99% ಜನರು ಮೊಟ್ಟೆ ತಿನ್ನುವಾಗ ತಪ್ಪುಗಳನ್ನು ಮಾಡುತ್ತಿದ್ದಾರೆ. ಹಾಗಿದ್ದರೆ ಹೇಗೆ ಸೇವಿಸಬೇಕು ಗೊತ್ತೇ??

0

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಬಹುತೇಕರ ಮನೆಯಲ್ಲಿ ಮೊಟ್ಟೆ ಎಂಬುದು ದಿನನಿತ್ಯದ ಸೇವಿಸುವ ಪದಾರ್ಥಗಳಲ್ಲಿ ಒಂದಾಗಿದೆ. ವೈಜ್ಞಾನಿಕವಾಗಿ ಮೊಟ್ಟೆಯಲ್ಲಿ ಸಾಕಷ್ಟು ಪೋಷಕಾಂಶಗಳು ಇರುವ ಕಾರಣ ದೇಹಕ್ಕೆ ಅತ್ಯಗತ್ಯವೆಂದು ಎಂಬುದನ್ನು ಬಹುತೇಕರು ಅರ್ಥಮಾಡಿಕೊಂಡಿರುವ ಕಾರಣ ಸಾಮಾನ್ಯವಾಗಿ ಎಲ್ಲರೂ ಕೂಡ ಮೊಟ್ಟೆ ಸೇವನೆ ಮಾಡುತ್ತಾರೆ. ಮೊಟ್ಟೆಯ ಪೋಷಕಾಂಶಗಳು ಬೇರೆ ಪದಾರ್ಥಗಳಲ್ಲಿ ಸಿಗುವುದಿಲ್ಲ ಎಂದರ್ಥವಲ್ಲ ಆದರೆ ಇದೇ ಪೋಷಕಾಂಶಗಳನ್ನು ನಾವು ಬೇರೆ ಪದಾರ್ಥಗಳಿಂದ ಪಡೆಯಬೇಕು ಎಂದರೆ ನಾವು ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ

ಹೀಗಿರುವಾಗ ಸಾಮಾನ್ಯವಾಗಿ ಎಲ್ಲರೂ ಕೂಡ ಮೊಟ್ಟೆಯಲ್ಲಿರುವ ಜೀವಸತ್ವ ಗಳಿಗಾಗಿ ಹಾಗೂ ಪೋಷಕಾಂಶಗಳಿಗೆ ಆಗಿ ಮೊಟ್ಟೆಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಇನ್ನು ವೈದ್ಯರ ಶಿಫಾರಸ್ಸಿನ ಲೆಕ್ಕಾಚಾರವನ್ನು ನಾವು ತೆಗೆದುಕೊಳ್ಳುವುದಾದರೆ ವೈದ್ಯರು ಒಬ್ಬ ವ್ಯಕ್ತಿಯು ಕನಿಷ್ಠ ಒಂದು ಮೊಟ್ಟೆಯನ್ನು ತಿನ್ನಬೇಕು ಎಂಬ ಸಲಹೆಯನ್ನು ನೀಡುತ್ತಾರೆ. ಇನ್ನು ನಾವು ಜನರು ಮೊಟ್ಟೆ ಹೇಗೆ ಸೇವಿಸುತ್ತಾರೆ ಎಂಬುದನ್ನು ಗಮನಿಸುವುದಾದರೆ ಕೆಲವರು ಹಸಿ ಮೊಟ್ಟೆ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ, ಹೀಗೆ ಹಸಿ ಮೊಟ್ಟೆ ತಿನ್ನುವ ಜನರು ಬಹುತೇಕ ನಾಟಿ ಮೊಟ್ಟೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಅರ್ಧ ಬೇಯಿಸಿ ಮೊಟ್ಟೆಯನ್ನು ತಿನ್ನಲು ಇಷ್ಟಪಡುತ್ತಾರೆ, ಇನ್ನು ಕೆಲವರು ಅದೇ ಸಮಯದಲ್ಲಿ ವಿವಿಧ ರೀತಿಯ ಅಡುಗೆ ಅಂದರೆ ಉದಾಹರಣೆಗೆ ಆಮ್ಲೆಟ್ ಅಥವಾ ಇನ್ಯಾವುದೇ ಗ್ರೇವಿ ಮಾಡಿಕೊಂಡು ತಿನ್ನಲು ಇಷ್ಟಪಡುತ್ತಾರೆ.

ಹೀಗೆ ಯಾವುದೇ ರೀತಿಯಲ್ಲಿ ನಾವು ಮೊಟ್ಟೆಯಿಂದ ಸೇವಿಸಿದರು ನಮಗೆ ಸರಿಯಾದ ರೀತಿಯಲ್ಲಿ ಪ್ರಯೋಜನ ಸಿಗುತ್ತದೆ. ಆದರೆ ಯಾವುದೇ ರೀತಿಯಲ್ಲಿ ಬೇಕಾದರೂ ಸೇವಿಸುವ ಸಂದರ್ಭದಲ್ಲಿ ಹಲವಾರು ಜನ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಹೀಗೆ ಶೇಕಡ 99 ರಷ್ಟು ಜನ ಮಾಡುವ ತಪ್ಪುಗಳಿಂದ ನಮಗೆ ಅತ್ಯಗತ್ಯವೇ ಎನಿಸಿರುವ ಪೋಷಕಾಂಶಗಳನ್ನು ನಾವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದಕಾರಣ ನಾವು ಇಂದು ಮೊಟ್ಟೆಯನ್ನು ಸೇವಿಸಲು ಯಾವುದು ಉತ್ತಮ ಮಾರ್ಗ ಹಾಗೂ ನೀವು ವಿವಿಧ ರೀತಿಯ ರೆಸಿಪಿ ಮಾಡುತ್ತೀರಾ ಎಂದರೆ ಯಾವ ರೀತಿಯಲ್ಲಿ ಮೊಟ್ಟೆಯನ್ನು ಆ ರೆಸಿಪಿಗೆ ಸೇರಿಸಿದರೆ ಉತ್ತಮ ಎಂಬುದನ್ನು ತಿಳಿಸಿ ಕೊಡುತ್ತೇವೆ.

ಹೌದು ಸ್ನೇಹಿತರೆ ನೀವು ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ಜಿಮ್ಮಿಗೆ ಅಥವಾ ಇನ್ಯಾವುದೇ ಇತರ ಕಠಿಣ ಕ್ರಮಗಳ ಮೂಲಕ ವ್ಯಾಯಾಮ ಮಾಡುತ್ತಿದ್ದರೆ ಸಾಮಾನ್ಯವಾಗಿ ಎಲ್ಲರೂ ಅರ್ಧ ಬೇಯಿಸಿದ ಮೊಟ್ಟೆಗಳನ್ನು ತಿನ್ನುತ್ತಾರೆ, ಆದರೆ ವೈಜ್ಞಾನಿಕವಾಗಿ ನಾವು ನೋಡುವುದಾದರೆ ಸರಿಯಾಗಿ ಬೇಯಿಸದೇ ಇರುವ ಮೊಟ್ಟೆಗಳನ್ನು ಸೇವಿಸುವುದು ಸುರಕ್ಷಿತವಲ್ಲ. ಹೀಗೆ ಮಾಡುವುದರಿಂದ ಮೊಟ್ಟೆಯೂ ನಮ್ಮ ದೇಹದಲ್ಲಿ ಬಹಳ ಸುಲಭವಾಗಿ ಜೀರ್ಣವಾಗುತ್ತದೆ. ವೈಜ್ಞಾನಿಕ ಸಂಶೋಧನೆಗಳನ್ನು ನಾವು ಗಮನಿಸುವುದಾದರೆ ಸಾಮಾನ್ಯವಾಗಿ ಅರ್ಧ ಬೇಯಿಸಿದ ಅಥವಾ ಹಸಿ ಮೊಟ್ಟೆಯಲ್ಲಿ ಕೇವಲ ಶೇಕಡಾ 51ರಷ್ಟು ಪ್ರೋಟಿನ್ ಇರುತ್ತದೆ, ಅದೇ ನೀವು ಮೊಟ್ಟೆಯನ್ನು ಸಂಪೂರ್ಣವಾಗಿ ಬೇಯಿಸಿ ತಿಂದರೆ ರೂಟಿನ ಪ್ರಮಾಣ ಶೇಕಡ 91 ರಷ್ಟಕ್ಕೆ ಹೇರುತ್ತದೆ. ಆದಕಾರಣ ನೀವು ಸರಿಯಾಗಿ ಮೊಟ್ಟೆಯನ್ನು ಬೇಯಿಸಿ ಸೇವಿಸಬೇಕು

ಇನ್ನು ಹಾಗೆಂದು ನೀವು ಹೆಚ್ಚಿನ ತಾಪಮಾನದಲ್ಲಿ ಮೊಟ್ಟೆಯನ್ನು ಬೇಗ ಬೇಗ ಬೇಯಿಸಿ ತಿನ್ನಬಾರದು, ಹಾಗೂ ಮುಂಜಾನೆ ಭೆಯಿಸಿದ್ದೇವೆ ಮಧ್ಯಾಹ್ನ ಮತ್ತೊಮ್ಮೆ ಬಿಸಿ ನೀರಿನಲ್ಲಿ ಬಿಸಿಮಾಡಿ ತಿನ್ನೋಣ ಎನ್ನಬಾರದು. ಯಾಕೆಂದರೆ ಹೀಗೆ ಹೆಚ್ಚಿನ ತಾಪಮಾನದಲ್ಲಿ ಬೇಯಿಸುವುದು ಅಥವಾ ಮತ್ತೆ ಮತ್ತೆ ಬೇಯಿಸುವುದನ್ನು ಮಾಡಿದರೆ ಮೊಟ್ಟೆಯಲ್ಲಿರುವ ಪೋಷಕಾಂಶಗಳು ಕಣ್ಮರೆಯಾಗುತ್ತವೆ. ಈ ರೀತಿಯ ಮೊಟ್ಟೆಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಯಾವುದೇ ಲಾಭ ಸಿಗುವುದಿಲ್ಲ. ವೈಜ್ಞಾನಿಕ ಸಂಶೋಧನೆಗಳಿಂದ ನಮಗೆ ತಿಳಿದುಬರುವುದೇನೆಂದರೆ ಮೊಟ್ಟೆಯನ್ನು ಅತಿಯಾಗಿ ಬೇಯಿಸಿದಲ್ಲಿ ವಿಟಮಿನ್ ಎ ಪೋಷಕಾಂಶವು ಶೇಕಡ 20ರಷ್ಟು ಕಡಿಮೆಯಾಗುತ್ತದೆ. ಇನ್ನು ಮೊಟ್ಟೆಗಳನ್ನು ಮೈಕ್ರೋವೇವ್ ಮಾಡುವುದರಿಂದ ಅಥವಾ ಹೆಚ್ಚಾಗಿ ಕುದಿಸುವುದರಿಂದ ಮೊಟ್ಟೆಯಲ್ಲಿರುವ ಉತ್ಕರ್ಷಣ ನಿರೋಧಕ ಶೇಕಡಾ ಆರರಿಂದ 18% ಕಡಿಮೆಯಾಗಿ ಬಿಡುತ್ತದೆ.

ಇನ್ನು ನೇರವಾಗಿ ಮೊಟ್ಟೆಗಳನ್ನು ಯಾವ ರೀತಿ ಸೇವಿಸಬೇಕು ಎಂಬುದನ್ನು ಹೇಳುವುದಾದರೆ, ನೀವು ಮೊದಲನೆಯದಾಗಿ ತೂಕ ಇಳಿಸಿಕೊಳ್ಳುವ ಪ್ರಯತ್ನ ಪಡುತ್ತಿದ್ದಾರೆ ನೀವು ಸರಿಯಾದ ಹದದಲ್ಲಿ ಬೇಯಿಸಿದ ಮೊಟ್ಟೆಗಳನ್ನು ಸೇವಿಸಬೇಕು. ಇಲ್ಲವಾದಲ್ಲಿ ಹೆಚ್ಚಿನ ತಾಪಮಾನ ಸ್ಥಿರವಾಗಿ ಉಳಿಯುವಂತೆ ನೋಡಿಕೊಳ್ಳಿ. ಅಷ್ಟೇ ಅಲ್ಲದೇ ನೀವು ಇತರ ಪದಾರ್ಥಗಳನ್ನು ಮೊಟ್ಟೆ ಬಳಸಿ ತಯಾರು ಮಾಡುವಾಗ ನೀವು ಪ್ಯಾನ್‌ನಲ್ಲಿ ಸೂರ್ಯಕಾಂತಿ ಎಣ್ಣೆ ಅಥವಾ ಅವಕಾಡೊ ಎಣ್ಣೆಯನ್ನು ಸಹ ಬಳಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.