ಪೊಗರು ಚಿತ್ರದ ಎರಡು ದಿನಗಳ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?? ಧೂಳೆಬ್ಬಿಸಿದ ಪುಗುರು ಚಿತ್ರ
ನಮಸ್ಕಾರ ಸ್ನೇಹಿತರೇ ಕನ್ನಡದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪೊಗರು ಚಿತ್ರ ಕಳೆದ ಶುಕ್ರವಾರ ಇಡೀ ರಾಜ್ಯಾದ್ಯಂತ ಬಿಡುಗಡೆ ಯಾಗಿತ್ತು. ಇದೀಗ ದಕ್ಷಿಣ ಭಾರತದ ತಮಿಳುನಾಡು ಹಾಗೂ ಆಂಧ್ರ ಪ್ರದೇಶ ರಾಜ್ಯಗಳಲ್ಲಿಯೂ ಕೂಡ ಬಿಡುಗಡೆಯಾಗಿರುವ ಪೊಗರು ಚಿತ್ರ ಬಾಕ್ಸಾಫೀಸ್ ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಹೌದು ಸ್ನೇಹಿತರೆ ಬಿಡುಗಡೆಯಾದ ಮೊದಲ ದಿನ ನಿಮಗೆಲ್ಲರಿಗೂ ತಿಳಿದಿರುವಂತೆ ಪೊಗರು ಚಿತ್ರ ಬರೋಬ್ಬರಿ 10.7 ಕೋಟಿ ಹಣವನ್ನು ಮಾಡುವುದರಲ್ಲಿ ಯಶಸ್ವಿಯಾಗಿತ್ತು.
ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಪೊಗರು ಚಿತ್ರ ಬಹು ತೇಕ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಬಿಡುಗಡೆಯ ದಿನ ಕೆಲವೊಂದು ಪ್ರದೇಶಗಳಲ್ಲಿ ಬಿಡುಗಡೆ ಯಾಗಿದೆ ಇರುವ ಪೊಗರು ಚಿತ್ರ ತಂಡ ಶನಿವಾರ ಮತ್ತು ಭಾನುವಾರ ಮತ್ತಷ್ಟು ಕಡೆ ಬಿಡುಗಡೆಯಾಗಿದೆ. ಆದ ಕಾರಣ ಶನಿವಾರ ಉತ್ತಮ ಹೆಚ್ಚಿನ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ.
ಹೌದು ಸ್ನೇಹಿತರೇ ಇದೀಗ ಬಂದಿರುವ ಮೂಲಗಳ ಪ್ರಕಾರ ಪೊಗರು ಚಿತ್ರವು ಮೊದಲ ದಿನ 10 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತು, ತದ ನಂತರ ಶನಿವಾರ ಏಳು ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಎರಡು ದಿನಗಳಲ್ಲಿ 17 ಕೋಟಿಗೂ ಹಣವನ್ನು ಗಳಿಸಿರುವ ಪೊಗರು ಚಿತ್ರ ಖಂಡಿತ ಮುಂದಿನ ದಿನಗಳಲ್ಲಿ ಮತ್ತಷ್ಟು ಕಲೆಕ್ಷನ್ ಮಾಡಲಿದೆ ಎಂಬ ಅಂದಾಜಿನ ಮಾತುಗಳು ಗಾಂಧಿ ನಗರದಲ್ಲಿ ಕೇಳಿ ಬಂದಿವೆ. ಇನ್ನು ನೀವು ಒಂದು ವೇಳೆ ಈ ಚಿತ್ರವನ್ನು ನೋಡಿದ್ದರೇ, ಈ ಚಿತ್ರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.