ಮದುವೆಯಾಗುವಾಗ ಹೆಣ್ಣಿನ ವಯಸ್ಸು ಗಂಡಿಗಿಂತ ಏಕೆ ಕಡಿಮೆಯಾಗಿರಬೇಕು ಗೊತ್ತೆ? ಇಲ್ಲಿದೆ ನೋಡಿ ಅಸಲಿ ಕಾರಣ.

ನಮಸ್ಕಾರ ಸ್ನೇಹಿತರೇ ಮದುವೆ ಎಂಬುದು ಪ್ರತಿ ವ್ಯಕ್ತಿಯ ಜೀವನದಲ್ಲಿ ಒಂದು ಪ್ರಮುಖವಾದ ಘಟ್ಟವಾಗಿದೆ. ಹೌದು ಪ್ರತಿಯೊಬ್ಬ ವ್ಯಕ್ತಿಗೆ ಮದುವೆಯೆಂಬುದು ತನ್ನ ಜೀವನದ ಹೊಸ ಅಧ್ಯಾಯವೇ ಆಗಿದೆ ಎಂದು ಹೇಳಬಹುದು. ಇನ್ನು ನಾವು ನೋಡಿರುವಂತೆ ಮದುವೆಯಾಗುವಾಗ ಹೆಣ್ಣು ಮತ್ತು ಗಂಡಿನ ನಡುವೆ ವಯಸ್ಸಿನ ಅಂತರ ಇರುತ್ತದೆ. ಅಂದರೆ ಹೆಣ್ಣಿಗಿಂತ ಗಂಡನ ವಯಸ್ಸು ಹೆಚ್ಚಾಗಿರುತ್ತದೆ. ಇನ್ನು ಗಂಡಿಗಿಂತ ಹೆಣ್ಣಿನ ವಯಸ್ಸು ಕಡಿಮೆ ಇರುವುದಕ್ಕೆ ಕಾರಣ ಏನು ಎಂಬುದು ಹಲವಾರು ಜನರ ಪ್ರಶ್ನೆಯಾಗಿರುತ್ತದೆ.

ಇನ್ನು ಈ ಪ್ರಶ್ನೆಗೆ ಸಾಕಷ್ಟು ಜನ ವಿವಿಧ ರೀತಿಯ ಉತ್ತರವನ್ನು ಕೂಡ ನೀಡುತ್ತಾರೆ. ಆದರೂ ಕೂಡ ಇದರ ಬಗ್ಗೆ ವೈಜ್ಞಾನಿಕವಾಗಿ ಕಾರಣ ಏನು ಎಂಬುದು ಹಲವರಿಗೆ ಗೊತ್ತಿರುವುದಿಲ್ಲ. ಆದ್ದರಿಂದ ನಾವು ಮದುವೆ ಸಂದರ್ಭದಲ್ಲಿ ಗಂಡಿಗಿಂತ ಹೆಣ್ಣಿನ ವಯಸ್ಸು ಏಕೆ ಚಿಕ್ಕದಾಗಿರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡುತ್ತೇವೆ ಇದನ್ನು ಸಂಪೂರ್ಣವಾಗಿ ಓದಿ.

ಮದುವೆಯೆಂಬುದು ಹಿರಿಯರ ಸಮ್ಮುಖದಲ್ಲಿ ಅವರ ಆಶೀರ್ವಾದ ಪಡೆದು ಒಂದು ಗಂಡು ಹಾಗೂ ಒಂದು ಹೆಣ್ಣು ಜೀವನದಲ್ಲಿ ಒಂದಾಗುವ ಸಂದರ್ಭ. ಇನ್ನು ಈ ಜೋಡಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ತಮ್ಮ ಜೀವನದ ಹಾದಿಯನ್ನು ಸುಗಮಗೊಳಿಸುವ ಸುಖ ಸಂಸಾರ ನಡೆಸುವುದೇ ಈ ಮದುವೆ. ನಾನು ನೋಡಿದಂತೆ ಮದುವೆಯಾಗುವ ಗಂಡು ಮತ್ತು ಹೆಣ್ಣಿನ ನಡುವೆ ಸುಮಾರು ನಾಲ್ಕರಿಂದ ಐದು ವರ್ಷ ವಯಸ್ಸಿನ ಅಂತರವಿರುತ್ತದೆ. ಏಕೆಂದರೆ ಹೆಣ್ಣು ಗಂಡಿಗಿಂತ ಪ್ರತಿ ವಿಚಾರದಲ್ಲಿ ಕೂಡ ಯೋಚನೆ ಮಾಡುವಂತಹ ಗುಣವನ್ನು ಚಿಕ್ಕವಯಸ್ಸಿನಲ್ಲಿಯೇ ಹೊಂದಿರುತ್ತಾಳೆ.

ಇನ್ನು ವ್ಯಕ್ತಿಯಲ್ಲಿ ಕಂಡುಬರುವ ಪ್ರಭುದ್ಧತೆ ಗಂಡಿಗಿಂತ ಹೆಣ್ಣಿಗೆ ಚಿಕ್ಕವಯಸ್ಸಿನಲ್ಲಿಯೇ ಬಂದಿರುತ್ತದೆ. ಈ ಕಾರಣದಿಂದಾಗಿಯೇ ಮದುವೆಯಾಗುವಾಗ ಗಂಡಿಗಿಂತ ಚಿಕ್ಕವಯಸ್ಸಿನ ಹೆಣ್ಣನ್ನು ನೋಡಿ ಮದುವೆ ಮಾಡುತ್ತಾರೆ. ಇನ್ನು ಗಂಡಿಗಿಂತ ಹೆಣ್ಣಿಗೆ ಸಹನಾಶಕ್ತಿ ಅಧಿಕವಾಗಿರುತ್ತದೆ. ಅಷ್ಟೇ ಅಲ್ಲದೆ ಗಂಡಿಗಿಂತ ಹೆಣ್ಣಿಗೆ ವಯಸ್ಸಿನಲ್ಲಿ ಚಿಕ್ಕವಳಾಗಿದ್ದರೆ ಸಂಸಾರದಲ್ಲಿ ತಿಳುವಳಿಕೆ ಹಾಗೂ ಹೊಂದಾಣಿಕೆ ಕಂಡುಬರುತ್ತದೆ ಎಂದು ಹಲವರ ಅಭಿಪ್ರಾಯ.

ಇನ್ನು ಗಂಡಿಗಿಂತ ಹೆಣ್ಣಿನ ವಯಸ್ಸು ಅಧಿಕವಾಗಿದ್ದರೆ ಇಬ್ಬರ ಮಧ್ಯೆ ಸುಖ ಸಂಸಾರದಲ್ಲಿ ಬಿರುಕುಗಳು ಮೂಡುತ್ತವೆ. ಇನ್ನು ಗಂಡು ಮತ್ತು ಹೆಣ್ಣಿನ ನಡುವೆ ಇರುವ ವಯಸ್ಸಿನ ಅಂತರ ಅವರ ವೈಯಕ್ತಿಕ ವಿಚಾರದಲ್ಲಿ ಕೂಡ ಸಾಕಷ್ಟು ಪ್ರಭಾವವನ್ನು ಬೀರುತ್ತದೆ. ಇನ್ನು ಹೆಣ್ಣಿನಲ್ಲಿ 30 ವರ್ಷಗಳ ನಂತರ ಲೈಂ-ಗಿ-ಕ ಆಸಕ್ತಿ ಹೆಚ್ಚಿದರೆ, ಗಂಡಿನಲ್ಲಿ 35 ವರ್ಷಗಳ ನಂತರ ಆಸಕ್ತಿ ಹೆಚ್ಚುತ್ತದೆ. ಈ ಕಾರಣದಿಂದಾಗಿ ಕೂಡ ಹಿರಿಯರು ಗಂಡು ಮತ್ತು ಹೆಣ್ಣಿನ ನಡುವೆ ವಯಸ್ಸಿನ ಅಂತರ ಇರಬೇಕು ಎಂದು ಹೇಳಿದ್ದಾರೆ. ಇನ್ನೂ ಒಂದು ವೇಳೆ ಗಂಡು ಮತ್ತು ಹೆಣ್ಣಿನ ನಡುವೆ ವಯಸ್ಸಿನ ಅಂತರದ ಇಲ್ಲದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ಸಂಶೋಧನೆ ಕೂಡ ಮಾಡಲಾಗಿದೆ. ಇನ್ನು ಈ ಸಂಶೋಧನೆಯ ಪ್ರಕಾರ ಶೇಕಡ 20ರಷ್ಟು ದಾಂಪತ್ಯ ಜೀವನಗಳು ಹೊಂದಾಣಿಕೆ ಇಲ್ಲದ ಕಾರಣ ಮುರಿದು ಹೋಗುತ್ತವೆ.

ಇನ್ನು ಶೇಕಡಾ ಮೂವತ್ತರಷ್ಟು ದಾಂಪತ್ಯ ಜೀವನಗಳು ಇಬ್ಬರ ಮಧ್ಯೆ ದೈಹಿಕ ಕಾರಣಗಳಿಂದಾಗಿ ಮುರಿದು ಬೀಳುತ್ತವೆ. ಇಂದಿನ ಯುಗದಲ್ಲಿ ಪ್ರೇಮ ವಿವಾಹಗಳು ಹೆಚ್ಚಾಗುತ್ತಿದ್ದಂತೆ ಗಂಡು ಮತ್ತು ಹೆಣ್ಣಿನ ನಡುವೆ ವಯಸ್ಸಿನಲ್ಲಿ ಅಷ್ಟೊಂದು ಅಂತರ ಕಂಡುಬರುತ್ತಿಲ್ಲ. ಇನ್ನು ಹಿರಿಯರು ಎಲ್ಲವನ್ನು ಯೋಚಿಸಿ ಗಂಡು ಮತ್ತು ಹೆಣ್ಣಿನ ನಡುವೆ ವಯಸ್ಸಿನಲ್ಲಿ ಅಂತರ ಬೇಕೆಂದು ಹೇಳಿದ್ದಾರೆ. ಆದರೆ ಇದೀಗ ಗಂಡು ಮತ್ತು ಹೆಣ್ಣಿನ ನಡುವೆ ವಯಸ್ಸು ಪ್ರಶ್ನೆ ಆಗಿಲ್ಲ. ಏಕೆಂದರೆ ಎಲ್ಲರೂ ಕೂಡ ಹೆಚ್ಚಾಗಿ ಪ್ರೇಮ ವಿವಾಹಕ್ಕೆ ಮುಂದಾಗಿದ್ದಾರೆ. ಇನ್ನು ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.