ಮಂಜುಗೆ ಸರಿಯಾದ ರೀತಿಯಲ್ಲಿ ಕೈಕೊಟ್ಟ ಮನೆಮಂದಿ, ಪ್ರೇಕ್ಷಕರ ನಂತರ ಮನೆಯ ಮಂದಿ ಕೂಡ ಶಾಕ್ ನೀಡಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ತೆರೆದಿರುವಂತೆ ಮಂಜು ಪಾವಗಡ ರವರು ಕೆಲವೇ ಕೆಲವು ದಿನಗಳ ಹಿಂದೆ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಆದರೆ ಇದೀಗ ಅವರು ಯಾವುದೇ ರೀತಿಯಲ್ಲೂ ಜನರನ್ನು ಮನರಂಜಿಸುವುದನ್ನು ಮರೆತಿರುವ ಕಾರಣ ಮಂಜುರವರು ಬಿಗ್ ಬಾಸ್ ಗೆಲ್ಲುವುದು ಅಸಾಧ್ಯ ಎನ್ನಲಾಗುತ್ತಿದೆ. ಬಹುತೇಕ ಸಮಯವನ್ನು ದಿವ್ಯ ಸುರೇಶ್ ರವರ ಜೊತೆಗೆ ಕಳೆಯುತ್ತಿರುವ ಕಾರಣ ಮತ್ತಷ್ಟು ಜನ ಮಂಜುರವರ ಮೇಲೆ ಕೋಪ ಕೂಡ ಮಾಡಿಕೊಂಡಿದ್ದಾರೆ.

ಅಸಲಿಗೆ ಮಂಜುರವರು ಆಟವನ್ನು ಆರಂಭಿಸಿದಾಗ ಆರಂಭದ ದಿನಗಳಲ್ಲಿ ಮಂಜು ರವರು ಎಲ್ಲರನ್ನೂ ಮನಗೆದ್ದಿದ್ದ ರೀತಿಯನ್ನು ಯಾರೂ ಕೂಡ ಮರೆಯಲು ಸಾಧ್ಯವೇ ಇಲ್ಲ ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ಮಂಜುರವರು ಉತ್ತಮ ಸಂಪೂರ್ಣ ಆಟವನ್ನು ಮರೆತುಬಿಟ್ಟಿದ್ದಾರೆ. ಇಷ್ಟು ಸಾಲದು ಎಂಬಂತೆ ದಿವ್ಯ ಸುರೇಶ್ ರವರ ಜೊತೆಗೆ ಇರುವುದಕ್ಕೆ ಅಲ್ಲದೆ ಮನೆ ಮಂದಿಯನ್ನು ಮೆಚ್ಚಿಸಲು ವಿವಿಧ ರೀತಿಯಲ್ಲಿ ಪ್ರಯತ್ನಗಳನ್ನು ಪಡುತ್ತಿದ್ದಾರೆ.

ಆಟದಲ್ಲಿ ಮನೆಯ ಕೆಲವು ಸ್ಪರ್ಧಿಗಳ ಜೊತೆ ನಿಂತು ಕೊಳ್ಳುವುದು ಹಾಗೂ ಅವರಿಗೆ ಇಷ್ಟವಾಗುವಂತಹ ನಿರ್ಧಾರ ತೆಗೆದುಕೊಳ್ಳುವುದು ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ, ಆದರೆ ಹೀಗೆ ಪ್ರೇಕ್ಷಕರನ್ನು ದೂರ ಮಾಡಿಕೊಂಡು ಮನೆಯ ಮಂದಿಯ ಮನಸ್ಸನ್ನು ನೆಚ್ಹಿಸಲು ಹೋದ ಮಂಜು ಪಾವಗಡ ರವರಿಗೆ ಸ್ಪರ್ಧಿಗಳು ಶಾಕ್ ನೀಡಿದ್ದು, ಆಟ ಆಡಬೇಕಾದರೆ ಕೆಲವರ ಪರ ಮಾತನಾಡುತ್ತಾರೆ, ಮೋಸದ ಆಟ ಆಡುತ್ತಾರೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಅರವಿಂದ್, ದಿವ್ಯ ಉರುದುಗ, ಹಾಗೂ ಪ್ರಶಾಂತ ಸೇರಿದಂತೆ ಬಹುತೇಕರು ಮಂಜು ರವರನ್ನು ನಾಮಿನೇಟ್ ಮಾಡಿದ್ದಾರೆ.