ಅಂದಾಜು ಬಿಡಿ, ರಾಬರ್ಟ್ ಸಿನಿಮಾದ ಒಟ್ಟು ಮೂರು ದಿನದ ಕಲೆಕ್ಷನ್ ಇಲ್ಲಿದೆ ನೋಡಿ ! ನಿರಾಸೆ ಎಂದರು ಡಿ ಬಾಸ್ ಫ್ಯಾನ್ಸ್

ನಮಸ್ಕಾರ ಸ್ನೇಹಿತರೇ ರಾಬರ್ಟ್ ಸಿನಿಮಾ ಮೊದಲನೇ ದಿನ ಸದ್ದು ಮಾಡಿದ ರೀತಿ ನೋಡಿದರೆ ಖಂಡಿತ ಮೂರು ದಿನಗಳಲ್ಲಿ ರಾಬರ್ಟ್ ಸಿನಿಮಾ ಖಂಡಿತ 50 ಕೋಟಿ ರುಪಾಯಿಗಳನ್ನು ಬಾಕ್ಸಾಫೀಸ್ ನಲ್ಲಿ ಬಾಚಿಕೊಳ್ಳಲ್ಲಿದೆ ಎಂಬ ಅಂದಾಜು ಇಡೀ ಗಾಂಧಿ ನಗರದಲ್ಲಿ ಕೇಳಿ ಬಂದಿತ್ತು. ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ತೆಲುಗಿನಲ್ಲಿಯೂ ಕೂಡ ಮೋಡಿ ಮಾಡಿದ್ದ ರಾಬರ್ಟ್ ಸಿನಿಮಾ ಆನ್ಲೈನ್ಗೆ ಬುಕಿಂಗ್ ಅವಕಾಶ ಇದ್ದ ಎಲ್ಲಾ ಥಿಯೇಟರ್ಗಳಲ್ಲಿ ಮೊದಲ ನಾಲ್ಕು ದಿನಕ್ಕೆ ಟಿಕೆಟ್ಗಳು ಬುಕ್ ಆಗಿದ್ದವು.

ಆದಕಾರಣ ಕಂಡಿತ ರಾಬರ್ಟ್ ಸಿನಿಮಾ ಮೂರು ದಿನಗಳಲ್ಲಿ 50 ಕೋಟಿ ಕ್ಲಬ್ ಸೇರಲಿದೆ ಎಂದು ಅಂದಾಜು ಮಾಡಲಾಗಿತ್ತು, ಇನ್ನು ಮೂರನೆ ದಿನ ಶನಿವಾರವಾದ ಕಾರಣ ಬಹುತೇಕರು ರಜೆ ಹೊಂದಿರುತ್ತಾರೆ. ಈ ಸಮಯದಲ್ಲಿ ಹೆಚ್ಚಿನ ಜನರನ್ನು ರಾಬರ್ಟ್ ಸಿನಿಮಾ ಥಿಯೇಟರ್ ಗಳತ್ತ ಸೆಳೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು, ಆದರೆ ಮೂರನೇ ದಿನದ ಕಲೆಕ್ಷನ್ ಇದೀಗ ಬಹಿರಂಗಗೊಂಡಿದ್ದು, ಡಿ ಬಾಸ್ ಅಭಿಮಾನಿಗಳು ಪೈರಸಿ ಆಗಿಲ್ಲ ಎಂದಿದ್ದಾರೆ ಖಂಡಿತ ಇದು ಮತ್ತಷ್ಟು ಯಶಸ್ಸು ಕಳಿಸುತ್ತಿತ್ತು ಎಂದಿದ್ದಾರೆ.

ಹೌದು ಸ್ನೇಹಿತರೇ ಮೊದಲ ದಿನವೇ 17.24 ಕೋಟಿ ಹಣವನ್ನು ರಾಬರ್ಟ್ ಸಿನಿಮಾ ಬಾಚಿತ್ತು, ಕೇವಲ ತೆಲುಗು ರಾಜ್ಯಗಳಲ್ಲಿ 3.21 ಕೋಟಿ ಗಳಿಸಿತ್ತು, ಇನ್ನು ಎರಡನೇ ದಿನ 12.78 ಕೋಟಿ ರೂಪಾಯಿಗಳನ್ನು ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿತ್ತು, ಮೂರನೇ ದಿನ ಶನಿವಾರವಾದ ಕಾರಣ ಕಲೆಕ್ಷನ್ನಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಶನಿವಾರದಂದು 14.10 ಕೋಟಿ ಗಳಿಸುವುದರಲ್ಲಿ ಮಾತ್ರ ಯಶಸ್ವಿಯಾಗಿದೆ, ಒಟ್ಟಿನಲ್ಲಿ ಇಲ್ಲಿಯವರೆಗೂ ರಾಬರ್ಟ್ ಸಿನಿಮಾ 47.33 ಕೋಟಿ ರೂಪಾಯಿಗಳನ್ನು ಗಳಿಸುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಕೇವಲ ಮೂರು ಕೋಟಿ ಗಳಿಸಿದ್ದರೇ ಮೂರನೇ ದಿನದಲ್ಲಿಯೇ ರಾಬರ್ಟ್ ಸಿನಿಮಾ 50 ಕೋಟಿ ಕ್ಲಬ್ ಸೇರಿಕೊಳ್ಳುತ್ತಿತ್ತು.