ವೇದಿಕೆಯ ಮೇಲೆ ದರ್ಶನ್ ರವರಿಗಾಗಿ ಹೊಸ ಬೇಡಿಕೆಯಿಟ್ಟ ರವಿಶಂಕರ್ ! ಏನಂತ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಾಬರ್ಟ ಸಿನಿಮಾಗಿಂತ 60 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿಯಾಗಿ ಯಶಸ್ಸಿನತ್ತ ದಾಪುಗಾಲು ಇಡುತ್ತಿದೆ, ನಾವು ಈ ಲೇಖನ ಬರೆಯುವ ಸಮಯದವರೆಗೂ 60 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ರಾಬರ್ಟ್ ಚಿತ್ರ ಇನ್ನು ಕೆಲವೇ ಕೆಲವು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಇನ್ನು ಇದೇ ಸಂದರ್ಭದಲ್ಲಿ ರಾಬರ್ಟ್ ಸಿನಿಮಾ ತಂಡ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲೊಂದರಲ್ಲಿ ಚಿತ್ರ ಯಶಸ್ಸು ಕಂಡ ಕಾರಣ ವಿಶೇಷ ಸಮಾರಂಭವನ್ನು ನಡೆಸಿತ್ತು. ಈ ಸಮಯದಲ್ಲಿ ಮಾತನಾಡಿದ ರವಿಶಂಕರ್ ಅವರು ರಾಬರ್ಟ್ ಸಿನಿಮಾದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ ದರ್ಶನ್ ಅವರ ಕುರಿತು ಒಂದು ಹೊಸ ಬೇಡಿಕೆ ಇಟ್ಟಿದ್ದಾರೆ.

ಹೌದು ಸ್ನೇಹಿತರೇ ಸಮಾರಂಭದಲ್ಲಿ ಮಾತನಾಡಿದ ರವಿಶಂಕರ್ ಅವರು ನಾನು ಮೊದಲು ಪ್ರೇಕ್ಷಕರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ, ನಂತರ ನಿರ್ದೇಶಕ ತರುಣ್ ರವರಿಗೆ ಧನ್ಯವಾದ ಹೇಳಲೇಬೇಕು, ಸಿನಿಮಾವನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ, ಇನ್ನು ನಿರ್ಮಾಪಕರಿಗೂ ಕೂಡ ವಿಶೇಷ ಧನ್ಯವಾದಗಳನ್ನು ಹೇಳಲೇಬೇಕು ಎಂದಿದ್ದಾರೆ, ಇದೇ ಸಮಯದಲ್ಲಿ ಡಿ ಬಾಸ್ ಕುರಿತು ಮಾತನಾಡಿ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗುವುದಿಲ್ಲ, ಹಾಲಿವುಡ್ ನವರು ಯಾರ್ಯಾರಿಗೂ ಆಸ್ಕರ್ ಕೊಡುತ್ತಾರೆ, ಮೊದಲು ದರ್ಶನ್ ರವರಿಗೆ ಕೊಡಿ ಎಂದಿದ್ದಾರೆ.