ಕನ್ನಡದ ಹಾಡುಗಾರರು ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಎಂದು ತಿಳಿದರೆ ದಂಗಾಗುತ್ತೀರಾ. ಎಷ್ಟು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಾಡುಗಾರರು ನಿಮಗೆ ಸಿಗುತ್ತಾರೆ, ಅದರಲ್ಲಿಯೂ ಇತ್ತೀಚಿಗೆ ರಿಯಾಲಿಟಿ ಶೋಗಳ ಮೂಲಕ ಕರ್ನಾಟಕದ ಮೂಲೆ ಮೂಲೆಯಿಂದ ಚಿತ್ರರಂಗಕ್ಕೆ ಪರಿಚಯ ಮಾಡುವ ಕೆಲಸ ನಡೆಯುತ್ತಿದೆ. ಆದ ಕಾರಣ ಸಾಕಷ್ಟು ಹಾಡುಗಾರರು ‌ ಇಂದು ನಮಗೆ ಸಿಗುತ್ತಾರೆ. ಅಷ್ಟೇ ಅಲ್ಲದೆ ಹೀಗೆ ಸಾಕಷ್ಟು ಹಾಡುಗಾರರ ಪ್ರತಿಭೆ ಹೊರ ಬಂದಿರುವ ಕಾರಣ ಹಾಡುಗಾರರ ನಡುವಿನ ಪೈಪೋಟಿ ಕೂಡ ಹೆಚ್ಚಾಗಿದೆ.

ಇನ್ನು ನಮ್ಮ ಮುಂದೆ ಇಷ್ಟೆಲ್ಲ ಚೆನ್ನಾಗಿ ಹಾಡುವ ಹಾಡುಗಾರರು ಸಿನಿಮಾದಲ್ಲಿ ಒಂದು ಹಾಡನ್ನು ಹಾಡಲು ಸಂಭಾವನೆ ಎಷ್ಟು ಪಡೆಯುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ, ಒಂದು ವೇಳೆ ನಿಮಗೂ ಆ ಕುತೂಹಲವಿದ್ದಲ್ಲಿ ಕನ್ನಡದ ಟಾಪ್ ಹಾಡುಗಾರರು ಒಂದು ಹಾಡಿಗೆ ಧ್ವನಿ ನೀಡಲು ಎಷ್ಟು ಪಡೆದುಕೊಳ್ಳುತ್ತಾರೆ ಎಂಬುದನ್ನು ನಾವು ಎಂದು ನಿಮಗೆ ತಿಳಿಸಿಕೊಡುತ್ತೇವೆ ಕೇಳಿ.

ಸ್ನೇಹಿತರೇ ಕನ್ನಡದ ಟಾಪ್ ಸಿಂಗರ್ ಗಳಲ್ಲಿ ಒಬ್ಬರಾಗಿರುವ ಅನುರಾಧ ಭಟ್ ರವರು ಒಂದು ಹಾಡಿಗೆ ಸ್ವಾನಿ ನೀಡಲು ಮೂವತ್ತು ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ, ಇವರಂತೆಯೇ ಅರ್ಚನಾ ಉಡುಪ ರವರು ಕೂಡ 30000 ಪಡೆಯುತ್ತಾರೆ, ಇನ್ನು ನಂದಿತ ರವರು 40000 ಪಡೆದರೇ ರಾಜೇಶ್ ಕೃಷ್ಣನ್ ರವರು ಒಂದು ಹಾಡಿಗೆ ಧ್ವನಿ ನೀಡಲು 1 ಲಕ್ಷ ಪಡೆಯುತ್ತಾರೆ.

ಇನ್ನು ಖ್ಯಾತ ಹಾಡುಗಾರ್ತಿ ಚಿತ್ರ ರವರು ಒಂದು ಲಕ್ಷ ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ, ಇನ್ನುಳಿದಂತೆ ಕನ್ನಡದ ಟಾಪ್ ಹಾಡುಗಾರರಲ್ಲಿ ಒಬ್ಬರಾಗಿರುವ ವಿಜಯ ಪ್ರಕಾಶ್ ಅವರು ಒಂದು ಹಾಡಿಗೆ ಬರೋಬ್ಬರಿ ಎರಡು ಲಕ್ಷ ಪಡೆದರೆ, ಸೋನು ನಿಗಮ್ ರವರು 4 ಲಕ್ಷ ಹಾಗೂ ಶ್ರೇಯ ಗೋಶಲ್ ರವರು ಎಲ್ಲರಿಗಿಂತ ಹೆಚ್ಚು ಅಂದರೆ 6 ಲಕ್ಷ ರೂಪಾಯಿಗಳನ್ನು ಒಂದು ಹಾಡಿಗೆ ಸಂಭಾವನೆಯಾಗಿ ಪಡೆಯುತ್ತಾರೆ.

Get real time updates directly on you device, subscribe now.