತಾರೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಕನ್ನಡದ ಟಾಪ್ ನಟರು ಕೋಟಿ ಕೋಟಿ ರೂಪಾಯಿಗಳ ವ್ಯವಹಾರ ಮಾಡುತ್ತಾರೆ. ಇನ್ನು ಇವರಲ್ಲಿ ನಿಮ್ಮ ನೆಚ್ಚಿನ ಸ್ಟಾರ್ ನಟ ಯಾರು ಮತ್ತು ಏಕೆ ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.