ಸಾರ್ವಕಾಲಿಕ ಶ್ರೇಷ್ಠ ತಂಡ ರಚನೆ ಮಾಡಿದ ಕಪಿಲ್ ದೇವ್, ಕನ್ನಡಿಗರದ್ದೇ ಪಾರುಪತ್ಯ. ಸ್ಥಾನ ಪಡೆದಿರುವರು ಯಾರ್ಯಾರು ಗೊತ್ತೇ??

sports

ನಮಸ್ಕಾರ ಸ್ನೇಹಿತರೇ ಕಪಿಲ್ ದೇವ್ ಭಾರತೀಯ ಕ್ರಿಕೇಟ್ ತಂಡದ ಶ್ರೇಷ್ಠ ಆಲ್ ರೌಂಡರ್. ಎಲ್ಲರ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಮಾಡಿ, ಭಾರತ 1983 ರಲ್ಲಿ ಮೊದಲ ಭಾರಿ ವಿಶ್ವಕಪ್ ಎತ್ತಿ ಹಿಡಿಯುವಂತೆ ಮಾಡಿದ ನಾಯಕ. ಉತ್ತಮ ವೇಗದ ಬೌಲರ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬಹಳಷ್ಟು ಭರವಸೆ ಮೂಡಿಸಿದ್ದ ಬ್ಯಾಟ್ಸಮನ್ ಆಗಿ, ಭಾರತೀಯ ಕ್ರಿಕೇಟ್ ತಂಡದ ಅವಿಭಾಜ್ಯ ಅಂಗವಾಗಿದ್ದರು. ಅಂತಹ ಕಪಿಲ್ ದೇವ್ ಈಗ ತಮ್ಮ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ತಂಡವನ್ನು ಆಯ್ಕೆ ಮಾಡಿದ್ದಾರೆ.

ಆರಂಭಿಕರಾಗಿ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ರವರನ್ನು ಆಯ್ಕೆ ಮಾಡಿದ್ದಾರೆ. 3 ನೇ ಕ್ರಮಾಂಕದಲ್ಲಿ ಈಗಿನ ನಾಯಕ ವಿರಾಟ್ ಕೋಹ್ಲಿ ಇದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಕನ್ನಡಿಗ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಇದ್ದಾರೆ. ಐದನೇ ಕ್ರಮಾಂಕದಲ್ಲಿ ಸಿಕ್ಸರ್ ಕಿಂಗ್ ಖ್ಯಾತಿಯ ಯುವರಾಜ್ ಸಿಂಗ್ ಇದ್ದಾರೆ. ಇವರನ್ನ ಆಲ್ ರೌಂಡರ್ ಎಂದು ಪರಿಗಣಿಸಿದ್ದಾರೆ.

ಇನ್ನು ಆರನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ಬ್ಯಾಟ್ಸಮನ್ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ತಂಡದ ವೇಗದ ಬೌಲರ್ ಗಳಾಗಿ ಕನ್ನಡಿಗ ಜಾವಗಲ್ ಎಕ್ಸ್ ಪ್ರೆಸ್ ಶ್ರೀನಾಥ್ ಹಾಗೂ ಮುಂಬೈಕರ್ ಏಡಗೈ ವೇಗಿ ಜಹೀರ್ ಖಾನ್ ಇದ್ದಾರೆ. ಇವರಿಗೆ ಜಸಪ್ರಿತ್ ಬುಮ್ರಾ ಸಾಥ್ ನೀಡಲಿದ್ದಾರೆ. ಸ್ಪಿನ್ನರ್ ಗಳಾಗಿ ಜಂಬೋ ಖ್ಯಾತಿಯ ಕನ್ನಡಿಗ ಅನಿಲ್ ಕುಂಬ್ಳೆ ಹಾಗೂ ಟರ್ಬನೇಟರ್ ಖ್ಯಾತಿಯ ಭಜ್ಜಿ, ಹರ್ಭಜನ್ ಸಿಂಗ್ ಇದ್ದಾರೆ. ವಿಶೇಷವೆಂದರೇ ಕಪಿಲ್ ತಮ್ಮ ಈ ತಂಡದಲ್ಲಿ ತಮಗೂ ಹಾಗೂ ಮಾಜಿ ನಾಯಕ ಸೌರವ್ ಗಂಗೂಲಿಗೆ ಸ್ಥಾನ ನೀಡಿಲ್ಲ. ರೋಹಿತ್ ಶರ್ಮಾಗೆ ಏಕೆ ಆರಂಭಿಕ ಸ್ಥಾನ ನೀಡಿಲ್ಲ ಎಂಬ ಅಭಿಮಾನಿಯ ಪ್ರಶ್ನೆಗೆ, ನನ್ನ ತಂಡದಲ್ಲಿ ಆರಂಭಿಕರಾಗಿ ಲೆಜೆಂಡ್ ಗಳು ಇದ್ದಾರೆ ಎಂದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಿಮ್ಮ ಆಯ್ಕೆಯ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.

Leave a Reply

Your email address will not be published. Required fields are marked *