ಭಾರತ ತಂಡಕ್ಕೆ ಆಂಡ್ರೆ ರಸ್ಸೆಲ್ ಸಿಕ್ಕ ಎಂದ ಹರ್ಬಜನ್ ಸಿಂಗ್ ! ಭಾರತದ ರಸೆಲ್ ಯಾರಂತೆ ಗೊತ್ತಾ??

sports

ನಮಸ್ಕಾರ ಸ್ನೇಹಿತರೇ ಈಟಿ20 ಕ್ರಿಕೆಟ್ ನಲ್ಲಿ ಆಲ್-ರೌಂಡರ್ ಗಳು ಎಷ್ಟು ಪ್ರಮುಖ ಪಾತ್ರವಹಿಸುತ್ತಾರೆ ಎಂದು ನಿಮಗೆಲ್ಲರಿಗೂ ತಿಳಿದಿರುತ್ತದೆ. ಯಾಕೆಂದರೆ ಆಲ್-ರೌಂಡರ್ ಗಳು ಬ್ಯಾಟಿಂಗ್ ಹಾಗೂ ಬೋಲಿಂಗ್ ಎರಡರಲ್ಲೂ ಕೂಡ ಪ್ರದರ್ಶನ ನೀಡುವ ಕಾರಣ ಟಿ20 ಮಾದರಿ ಅವರಿಗೆ ಹೇಳಿ ಮಾಡಿಸಿದಂತಿರುತ್ತದೆ. ಅದರಲ್ಲಿಯೂ ವೇಗವಾಗಿ ರನ್ ಗಳಿಸಬಹುದಾದ ಆಟಗಾರ ಸಿಕ್ಕರೆ ಅದು ನಿಜಕ್ಕೂ ಒಂದು ಅದ್ಭುತ.

ಇನ್ನು ವೇಗವಾಗಿ ಬ್ಯಾಟಿಂಗ್ ಮಾಡುವುದಷ್ಟೇ ಅಲ್ಲದೆ ಕೊನೆಗೆ ಓವರ್ಗಳಲ್ಲಿ ಕಡಿಮೆ ರನ್ ಗಳನ್ನು ನೀಡುವ ಮೂಲಕ ವಿಕೆಟುಗಳನ್ನು ಪಡೆಯುವ ಆಟಗಾರ ಸಿಗುವುದು ಬಹಳ ಅಪರೂಪ, ಅದೇ ಕಾರಣಕ್ಕಾಗಿ ವೆಸ್ಟ್ ಇಂಡೀಸ್ ತಂಡದ ಆಟಗಾರ ಆಂಡ್ರ್ಯೂ ರವರನ್ನು ಟಿ ಟ್ವೆಂಟಿ ತಂಡಕ್ಕೆ ಹೇಳಿ ಮಾಡಿಸಿದ ಆಟಗಾರ ಎಂದು ಕರೆಯಲಾಗುತ್ತದೆ.

ಹಲವಾರು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿ ಕೊಟ್ಟಿರುವ ಆಂಡ್ರೆ ರಸೆಲ್ ರವರಂತಹ ಆಟಗಾರರನ್ನು ಪ್ರತಿಯೊಂದು ತಂಡಗಳು ಕೂಡ ತಮ್ಮ ತಂಡದಲ್ಲಿ ಇರಬೇಕು ಎಂಬ ಆಲೋಚನೆ ಮಾಡುತ್ತವೆ. ಇನ್ನು ಭಾರತೀಯ ಅಂತರರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೂಡ ಈ ರೀತಿಯ ಆಟಗಾರನ ಅಗತ್ಯವಿದ್ದು, ಇದೀಗ ಈ ಕುರಿತು ಮಾತನಾಡಿರುವ ಹರ್ಭಜನ್ ಸಿಂಗ್ ಅವರು ಕಳೆದ ಕೆಲವು ಸರಣಿಗಳಲ್ಲಿ ಹಾರ್ದಿಕ್ ಪಾಂಡ್ಯ ಆಟದ ಆಟವನ್ನು ನೋಡಿದರೇ ಖಂಡಿತಾ ಭಾರತಕ್ಕೆ ಮತ್ತೊಬ್ಬ ಆಂಡ್ರೆ ರಸೆಲ್ ಸಿಕ್ಕ ಎಂಬುದು ಕಾಣಿಸುತ್ತದೆ, ಆತ ಫಿಟ್ನೆಸ್ ಮೇಲೆ ಕೆಲಸ ಮಾಡಿ ಬೋಲಿಂಗ್ ನಲ್ಲಿಯೂ ಕೂಡ ಮಿಂಚಲು ಯಶಸ್ವಿಯಾದರೆ ಭಾರತ ತಂಡಕ್ಕೆ ಆಂಡ್ರೆ ರಸೆಲ್ ರೀತಿ ಕೆಲಸ ಮಾಡುತ್ತಾನೆ ಎಂದಿದ್ದಾರೆ.

Leave a Reply

Your email address will not be published. Required fields are marked *