ರಾಬರ್ಟ್ ಟ್ರೈಲರ್ ನೋಡಿ ಶಾಕ್ ಆದ ಅಲ್ಲು ಅರ್ಜುನ್, ಹೇಳಿದ್ದೇನು ಗೊತ್ತೇ??

26

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅಂದರೆ ಮಾರ್ಚ್ 11 ನೇ ತಾರೀಖಿನಂದು ಕನ್ನಡ ಹಾಗೂ ತೆಲುಗಿನಲ್ಲಿ ಒಂದೇ ದಿನದಂದು ದರ್ಶನ ರವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ರಾಬರ್ಟ್ ಸಿನಿಮಾ ಬಿಡುಗಡೆಯಾಗಲಿದೆ. ಇದೇ ಮೊಟ್ಟ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಅಧಿಕೃತವಾಗಿ ದರ್ಶನ ಅವರ ಚಿತ್ರ ಡಬ್ ಆಗುತ್ತಿದ್ದು ತೆಲುಗು ನಲ್ಲಿಯೂ ಕೂಡ ಕಮಾಲ್ ಮಾಡಲು ಡಿ ಬಾಸ್ ರೆಡಿಯಾಗಿದ್ದಾರೆ

ಇನ್ನು ತೆಲುಗು ಪ್ರೇಕ್ಷಕರನ್ನು ಆಕರ್ಷಿಸಲು ಹೈದರಾಬಾದ್ ನಗರದಲ್ಲಿಯೂ ಕೂಡ ಪ್ರೀ ರಿಲೀಸ್ ಕಾರ್ಯಕ್ರಮವನ್ನು ರಾಬರ್ಟ್ ಚಿತ್ರ ತಂಡ ಆಯೋಜನೆ ಮಾಡಲಾಗಿತ್ತು. ತೆಲುಗು ಚಿತ್ರರಂಗದ ಖ್ಯಾತ ನಟರಾಗಿರುವ ಅಲ್ಲು ಅರ್ಜುನ್ ಹಾಗೂ ಖ್ಯಾತ ನಿರ್ದೇಶಕ ಸುಕುಮಾರ್ ಅವರು ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಸಿನಿಮಾ ಟ್ರೈಲರ್ ನೋಡಿ ಅಲ್ಲು ಅರ್ಜುನ್ ರವರು ಪ್ರತಿಕ್ರಿಯೆ ನೀಡಿದ್ದು, ಇದಕ್ಕೂ ಮುನ್ನ ನಾನು ರಾಬರ್ಟ್ ಟ್ರೈಲರ್ ನೋಡಿದೆ ರಾಬರ್ಟ್ ಸಿನಿಮಾ ಟೈಲರ್ ನೋಡಿದರೆ ಬಹಳ ಆಸಕ್ತಿದಾಯಕವಾಗಿದೆ, ಚಿತ್ರದ ಮೇಕಿಂಗ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ, ಖಂಡಿತವಾಗಲೂ ರಾಬರ್ಟ್ ಸಿನಿಮಾ ತೆಲುಗಿನಲ್ಲಿಯೂ ಕೂಡ ಯಶಸ್ಸಿನ ಹಾದಿ ತಲುಪಲಿದೆ, ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿ ಇದೇ ಮೊದಲ ಬಾರಿಗೆ ದರ್ಶನ್ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ಅಧಿಕೃತವಾಗಿ ತೆಲುಗು ಜನತೆಯ ಪರವಾಗಿ ನಾನು ದರ್ಶನ್ ರವರನ್ನು ಸ್ವಾಗತ ಕೋರುತ್ತಿದ್ದೇನೆ, ಖಂಡಿತ ರಾಬರ್ಟ್ ಸಿನಿಮಾ ಅತಿ ದೊಡ್ಡ ಯಶಸ್ಸು ಪಡೆದು ಕೊಳ್ಳಲಿದೆ ಎಂದು ಹಾರೈಸಿ ಉತ್ತಮ ಮಾತುಗಳನ್ನು ಆಡಿದ್ದಾರೆ.

Get real time updates directly on you device, subscribe now.