ಟಾಪ್ ನಟಿಯಾಗಿ ಮಿಂಚಿದ ಈ ನಟಿಗೆ ಬಂದಿರುವ ಪರಿಸ್ಥಿತಿ ಯಾರಿಗೂ ಬೇಡ ! ಬದುಕಲು ಈ ನಟಿ ಮಾಡುತ್ತಿರುವುದು ಏನು ಗೊತ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ನೀವು ರಾತ್ರೋ ರಾತ್ರಿ ಸ್ಟಾರ್ಗಳು ಆಗಬಹುದು, ಹೌದು ಅದೆಷ್ಟೋ ಜನ ರಾತ್ರೋರಾತ್ರಿ ಸ್ಟಾರ್ ಗಿರಿಯನ್ನು ಪಡೆದುಕೊಂಡು ಮಿಂಚುತ್ತಿದ್ದಾರೆ. ಎಲ್ಲರೂ ಹೀಗೆ ಸ್ಟಾರ್ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಪ್ರತಿಯೊಂದು ಚಿಕ್ಕ ಚಿಕ್ಕ ಮೆಟ್ಟಿಲಿನಲ್ಲಿಯೂ ಕೂಡ ಸವಾಲುಗಳನ್ನು ಎದುರಿಸಿ ಬೆಳೆದಿರುವ ಸ್ಟಾರ್ ಗಳು ಕೂಡ ಸಾಕಷ್ಟು ಜನರು ಇದ್ದಾರೆ. ಆದರೆ ಹೀಗೆ ಕಷ್ಟಪಟ್ಟು ಮೇಲೆ ಬಂದಿರುವ ನಟರು ಯಶಸ್ಸು ಸಿಕ್ಕಾಗ ಹಿಗುವುದಿಲ್ಲ, ಸೋತಾಗ ನಿಲ್ಲುವುದಿಲ್ಲ

ಈಗ್ಯಾಕೆ ಈ ಫಿಲಾಸಫಿ ಎಂದುಕೊಂಡಿರಾ, ಸ್ನೇಹಿತರೇ ಈ ಮಾತಿಗೆ ಉತ್ತಮ ನಿದರ್ಶನ ಎಂದರೆ ತೆಲುಗು ಚಿತ್ರರಂಗದ ಖ್ಯಾತ ನಟಿ ಮುಮೈತ್ ಖಾನ್. ಇವರು ರಾತ್ರೋ ರಾತ್ರಿ ಒಂದು ಹಾಡಿನ ಮೂಲಕ ಸಿಕ್ಕಾಪಟ್ಟೆ ಹೆಸರು ಮಾಡಿದರು, ಸಾಲು ಸಾಲು ಸಿನಿಮಾಗಳಲ್ಲಿ ಐಟಂ ಸಾಂಗಲ್ಲಿ ಡ್ಯಾನ್ಸ್ ಮಾಡಿದರು, ಇವರು ಡ್ಯಾನ್ಸ್ ಮಾಡಿದ್ದಾರೆ ಎಂದರೆ ಆ ಸಾಂಗ್ ಖಂಡಿತ ಯಶಸ್ಸು ಗಳಿಸುತ್ತದೆ ಎಂದು ನಿರ್ಮಾಪಕರು ನಂಬಿದ್ದರು. ಕೆಲವೊಂದು ವರ್ಷಗಳ ಕಾಲ ಹೇಗಿತ್ತು ಎಂದರೆ ಪ್ರತಿ ಸಿನಿಮಾದಲ್ಲಿಯೂ ಇವರ ಐಟಂ ಸಾಂಗ್ ಇರುತ್ತಿತ್ತು.

ಹೀಗೆ ಯಶಸ್ಸಿನ ಮೇಲೆ ಯಶಸ್ಸುಗಳಿಸುತ್ತೀರುವಾಗ ದಿನವೂ ಚಿತ್ರೀಕರಣದಲ್ಲಿ ಭಾಗವಹಿಸಿದ ಮುಮೈತ್ ಖಾನ್ ರವರು ಯಶಸ್ಸು ಸಿಕ್ಕ ತಕ್ಷಣ ತಮ್ಮ ಜೀವನವನ್ನು ಅತಿರೇಕಕ್ಕೆ ತೆಗೆದುಕೊಂಡು ಹೋದರು. ಹೌದು ಸ್ನೇಹಿತರೇ ಬಾಯ್ ಫ್ರೆಂಡ್ ಗಾಗಿ ಕೋಟ್ಯಂತರ ರೂಪಾಯಿಯನ್ನು ಖರ್ಚು ಮಾಡಿದರು. ಅಷ್ಟೇ ಯಾಕೆ ಬಾಯ್ ಫ್ರೆಂಡ್ ಹೇಳಿದ ಎಂದು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು 40 ಲಕ್ಷ ರೂಪಾಯಿ ಕೂಡ ಖರ್ಚು ಮಾಡಿದರು, ವಿಶ್ವದ ಸಿಕ್ಕ ಸಿಕ್ಕ ಪ್ರದೇಶಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಾಯ್ ಫ್ರೆಂಡ್ ಜೊತೆ ಪ್ರವಾಸಕ್ಕೆ ಹೋದರು.

ಇಷ್ಟೆಲ್ಲ ಮಾಡಿದರೂ ಪರವಾಗಿರಲಿಲ್ಲ ಆದರೆ ನಿರ್ಮಾಪಕರನ್ನು ಹಾಗೂ ನಿರ್ದೇಶಕರನ್ನು ಕಾಲ್ ಶೀಟ್ ನೀಡಿದರೂ ಕೂಡ ಚಿತ್ರೀಕರಣಕ್ಕೆ ಹೋಗದೆ ಫೋನ್ ಗಳು ಅಟೆಂಡ್ ಮಾಡದೇ ಧಿ’ಮಾಕು ತೋರಿಸಲು ಆರಂಭಿಸಿದರು. ಹೀಗೆ ದಿನೇ ದಿನೇ ತನ್ನ ಐಶಾರಾಮಿ ಜೀವನವನ್ನು ಹೆಚ್ಚಿಸಿಕೊಂಡು ದುಡಿಯಲು ಮಾತ್ರ ಆಸಕ್ತಿ ತೋರದೆ ಹೋದರು. ಕೊನೆಗೆ ಹೇಗಾಯಿತು ಎಂದರೆ ಐಶಾರಾಮಿ ಜೀವನಕ್ಕೆ ಹೊಂದಿ ಕೊಂಡ ಬಳಿಕ ಇರುವ ಹಣವೆಲ್ಲಾ ಖಾಲಿಯಾಯಿತು

ಐಷಾರಾಮಿ ಜೀವನಕ್ಕೆ ಹೊಂದುಕೊಂಡು ತದ ನಂತರ ಇರುವ ಹಣವೆಲ್ಲ ಖಾಲಿಯಾದಾಗ ಅವಕಾಶಗಳ ಕಡೆ ತಿರುಗಿ ನೋಡಿದರೆ ಯಾರು ಅವಕಾಶ ನೀಡಲು ನಿರಾಕರಿಸಿದರು, ಕೊನೆಗೆ ಎಷ್ಟರ ಮಟ್ಟಕ್ಕೆ ಬಂದು ನಿಂತಿದೆ ಎಂದರೆ ಆಂಧ್ರ ಪ್ರದೇಶದ ಒಂದು ಚಿಕ್ಕ ಹಳ್ಳಿಯಲ್ಲಿ ಜಾತ್ರೆಯಲ್ಲಿ ರೆಕಾರ್ಡ್ ಡ್ಯಾನ್ಸ್ ಮಾಡುವ ಪರಿಸ್ಥಿತಿ ಎದುರಾಗಿತ್ತು, ಬೇರೆ ವಿಧಿ ಇಲ್ಲದೆ ಹಣಕ್ಕಾಗಿ ಜಾತ್ರೆಯಲ್ಲಿಯೂ ಕೂಡ ನೃತ್ಯ ಮಾಡಲು ಒಪ್ಪಿಕೊಂಡರು.

Get real time updates directly on you device, subscribe now.