ಖ್ಯಾತ ನಟಿ ಲಕ್ಷ್ಮಿ ರವರು ಮೂರು ಮದುವೆಯಾಗಲು ಕಾರಣವೇನು ಗೊತ್ತೇ?? ಮಗಳು ವಿರೋಧ ಮಾಡಿದ್ದು ಹೇಗೆ ಗೊತ್ತೇ?

Cinema

ನಮಸ್ಕಾರ ಸ್ನೇಹಿತರೇ ಭಾರತ ಚಿತ್ರರಂಗ ಕಂಡ ಅದ್ಭುತ ನಟಿಯರಲ್ಲಿ ಒಬ್ಬರಾಗಿರುವ ಲಕ್ಷ್ಮಿ ರವರು ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿ ನಟನೆಯ ಮೂಲಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪಂಚಭಾಷಾ ಸಿನಿಮಾಗಳಲ್ಲಿ ನಟನೆ ಮಾಡಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗೆ ಯಶಸ್ಸುಗಳಿಸಿದ ಲಕ್ಷ್ಮಿ ಅವರ ವೈಯಕ್ತಿಕ ಜೀವನದ ಕುರಿತು ನಿಮಗೆ ಗೊತ್ತೇ?? ಒಂದು ವೇಳೆ ಗೊತ್ತಿಲ್ಲ ಎಂದಾದಲ್ಲಿ ಬನ್ನಿ ಈ ಕುರಿತು ಇದ್ದು ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತೇವೆ

ಸ್ನೇಹಿತರೇ ಮೊದಲನೆಯದಾಗಿ ಇವರು ಚಿತ್ರರಂಗ ಹೇಗೆ ಪ್ರವೇಶಿಸಿದರು ಎಂಬುದನ್ನು ನಾವು ನೋಡುವುದಾದರೆ, ನಟಿ ಲಕ್ಷ್ಮಿ ರವರ ಕುಟುಂಬ ಮೊದಲಿನಿಂದಲೂ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿತ್ತು. ಆದಕಾರಣ ಲಕ್ಷ್ಮಿ ರವರು ಚಿತ್ರರಂಗಕ್ಕೆ ಬರಲು ಹೆಚ್ಚು ಶ್ರಮ ವಹಿಸಬೇಕಾಗಲಿಲ್ಲ. ಕೇವಲ 15 ವರ್ಷವಿರುವಾಗಲೇ ನಟಿಯಾಗಿ ತಮಿಳು ಚಿತ್ರದಲ್ಲಿ ನಟನೆ ಮಾಡಿ ಪಾದರ್ಪಣೆ ಮಾಡಿದ್ದರು, ಅದೇ ವರ್ಷವೇ ತೆಲುಗು ಚಿತ್ರರಂಗಕ್ಕೆ ಕೂಡ ಕಾಲಿಟ್ಟರು. ಇದಾದ ಬಳಿಕ ಕನ್ನಡ ಸಿನಿಮಾಗಳಲ್ಲಿಯೂ ಕೂಡ ನಟಿಸುವ ಅವಕಾಶ ಪಡೆದು ಡಾಕ್ಟರ್ ರಾಜಕುಮಾರ್ ಅವರಂತಹ ನಟರ ಜೊತೆ ನಟಿಸುವ ಅವಕಾಶ ಕೂಡ ಪಡೆದುಕೊಂಡರು.

ಎಲ್ಲಾ ಸರಿ ಹೋಗುತ್ತಿದೆ ಎನ್ನುವಷ್ಟರಲ್ಲಿ ನಟನೆ ಶುರು ಮಾಡಿದ 2 ವರ್ಷಗಳಲ್ಲಿ ಲಕ್ಷ್ಮಿ ಅವರ ಪೋಷಕರು ಭಾಸ್ಕರನ್ ಎಂಬುವವರನ್ನು ಲಕ್ಷ್ಮಿ ರವರಿಗೆ ಮದುವೆ ಮಾಡಿಕೊಟ್ಟರು. ದಾಂಪತ್ಯ ಕೂಡ ಚೆನ್ನಾಗಿ ಸಾಗಿತ್ತು, ಈ ದಂಪತಿಗಳಿಗೆ ಐಶ್ವರ್ಯ ಎಂಬ ಪುತ್ರಿ ಜನಿಸಿದರು. ಹೀಗೆ ಪುತ್ರಿ ಜನಿಸಿದ ಕೆಲವೇ ಕೆಲವು ಸಮಯದಲ್ಲಿ ದಂಪತಿಗಳಿಬ್ಬರೂ ವೈಯಕ್ತಿಕ ಕಾರಣದಿಂದ ದೂರವಾದರು. ಇದಾದ ಬಳಿಕ ಮಲಯಾಳಂ ಚಿತ್ರರಂಗದ ನಟ ಮೋಹನ್ ಎಂಬುವವರನ್ನು ಪ್ರೀತಿಸಿ ಲಕ್ಷ್ಮಿ ರವರು ಮದುವೆಯಾದರು, ಆದರೆ ವಿಪರ್ಯಾಸ ಏನೆಂದರೆ ಈ ದಂಪತಿಗಳ ನಡುವೆ ವೈಯಕ್ತಿಕ ಕಾರಣಗಳಿಂದ ಮತ್ತೊಮ್ಮೆ ವಿಚ್ಛೇದನ ಪಡೆದುಕೊಳ್ಳುವಂತೆ ಆಯಿತು. ತದನಂತರ ವೈಯಕ್ತಿಕ ಜೀವನದಿಂದ ದೂರ ಉಳಿದ ಲಕ್ಷ್ಮಿ ರವರು ಚಿತ್ರರಂಗದಲ್ಲಿ ಹೆಚ್ಚಿನ ಸಮಯ ಕಳೆಯಲು ನಿರ್ಧಾರ ಮಾಡಿ ಸಾಕಷ್ಟು ಜನಪ್ರಿಯತೆ ಗಳಿಸಿದರು.

ಹಲವಾರು ಸಿನಿಮಾಗಳಲ್ಲಿ ಮಾಡಿ ಯಶಸ್ಸು ಗಳಿಸಿದರು, ಇದೇ ಸಂದರ್ಭದಲ್ಲಿ ನಟ ಹಾಗೂ ನಿರ್ದೇಶಕ ರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಶಿವಚಂದ್ರ ಎಂಬುವವರನ್ನು ಪ್ರೀತಿಸಿ ಮದುವೆಯಾದರು. ಆದರೆ ಹೀಗೆ ಮೂರನೇ ಮದುವೆಯ ಸಮಯದಲ್ಲಿ ಐಶ್ವರ್ಯ ರವರು ಕೂಡ ಮದುವೆಯ ವಯಸ್ಸಾಗಿತ್ತು. ಆದ ಕಾರಣ ಅಮ್ಮ ಮದುವೆಯಾಗುವುದನ್ನು ಐಶ್ವರ್ಯ ರವರು ವಿರೋಧ ಮಾಡಲು ಆರಂಭಿಸಿದರು, ಅಷ್ಟೇ ಅಲ್ಲದೆ ನಾನು ಶಿವ ಚಂದ್ರನ್ ರವರನ್ನು ಸಾರ್ ಎಂದು ಕರೆಯುತ್ತಿದ್ದೇನೆ ಈಗ ಹೀಗೆ ಅಪ್ಪ ಎಂದು ಹೇಗೆ ಕರೆಯಲಿ ಎಂದು ಹಠ ಹಿಡಿದರು. ಇದಾದ ಬಳಿಕ ಅಮ್ಮನ ಮಾತು ಕೇಳದೆ ಅಮ್ಮನಿಗೂ ಕೂಡ ಹೇಳದೆ ಐಶ್ವರ್ಯ ರವರು ಮದುವೆಯಾಗುತ್ತಾರೆ. ಇದಾದ ಕೆಲವು ವರ್ಷಗಳ ಬಳಿಕ ಐಶ್ವರ್ಯ ರವರು ಕೂಡ ಪತಿಯಿಂದ ವಿಚ್ಛೇದನ ಪಡೆದುಕೊಂಡು ದೂರವಾಗುತ್ತಾರೆ.

Leave a Reply

Your email address will not be published. Required fields are marked *