ಬಿಡುಗಡೆಯಾಯಿತು ಟಿಆರ್ಪಿ ಲಿಸ್ಟ್, ಮಹತ್ವದ ಬದಲಾವಣೆ, ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಗೊತ್ತಾ??

Cinema

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇಂದು ಗುರುವಾರ ಕಳೆದ ವಾರದ ಟಿಆರ್ಪಿ ಬಿಡುಗಡೆಯಾಗಿದೆ. ನಾವು ಇಂದು ಕಳೆದ ವಾರದ ಟಿಆರ್ಪಿ ಲೆಕ್ಕಾಚಾರದ ಪ್ರಕಾರ ಯಾವ ಧಾರವಾಹಿಗಳು ಯಾವ ಸ್ಥಾನ ಪಡೆದುಕೊಂಡಿದೆ ಎಂಬುದನ್ನು ತಿಳಿಸುತ್ತೇವೆ. ಟಿಆರ್ಪಿ ಬಿಡುಗಡೆಮಾಡುವ ಬರ್ಕ ಸಂಸ್ಥೆಯು ರಿಯಾಲಿಟಿ ಶೋಗಳನ್ನು ಕೂಡ ಗಣನೆಗೆ ತೆಗೆದುಕೊಂಡು ಬಿಡುಗಡೆ ಮಾಡುತ್ತದೆ. ಆದರೆ ನಾವು ಎಂದಿನಂತೆ ರಿಯಾಲಿಟಿ ಶೋಗಳನ್ನು ಪಕ್ಕಕ್ಕಿಟ್ಟು ಕೇವಲ ಧಾರವಾಹಿಗಳ ಟಿಆರ್ಪಿ ಆಧಾರದ ಮೇಲೆ ಬಿಡುಗಡೆ ಮಾಡುತ್ತಿದ್ದೇವೆ ನೋಡಿ

ಸ್ನೇಹಿತರೇ ಮೊದಲನೇ ಸ್ಥಾನದಲ್ಲಿ ಬಿಡುಗಡೆಯಾದ ದಿನದಿಂದಲೂ ಭದ್ರವಾಗಿ ನೆಲೆಯೂರಿರುವ ಸತ್ಯ ಧಾರವಾಹಿ ಮುಂದುವರೆದಿದೆ. ಇನ್ನು ಎರಡನೇ ಸ್ಥಾನದಲ್ಲಿ ಕಳೆದ ವಾರ ಮೂರನೆ ಸ್ಥಾನಕ್ಕೆ ಜಾರಿದ್ದ ಗಟಿಮೇಳ ದಾರವಾಹಿ ಮತ್ತೊಮ್ಮೆ ಎರಡನೇ ಸ್ಥಾನಕ್ಕೆ ಬಂದಿದೆ. ಇನ್ನು ಮೂರನೇ ಸ್ಥಾನದಲ್ಲಿ ಜೊತೆ ಜೊತೆಯಲ್ಲಿ ದಾರವಾಹಿ ಸ್ಥಾನ ಪಡೆದುಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ನಾಗಿಣಿ ಧಾರಾವಾಹಿ ಮುಂದುವರೆದಿದ್ದು ಐದನೇ ಸ್ಥಾನದಲ್ಲಿ ಕಳೆದವಾರ ದಂತೆ ಪಾರು ಧಾರವಾಹಿ ಪಡೆದುಕೊಂಡಿದೆ.

ಇನ್ನು ಆರನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುವ ಮಂಗಳ ಗೌರಿ ಮದುವೆ ಧಾರಾವಾಹಿ ಸ್ಥಾನ ಪಡೆದುಕೊಂಡಿದ್ದು, ಏಳನೇ ಸ್ಥಾನವನ್ನು ಗಿಣಿರಾಮ ಮತ್ತು ಮುದ್ದು ಲಕ್ಷ್ಮಿ ಧಾರಾವಾಹಿ ಗಳು ಹಂಚಿಕೊಂಡಿವೆ. ಇನ್ನು ಕಳೆದ ವಾರ 7 ನೇ ಸ್ಥಾನದಲ್ಲಿದ್ದ ಕನ್ನಡತಿ ಧಾರಾವಾಹಿ ಈ ವಾರ ಒಂದು ಸ್ಥಾನ ಕೆಳಕ್ಕೆ ಜಾರಿ 8 ನೇ ಸ್ಥಾನ ಪಡೆದುಕೊಂಡಿದೆ. ಒಂಬತ್ತನೇ ಸ್ಥಾನದಲ್ಲಿ ನನ್ನರಸಿ ರಾಧೆ ಧಾರಾವಾಹಿ ಸ್ಥಾನ ಪಡೆದುಕೊಂಡಿದ್ದು, ಹತ್ತನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಗೀತಾ ಧಾರವಾಹಿ ಸ್ಥಾನ ಪಡೆದುಕೊಂಡಿದೆ. ಈ ಟಿಆರ್ಪಿ ಲೆಕ್ಕಾಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ನಿಮ್ಮ ನೆಚ್ಚಿನ ಧಾರವಾಹಿ ಎಂಬುದನ್ನು ತಿಳಿಸುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *