ಸಿಂಪಲ್ ಆಗಿ, ಎಲ್ಲರೂ ಇಷ್ಟ ಪಟ್ಟು ಮತ್ತೆ ಮತ್ತೆ ಕೇಳಿ ಮಾಡಿಸಿಕೊಳ್ಳುವಂತಹ ಟೊಮೊಟೊ ಬ್ಯಾಟ್ ಹೇಗೆ ಮಾಡುವುದು ಗೊತ್ತೇ?

29

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಇಂದು ನಾವು ಸಿಂಪಲ್ಲಾಗಿ ಟಮೋಟೋ ಬಾತ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಸಿಂಪಲ್ಲಾಗಿ ಟಮೋಟೋ ಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು: 2 ಬಟ್ಟಲು ಅಕ್ಕಿ, 8 ನಾಟಿ ಟಮೊಟೊ, 2 ಈರುಳ್ಳಿ, 5 ಚಮಚ ಎಣ್ಣೆ, ಅರ್ಧ ಬಟ್ಟಲು ತೆಂಗಿನಕಾಯಿ ತುರಿ, ಸ್ವಲ್ಪ ಪುದೀನಾ, ಸ್ವಲ್ಪ ಕೊತ್ತಂಬರಿ ಸೊಪ್ಪು, 10 – 12 ಹಸಿಮೆಣಸಿನಕಾಯಿ, 2 ಏಲಕ್ಕಿ, 4 ಲವಂಗ, 1 ಇಂಚು ಚಕ್ಕೆ, 1 ಇಂಚು ಶುಂಠಿ, 1ಗಡ್ಡೆ ಬೆಳ್ಳುಳ್ಳಿ, 2 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.

ಸಿಂಪಲ್ಲಾಗಿ ಟೊಮೇಟೊ ಬಾತ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಮುರಿದ ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ,1 ಚಮಚ ಎಣ್ಣೆಯನ್ನು ಹಾಕಿ 2 – 3 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ಮತ್ತೊಂದು ಕಡೆ ಒಂದು ದೊಡ್ಡ ಬಟ್ಟಲಿಗೆ ಅಕ್ಕಿ ಹಾಗೂ ನೀರನ್ನು ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಚಕ್ಕೆ, ಲವಂಗ, ಏಲಕ್ಕಿಯನ್ನು ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ.

ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಫ್ರೈ ಮಾಡಿಕೊಂಡ ಮಿಶ್ರಣ ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟು ಅದಕ್ಕೆ 4 ಚಮಚ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಮಾಡಿಕೊಂಡ ಚಕ್ಕೆ,ಲವಂಗ, ಏಲಕ್ಕಿ ಪುಡಿ, ಸಣ್ಣಗೆ ಹಚ್ಚಿದ ಈರುಳ್ಳಿ, ಪುದೀನಾವನ್ನು ಹಾಕಿ 3 – 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೇಟೊ, ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಟೊಮೇಟೊ ಸಾಫ್ಟ್ ಆಗುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ತೆಂಗಿನಕಾಯಿ ಪೇಸ್ಟ್ ಅನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 3 ಬಟ್ಟಲು ನೀರು, ನೆನೆಸಿದ ಅಕ್ಕಿ, 2 ಚಮಚ ತುಪ್ಪ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ಸಿಂಪಲ್ಲಾಗಿ ಟೊಮೇಟೊ ಬಾತ್ ಸವಿಯಲು ಸಿದ್ದ.

Get real time updates directly on you device, subscribe now.