ರಾಧಾಕೃಷ್ಣ ಧಾರವಾಹಿಯ ನಟರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?? ಧಾರವಾಹಿಗಳಿಗೆ ಇಷ್ಟೊಂದು ಕೊಡ್ತಾರಾ??

36

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಳೆದ ಕೆಲವೇ ಕೆಲವು ತಿಂಗಳುಗಳ ಹಿಂದೆ ಅಂದರೆ 2020 ರ ಜನವರಿ ಸಮಯದಲ್ಲಿ ನೀವು ಡಬ್ಬಿಂಗ್ ಧಾರವಾಹಿಗಳನ್ನು ಕನ್ನಡದಲ್ಲಿ ಬಿಡುಗಡೆ ಮಾಡಿ ಎಂದ ತಕ್ಷಣ, ಪ್ರತಿಯೊಬ್ಬರ ಬಾಯಲ್ಲೂ ಕೂಡ ಕನ್ನಡದಲ್ಲಿ ಡಬ್ಬಿಂಗ್ ಧಾರಾವಾಹಿಗಳನ್ನು ನೋಡುವ ಯಾವುದೇ ಪ್ರೇಕ್ಷಕರು ಇಲ್ಲ ಎಂಬ ಉತ್ತರ ಕೂಡಲೇ ಬರುತ್ತಿತ್ತು. ಆದರೆ ಎಲ್ಲರ ಹಾಗೂ ಎಲ್ಲಾ ಮಾಧ್ಯಮಗಳಲ್ಲಿ ಲೆಕ್ಕಾಚಾರಗಳನ್ನು ಉಲ್ಟಾ ಮಾಡುವಂತೆ ಪ್ರೇಕ್ಷಕರು ಡಬ್ಬಿಂಗ್ ಧಾರಾವಾಹಿಗಳನ್ನು ಮೆಚ್ಚಿಕೊಂಡರು.

ಅದರಲ್ಲಿಯೂ ಮಹಾ ಭಾರತ ಹಾಗೂ ರಾಧಾ ಕೃಷ್ಣ ಧಾರವಾಹಿಗೆ ಮರುಳಾಗದ ಜನರೇ ಇಲ್ಲ. ಹಲವಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದರೂ ಕೂಡ ಧಾರವಾಹಿಗಳು ಕನ್ನಡದಲ್ಲಿ ಮತ್ತೊಮ್ಮೆ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾದವು. ಡಬ್ಬಿಂಗ್ ಧಾರವಾಹಿ ಆದರೂ ಕೂಡ ಜನರು ಈ ಧಾರಾವಾಹಿಗಳಲ್ಲಿ ನಟನೆ ಮಾಡಿದ ಕಲಾವಿದರಿಗೆ ಅಭಿಮಾನಿಗಳಾಗಿ ಬಿಟ್ಟರು. ಧಾರವಾಹಿಗಳು ಕೂಡ ಉತ್ತಮ ಟಿಆರ್ಪಿ ಪಡೆದುಕೊಂಡು ಯಶಸ್ವಿ ಧಾರಾವಾಹಿಗಳಲ್ಲಿ ಸ್ಥಾನ ಪಡೆದುಕೊಂಡವು

ಹೀಗೆ ಲೊಕ್ಡೌನ್ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಡಬ್ಬಿಂಗ್ ಆದ ಧಾರವಾಹಿಗಳಲ್ಲಿ ರಾಧಾಕೃಷ್ಣ ದಾರವಾಹಿ ಕೂಡ ಒಂದು. ಈ ದಾರವಾಹಿಯಲ್ಲಿ ರಾಧಾಳ ನಿಷ್ಕಲ್ಮಶ ಪ್ರೀತಿ ನೋಡಿ ಎಲ್ಲರೂ ಮನಸೋತಿದ್ದರು. ರಾಧಾ ಹಾಗೂ ಕೃಷ್ಣನ ನಡುವಿನ ಪವಿತ್ರವಾದ ಬಾಂಧವ್ಯವನ್ನು ಬಹಳ ಅದ್ಭುತವಾಗಿ ತೋರಿಸಲಾಗಿತ್ತು ಇನ್ನು ಧಾರವಾಹಿಗೆ ಅಷ್ಟೇ ಅಲ್ಲ ಧಾರವಾಹಿಯಲ್ಲಿ ನಟನೆ ಮಾಡಿದ ಕಲಾವಿದರಿಗೂ ಕೂಡ ಸಾಲು ಸಾಲು ಅಭಿಮಾನಿಗಳು ಹುಟ್ಟಿಕೊಂಡರು. ಅದೇ ಕಾರಣಕ್ಕಾಗಿ ನಾವು ಇಂದು ರಾಧಾಕೃಷ್ಣ ಧಾರವಾಹಿಯಲ್ಲಿ ನಟನೆ ಮಾಡಿರುವ ವಿವಿಧ ಪಾತ್ರಗಳ ಕಲಾವಿದರ ಸಂಭಾವನೆ ಎಷ್ಟು ಎಂಬುದನ್ನು ತಿಳಿಸುತ್ತೇವೆ ಕೇಳಿ.

ಸ್ನೇಹಿತರೆ ರಾಧಾಕೃಷ್ಣ ಧಾರವಾಹಿಯಲ್ಲಿ ಚಂದ್ರವಳ್ಳಿ ಎಂಬ ಪಾತ್ರಕ್ಕೆ ಜೀವ ತುಂಬಿರುವ ನಟಿ ಪ್ರೀತಿ ರವರು ಬರೋಬ್ಬರಿ ಒಂದು ಎಪಿಸೋಡಿಗೆ 35 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ. ವಿಶೇಷವೇನೆಂದರೆ ಇದು ಕನ್ನಡದ ಟಾಪ್ ನಟರು ಪಡೆಯುವ ಸಂಭಾವನೆ ಗಿಂತ ಹೆಚ್ಚು. ಇನ್ನು ಕಿರ್ತಿದಾ ಪಾತ್ರಕ್ಕೆ ಜೀವ ತುಂಬಿರುವ ಆಕಾಂಕ್ಷ ರಾವತ್ ರವರು ಪ್ರತಿ ಎಪಿಸೋಡಿನಲ್ಲಿ ನಟನೆ ಮಾಡಲು 45 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ‌‌.

ಇನ್ನು ವೃಷಬಾನು ಪಾತ್ರಕ್ಕೆ ಜೀವ ತುಂಬಿರುವ ರಾಕೇಶ್ ರವರು ಒಂದು ದಿನಕ್ಕೆ ಬರೋಬ್ಬರಿ 50 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಇನ್ನುಳಿದಂತೆ ಜಟಿಲ ಪಾತ್ರಕ್ಕೆ ಜೀವ ತುಂಬಿರುವ ಮಾಲಿನಿ ಸೇನ್ ಗುಪ್ತಾ ರವರು ಒಂದು ದಿನಕ್ಕೆ 40 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಇನ್ನುಳಿದಂತೆ ಮಹಾಪಂಡಿತ್ ಉಗ್ರಪತ್ ಪಾತ್ರಕ್ಕೆ ಜೀವ ತುಂಬಿರುವ ನೀಮೈ ರವರು ಪ್ರತಿ ಎಪಿಸೋಡಿಗೆ 35 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ.

ಇನ್ನು ದೇವಕಿಯ ಪಾತ್ರದಲ್ಲಿ ನಟನೆ ಮಾಡಿರುವ ಫಲಾಕ್ ನಾಜ್ ರವರು ಒಂದು ದಿನಕ್ಕೆ ಮೂವತ್ತು ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ, ವಾಸುದೇವ್ ಪಾತ್ರನಿರ್ವಹಣೆ ಮಾಡಿರುವ ನವೀನ್ ಜಿಂಗರ್ ಒಂದು ದಿನಕ್ಕೆ 60 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ,

ಇನ್ನುಳಿದಂತೆ ಯಶೋದೆ ಪಾತ್ರದಲ್ಲಿ ನಟನೆ ಮಾಡಿರುವ ರೀನಾ ಕಪೂರ್ ರವರು ಒಂದು ಎಪಿಸೋಡಿಗೆ ಬರೋಬ್ಬರಿ 60 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ, ಇನ್ನುಳಿದಂತೆ ನಂದ ಪಾತ್ರದಲ್ಲಿ ನಟನೆ ಮಾಡಿರುವ ಗವಿ ಚಹಲ್ ರವರು ಒಂದು ಎಪಿಸೋಡಿಗೆ 55 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ ಎಂಬುದು ತಿಳಿದುಬಂದಿದೆ.

ಇನ್ನುಳಿದಂತೆ ಸತ್ಯಭಾಮೆ ಪಾತ್ರಕ್ಕೆ ಜೀವ ತುಂಬಿರುವ ಅಲೆಯ ಘೋಷ್ ರವರು ಒಂದು ದಿನಕ್ಕೆ ಬರೋಬ್ಬರಿ ಇಪ್ಪತ್ತು ಸಾವಿರ ರೂಪಾಯಿಗಳನ್ನು ಸಂಭಾವನೆ ಪಡೆಯುತ್ತಾರೆ, ಇನ್ನು ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಒಂದಾದ ರುಕ್ಮಿಣಿ ಪಾತ್ರವನ್ನು ನಿರ್ವಹಣೆ ಮಾಡಿರುವ ಝಲಕ್ ದೇಸಾಯಿರವರು ಒಂದು ದಿನಕ್ಕೆ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಹಾಗೂ ಅಯಾನ್ ಪಾತ್ರ ನಿರ್ವಹಣೆ ಮಾಡಿರುವ ರುಚಿ ರಾಜ್ ಪವಾರ್ ಒಂದು ದಿನಕ್ಕೆ 80 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಇನ್ನು ಧಾರವಾಹಿಯಲ್ಲಿ ಅತ್ಯದ್ಭುತ ನಟನೆ ಮಾಡಿರುವ ಕಂಸನ ಪಾತ್ರದಲ್ಲಿ ನಟನೆ ಮಾಡಿರುವ ಅರ್ಪಿತ್ ರಂಕ ಅವರು ಒಂದು ದಿನಕ್ಕೆ ಬರೋಬ್ಬರಿ 130000 ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದರೆ.

ಬಲರಾಮನ ಪಾತ್ರದಲ್ಲಿ ನಟನೆ ಮಾಡಿರುವ ಬಸಂತ್ ಭಟ್ ರವರು ಒಂದು ದಿನಕ್ಕೆ ಒಂದುವರೆ ಲಕ್ಷ ಸಂಭಾವನೆ ಪಡೆದರೆ, ರಾಧೆಯ ಪಾತ್ರದಲ್ಲಿ ನಟನೆ ಮಾಡಿ ಎಲ್ಲರ ಮನಗೆದ್ದಿರುವ ಮಲ್ಲಿಕಾ ಸಿಂಗ್ ರವರು ಒಂದು ಎಪಿಸೋಡಿಗೆ 2,25,000 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ ಇನ್ನು ಕೊನೆಯದಾಗಿ ಕೃಷ್ಣನ ಪಾತ್ರ ನಿರ್ವಹಣೆ ಮಾಡಿರುವ ಸುಮೇಧ್ ರವರು ಒಂದು ದಿನಕ್ಕೆ ಬರೋಬ್ಬರಿ 2,75,000 ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ.

Get real time updates directly on you device, subscribe now.