ಕಿರುತೆರೆಯಿಂದ ದೂರವಾದ ನಟಿ ಕವಿತಾ ಗೌಡ ಅವರ ಸ್ಥಾನವನ್ನು ತುಂಬುವ ಕನ್ನಡದ ಏಕೈಕ ಚೆಲುವೆ ಯಾರು ಗೊತ್ತಾ?

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ವಿಭಿನ್ನವಾದ ಕಥೆಗಳ ಮೂಲಕ ಜನರ ಮನಸ್ಸಿನಲ್ಲಿ ಮರೆಯಾಗದಂತೆ ತಮ್ಮದೇ ಆದ ಛಾಪನ್ನು ಮೂಡಿಸಿವೆ. ಇನ್ನು ಧಾರವಾಹಿಗಳು ಅಷ್ಟೇ ಅಲ್ಲದೆ ಅದರಲ್ಲಿ ಅಭಿನಯಿಸಿರುವ ಸಾಕಷ್ಟು ಕಲಾವಿದರು ಕೂಡ ತಮ್ಮ ನಟನೆಯ ಮೂಲಕ ಜನರ ಪ್ರೀತಿ ವಿಶ್ವಾಸವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ನಟಿಯರು ಕೂಡ ತಮ್ಮ ನಟನೆಯ ಮೂಲಕ ಯುವಹೃದಯಗಳನ್ನು ಕದ್ದಿದ್ದಾರೆ. ಅಂತಹ ನಟಿಯರಲ್ಲಿ ಕವಿತಾ ಗೌಡ ಕೂಡ ಒಬ್ಬರು. ಕವಿತ ಗೌಡ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷ್ಮೀ ಬಾರಮ್ಮ’ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

ಈ ಧಾರಾವಾಹಿಯಲ್ಲಿ ಅವರು ಹಳ್ಳಿಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಮೋಘವಾಗಿ ನಟಿಸಿದ್ದರು. ನಂತರ ಅವರು ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ ಸೀಸನ್ 6ರಲ್ಲಿ ಕೂಡ ಸ್ಪರ್ಧಿಯಾಗಿ 100 ದಿನಗಳನ್ನು ಪೂರೈಸಿದರು. ಇನ್ನು ಲಕ್ಷ್ಮೀ ಬಾರಮ್ಮ ಹೊರತುಪಡಿಸಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ವಿದ್ಯಾ ವಿನಾಯಕ’ ಎಂಬ ದಾರವಾಹಿಯಲ್ಲಿ ಕೂಡ ನಟಿಸಿದ್ದಾರೆ. ಹೀಗೆ ಕನ್ನಡ ಕಿರುತೆರೆಯಲ್ಲಿ ಅವರು ಯಶಸ್ಸನ್ನು ಕಂಡಿದ್ದು, ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ.

ಹೌದು ಕವಿತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಇನ್ನು ಧಾರಾವಾಹಿಗಳ ಮಾತ್ರವಲ್ಲದೆ ಅವರು ಕನ್ನಡ ಕಿರುತೆರೆಯ ಡ್ಯಾನ್ಸಿಂಗ್ ರಿಯಾಲಿಟಿ ಶೋ ‘ತಕದಿಮಿತ ಡ್ಯಾನ್ಸಿಂಗ್ ಸ್ಟಾರ್’ ದಲ್ಲಿ ಕೂಡ ಭಾಗಿಯಾಗಿದ್ದರು. ಇದರಲ್ಲಿ ಕವಿತ ಗೌಡ ಅವರು ಸೆಮಿಫೈನಲ್ ವರೆಗೂ ತಮ್ಮ ನೃತ್ಯದ ಮೂಲಕ ಸ್ಥಾನ ಪಡೆದಿದ್ದರು. ಇನ್ನು ಬೆಳ್ಳಿತೆರೆಯಲ್ಲೂ ಕೂಡ ಇವರು ‘ಶ್ರೀನಿವಾಸ ಕಲ್ಯಾಣ’ ಹಾಗೂ ‘ಫಸ್ಟ್ ಲವ್’ ಎಂಬ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನು ಅವರು ಕನ್ನಡ ಮಾತ್ರವಲ್ಲದೆ ತಮಿಳು ಕಿರುತೆರೆಯ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಹೀಗೆ ಕನ್ನಡದ ಖ್ಯಾತ ನಟಿಯಾಗಿ ಹೆಸರು ಗಳಿಸಿದ್ದ ಕವಿತಾ ಅವರು ಇತ್ತೀಚಿಗೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದನ್ ಕುಮಾರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಅವರು ಮದುವೆಯಾಗಿದ್ದು, ಕಿರುತೆರೆಯಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಈ ಮೂಲಕ ಕಿರುತೆರೆಯಲ್ಲಿ ಇದೀಗ ಕವಿತಾ ಗೌಡ ಅವರ ಸ್ಥಾನ ಯಾವ ನಟಿ ತುಂಬುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಇನ್ನು ಈ ಪ್ರಶ್ನೆಗೆ ಉತ್ತರ ಎಂಬಂತೆ ಕವಿತಾ ಗೌಡ ಅವರ ಸ್ಥಾನವನ್ನು ಇದೀಗ ಕನ್ನಡ ಕಿರುತೆರೆಯ ಬೇರೊಬ್ಬ ನಟಿ ತುಂಬಲಿದ್ದಾರೆ. ಹಾಗಾದರೆ ಆ ನಟಿ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಇದೀಗ ಕಿರುತೆರೆಯಲ್ಲಿ ಕವಿತಾ ಅವರ ಸ್ಥಾನ ಖಾಲಿ ಉಳಿಯುವ ಸಾಧ್ಯತೆಗಳು ಹೆಚ್ಚಿವೆ. ಇದೀಗ ಅವರ ಸ್ಥಾನವನ್ನು ತುಂಬಲು ಕನ್ನಡದ ಮತ್ತೋರ್ವ ಚೆಲುವೆ ಮುಂದಾಗಿದ್ದಾರೆ. ಅವರೇ ‘ಕನ್ನಡತಿ’ ಧಾರವಾಹಿ ಖ್ಯಾತಿಯ ರಂಜನಿ ರಾಘವನ್. ಹೌದು ಇದೀಗ ಕನ್ನಡ ಕಿರುತೆರೆಯ ಬಹುಬೇಡಿಕೆಯ ನಟಿಯೆಂದರೆ ಅವರೇ ರಂಜನಿ ರಾಘವನ್. ಹೌದು ಪುಟ್ಟಗೌರಿ ಮದುವೆ ಧಾರವಾಹಿ ಮೂಲಕ ಯಶಸ್ಸನ್ನು ಪಡೆದ ನಟಿ ರಂಜನಿ ಅವರು ಇದೀಗ ಕವಿತಾ ಗೌಡ ಅವರ ಸ್ಥಾನವನ್ನು ಕಿರುತೆರೆಯಲ್ಲಿ ಪಡೆದುಕೊಂಡಿದ್ದಾರೆ. ಇದೀಗ ಅವರು ಕನ್ನಡ ಕಿರುತೆರೆಯ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇನ್ನು ಕನ್ನಡ ಕಿರುತೆರೆಯಲ್ಲಿ ಕವಿತಾ ಗೌಡ ಅವರ ಸ್ಥಾನವನ್ನು ರಂಜನಿ ರಾಘವನ್ ಅವರು ತುಂಬುತ್ತಾರೆ ಎಂಬುದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.