ರಶ್ಮಿಕಾಗೆ ತೆಲುಗಿನಲ್ಲಿ ಹೊಸ ಪೈಪೋಟಿ ! ಮೊದಲ ಚಿತ್ರದಲ್ಲಿಯೇ ಕಮಲ್ ಮಾಡಿದ ಕನ್ನಡತಿ ! ಯಾರು ಗೊತ್ತಾ??

Cinema

ನಮಸ್ಕಾರ ಸ್ನೇಹಿತರೇ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ತೆಲುಗಿನ ಚಿತ್ರರಂಗದಲ್ಲಿಯೂ ಕೂಡ ಅದೃಷ್ಟ ಪರೀಕ್ಷೆಗೆ ಇಳಿದು ಯಶಸ್ಸು ಪಡೆದುಕೊಂಡು ಇದೀಗ ತೆಲುಗಿನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ರವರು ಇದೀಗ ತೆಲುಗಿನಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ಸಹಿ ಮಾಡಿರುವ ನಟಿಯಾಗಿ ಹೊರ ಹೊಮ್ಮಿದ್ದಾರೆ. ಸಾಲು-ಸಾಲು ಅವಕಾಶಗಳನ್ನು ಪಡೆದು ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕುತ್ತಿರುವ ರಶ್ಮಿಕಾ ಮಂದಣ್ಣ ರವರು ಕೆಲವೊಂದು ವರ್ಷಗಳಿಂದ ತೆಲುಗಿನ ಚಿತ್ರರಂಗದಲ್ಲಿ ಟಾಪ್ ನಟಿಯರಾಗಿದ್ದ ನಟಿಯರನ್ನು ಕೂಡ ಮೀರಿಸುತ್ತಿದ್ದಾರೆ

ಇತ್ತೀಚಿನ ವರ್ಷಗಳಲ್ಲಿ ತೆಲುಗಿನಲ್ಲಿ ಬಾರಿ ಛಾಪು ಮೂಡಿಸಿದ ರಾಕುಲ್ ಪ್ರೀತ್ ಸಿಂಗ್, ತಮನ್ನಾ ಸೇರಿದಂತೆ ಹಲವಾರು ನಟಿಯರು ಪಡೆಯದ ಅವಕಾಶಗಳನ್ನು ರಶ್ಮಿಕಾ ಮಂದಣ್ಣ ರವರು ಪಡೆಯುತ್ತಿದ್ದಾರೆ. ಪೂಜಾ ಹೆಗಡೆ, ಸಮಂತ ರವರಂತಹ ನಟಿಯರನ್ನು ಹೊರತು ಪಡಿಸಿದರೇ ರಶ್ಮಿಕಾ ಮಂದಣ್ಣ ರವರಿಗೆ ಇಂದಿನ ಯಾವುದೇ ನಟಿಯರು ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ

ಇಂತಹ ಸಂದರ್ಭದಲ್ಲಿ ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ರವರಿಗೆ ಪೈಪೋಟಿಯಾಗಿ ಕನ್ನಡತಿ ಯೊಬ್ಬಳು ಕಾಲಿಟ್ಟಿದ್ದಾರೆ, ಹೌದು ಸ್ನೇಹಿತರೇ ಮಾಡಿದ ಮೊದಲನೇ ಚಿತ್ರದಲ್ಲಿ ತಮ್ಮ ನಟನೆ ಹಾಗೂ ಅದ್ಭುತ ಸೌಂದರ್ಯದ ಮೂಲಕ ಎಲ್ಲರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿರುವ ಉಪ್ಪೆನ ಸಿನಿಮಾದ ನಟಿ ಕೃತಿ ಶೆಟ್ಟಿ ರವರು ಇದೀಗ ನಿರ್ಮಾಪಕರ ಚಿತ್ರವನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ಸಾಕಷ್ಟು ಅಭಿಮಾನಿ ಬಳಗವನ್ನು ಪಡೆದು ಕೊಂಡಿರುವ ಕಾರಣ ನಿರ್ಮಾಪಕರು ಇವರ ಜೊತೆ ಚಿತ್ರ ನಿರ್ಮಾಣ ಮಾಡಲು ಕ್ಯೂ ನಿಂತಿದ್ದಾರೆ, ಹಲವಾರು ಸ್ಟಾರ್ ನೋಡಲು ಕೂಡ ಈ ಕೂಡಲೇ ಈ ನಟಿಯ ಜೊತೆ ಸಿನಿಮಾಗೆ ಸಹಿ ಹಾಕಲು ನಿರ್ಧಾರ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

Leave a Reply

Your email address will not be published. Required fields are marked *