ಧಾರವಾಹಿ ಲೋಕಕ್ಕೆ ಕಾಲಿಟ್ಟ ಕ್ಯಾತ ಹಾಸ್ಯನಟ ! ಬರಲಿದೆ ಹೊಚ್ಚ ಹೊಸ ಧಾರವಾಹಿ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬೆಳ್ಳಿ ಪರದೆಯಲ್ಲಿ ನಮ್ಮನ್ನು ಮನರಂಜಿಸಿರುವ ಹಲವಾರು ಹಿರಿಯ ಕಲಾವಿದರು ಕಿರುತೆರೆಯ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳ ಮೂಲಕ ಧಾರವಾಹಿಗಳ ಲೋಕಕ್ಕೆ ಎಂಟ್ರಿ ಕೊಡುತ್ತಿರುವ ಹಿರಿಯ ಕಲಾವಿದರ ಸಾಲಿಗೆ ಇದೀಗ ಮತ್ತೊಬ್ಬ ಹಿರಿಯ ನಟರು ಸೇರಿಕೊಂಡಿದ್ದಾರೆ.
ಹೌದು ಸ್ನೇಹಿತರೇ ಧಾರಾವಾಹಿ ಲೋಕಕ್ಕೆ ಮತ್ತೊಬ್ಬರು ಹಿರಿಯ ಹಾಸ್ಯ ನಟ ಎಂಟ್ರಿ ಕೊಡಲು ಸಿದ್ಧವಾಗುತ್ತಿದ್ದು, ಆದರೆ ಈ ಬಾರಿ ಈ ಹಿರಿಯ ನಟ, ಧಾರವಾಹಿಯಲ್ಲಿ ಕಲಾವಿದರಾಗಿ ಕಾಣಿಸುತ್ತಿಲ್ಲ ಬದಲಾಗಿ ಧಾರವಾಹಿ ನಿರ್ಮಾಣದ ಮೂಲಕ ಕಿರುತೆರೆಯಲ್ಲಿ ಛಾಪು ಮೂಡಿಸಲು ಸಿದ್ಧವಾಗಿದ್ದಾರೆ.
ಸ್ನೇಹಿತರೆ ನಾವು ಮಾತನಾಡುತ್ತಿರುವುದು ಮತ್ಯಾರ ಬಗ್ಗೆಯಲ್ಲ ನಮ್ಮನ್ನು ಕನ್ನಡ ಚಿತ್ರರಂಗದಲ್ಲಿನ ನಕ್ಕು ನಳಿಸುವುದರಲ್ಲಿ ಅತ್ಯಂತ ಯಶಸ್ಸು ಕಂಡಿರುವ ಹಾಸ್ಯ ಕಲಾವಿದರಲ್ಲೊಬ್ಬರಾಗಿರುವ ಸಾಧು ಕೋಕಿಲ ಅವರು ಇದೀಗ ಗೌರಿಪುರದ ಗಯ್ಯಾಳಿಗಳು ಎಂಬ ಮಹಿಳಾ ಆಧಾರಿತ ಧಾರಾವಾಹಿಯನ್ನು ನಿರ್ಮಾಣ ಮಾಡಲು ಮುಂದಾಗಿದ್ದು ಹಾಸ್ಯದ ಜೊತೆಗೆ ಸಸ್ಪೆನ್ಸ್ ಕೂಡ ಇರುತ್ತದೆ ಎಂಬುದು ತಿಳಿದು ಬಂದಿದೆ, ಈ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಸಾಧುಕೋಕಿಲ ರವರು ಧಾರಾವಾಹಿಯ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಿದ್ದಾರೆ.