ಮತ್ತೊಬ್ಬರ ಹಿಂದೆ ಬಿದ್ದ ಶಾರುಖ್ ಪುತ್ರಿ, ಕ್ಯಾರೇ ಎನ್ನದ ಯುವ ಆಟಗಾರ. ಆ ಆಟಗಾರ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ತಿಳಿದಿರುವಂತೆ ಬಾಲಿವುಡ್ ಚಿತ್ರರಂಗ ಹಾಗೂ ಕ್ರಿಕೆಟ್ ರಂಗಕ್ಕೆ ಹಲವಾರು ವರ್ಷಗಳಿಂದ ಒಂದು ರೀತಿಯ ವಿಶೇಷ ಬಾಂಧವ್ಯವಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಹಲವಾರು ಕ್ರಿಕೆಟ್ ತಾರೆಯರು ಬಾಲಿವುಡ್ ಚಿತ್ರರಂಗದ ನಟಿಯರನ್ನು ಪ್ರೀತಿಸಿದ್ದಾರೆ, ಇನ್ನು ಕೆಲವರು ಮದುವೆ ಕೂಡ ಆಗಿದ್ದಾರೆ. ಇನ್ನೂ ಸಾಕಷ್ಟು ಬ್ರೇಕಪ್ ಹಾಗೂ ಗಾಸಿಪ್ ಗಳ ಸುದ್ದಿ ಕೂಡ ಜೋರಾಗಿರುತ್ತದೆ.
ಇದೀಗ ಅದೇ ರೀತಿ ಘಟನೆಗಳು ಮತ್ತೊಮ್ಮೆ ನಡೆಯುತ್ತಿದ್ದು ಭಾರತದ ಯುವ ಆಟಗಾರನ ಹಿಂದೆ ಮತ್ತೊಮ್ಮೆ ಶಾರುಖಾನ್ ರವರ ಮಗಳು ಬಿದ್ದಿದ್ದಾರೆ, ಆದರೆ ಭಾರತೀಯ ಯುವ ಆಟಗಾರ ಶಾರುಖಾನ್ ಮಗಳು ಎಷ್ಟು ಹಿಂದಿ ಸುತ್ತುತ್ತಿದ್ದರು ಕೂಡ ಕ್ಯಾರೆ ಎನ್ನದೆ ತಮ್ಮ ಆಟದ ಸುತ್ತ ಹಾಗೂ ಮತ್ತೊಬ್ಬರು ಗರ್ಲ್ ಫ್ರೆಂಡ್ ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು ಸ್ನೇಹಿತರೇ ಶಾರುಖಾನ್ ಪುತ್ರಿ ಸುಹಾನ ಖಾನ್ ರವರು ತನ್ನ ತಂದೆಯ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿರುವ ಶುಭಾಂ ಗಿಲ್ ಅವರ ಜೊತೆ ಡೇಟ್ ಮಾಡಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಆದರೆ ಈಗಾಗಲೇ ಶುಭಾಂ ಗಿಲ್ ಅವರ ಹೆಸರು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ರವರ ಜೊತೆ ಕೇಳಿ ಬರುತ್ತಿದ್ದು, ಇವರಿಬ್ಬರು ಈಗಾಗಲೇ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡ ಇದೆ. ಆದರೆ ಒಟ್ಟಿನಲ್ಲಿ ಶಾರುಖಾನ್ ಅವರ ಮಗಳ ಪ್ರಪೋಸಲ್ ಗೆ ಶುಭಾಂ ಗಿಲ್ ರವರು ಯಾವುದೇ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ ಎಂಬುದು ತಿಳಿದು ಬಂದಿದೆ.