ಕನ್ಫ್ಯೂಷನ್ ಇಲ್ಲವೇ ಇಲ್ಲ ! ಬಿಗ್ ಬಾಸ್ ಮನೆಗೆ ಮೂವರು ಹೋಗುವುದು ಖಚಿತ ! ಯಾರ್ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇದೀಗ ಮೂಡಿಸಲು ಬಿಗ್ ಬಾಸ್ ಕಾರ್ಯಕ್ರಮ ಸಜ್ಜಾಗಿದೆ. ಎಲ್ಲಿ ನೋಡಿದರೂ ಬಿಗ್ ಬಾಸ್ ಕುರಿತು ಚರ್ಚೆ ನಡೆಯುತ್ತಿದೆ. ಯಾವ್ಯಾವ ರಂಗದಿಂದ ಯಾವ್ಯಾವ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಎಂಬುದರ ಕುರಿತು ಚರ್ಚೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಬಿಗ್ಬಾಸ್ ಮನೆಗೆ ಹೋಗುವ ಮೂರು ಸ್ಪರ್ಧಿಗಳ ಹೆಸರು ಖಚಿತವಾಗಿದೆ.

ಹೌದು ಸ್ನೇಹಿತರೇ ಕಿರುತೆರೆ ಮೂಲಗಳಿಂದ ಬಿಗ್ ಬಾಸ್ ಸೀಸನ್ ಕನ್ನಡ ಎಂಟರಲ್ಲಿ ಭಾಗವಹಿಸುತ್ತಿರುವ ಮೂರು ಸ್ಪರ್ಧಿಗಳ ಹೆಸರು ಖಚಿತವಾಗಿದ್ದು, ಇಂದಿನ ಈ ಲೇಖನದಲ್ಲಿ ಮೂರು ಸ್ಪರ್ಧಿಗಳು ಯಾರು ಯಾರು ಎಂಬುದನ್ನು ನಾವು ತಿಳಿಸಿ ಕೊಡುತ್ತೇವೆ. ಹಾಗೂ ಅದಕ್ಕೂ ಮುನ್ನ ನೆನಪಿರಲಿ ಈಗಾಗಲೇ ಹಿತ ಚಂದ್ರಶೇಖರ್, ವೈಷ್ಣವಿ ಗೌಡ ಹಾಗೂ ಕಿರುತೆರೆ ನಟಿ ಕಾವ್ಯ ಗೌಡರವರು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ.

ಇನ್ನು ಯಾರ್ಯಾರು ಬಿಗ್ಬಾಸ್ ಮನೆಗೆ ತೆರಳುತ್ತಾರೆ ಎಂಬ ಖಚಿತ ಮಾಹಿತಿಯನ್ನು ನಾವು ನೋಡುವುದಾದರೆ ದಿಲ್ವಾಲ ಸಿನಿಮಾ ನಟ ಸುಮಂತ್ ರವರನ್ನು ಬಿಗ್ ಬಾಸ್ ತಂಡ ಭೇಟಿ ಮಾಡಿ ಆಹ್ವಾನ ನೀಡಿದ ಕೂಡಲೇ ಶೋನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಇನ್ನು ಎರಡನೆಯದಾಗಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಚಿರ ಪರಿಚಿತವಾಗಿರುವ ನಯನಾ ಅವರ ಹೆಸರು ಫೈನಲ್ ಆಗಿದೆ. ಇನ್ನುಳಿದಂತೆ ಕೊನೆಯದಾಗಿ ಕನ್ನಡ ಚಿತ್ರರಂಗದಿಂದ ಬಹುತೇಕ ದೂರವುಳಿದಿರುವ ಎಕ್ಸ್ಕ್ಯೂಸ್ಮಿ ಚಿತ್ರದ ಖ್ಯಾತಿಯ ಸುನಿಲ್ ರಾವ್ ರವರು ಬಿಗ್ ಬಾಸ್ ಗೆ ಬರುವುದು ಖಚಿತವಾಗಿದೆ.