ಮಜಾ ಟಾಕೀಸ್ ನಲ್ಲಿ ಕುರಿ, ಸೃಜನ್ ಮತ್ತು ಶ್ವೇತಾ ಚಂಗಪ್ಪ ರವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಮಜಾ ಟಾಕೀಸ್ ನ ಕುರಿತು ಯಾರಿಗೆ ತಿಳಿದಿಲ್ಲ ಹೇಳಿ. ಸಾಕಷ್ಟು ಜನಪ್ರಿಯತೆ ಪಡೆದುಕೊಂಡು ಬಿಡುಗಡೆಯಾದ ದಿನದಿಂದಲೂ ಕೂಡ ಉತ್ತಮ ಟಿಆರ್ಪಿ ಗಳಿಸುತ್ತಿರುವ ಮಜಾ ಟಾಕೀಸ್ ನೋಡಿದರೆ ನಗದವರಿಲ್ಲ. ಹೊಟ್ಟೆ ಹುಣ್ಣಾಗುವಷ್ಟು ನಕ್ಕುನಗಿಸುವ ಈ ಶೋ ಜನರ ಅಚ್ಚುಮೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಇನ್ನು ಈ ಕಾರ್ಯಕ್ರಮಗಳಲ್ಲಿ ವಿವಿಧ ರೀತಿಯ ಕಲಾವಿದರು ತಮ್ಮದೇ ಆದ ರೀತಿಯಲ್ಲಿ ಜನರಿಗೆ ಮನರಂಜನೆ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿರುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ವಿವಿಧ ರೀತಿಯಲ್ಲಿ ಸಂಭಾವನೆ ಪಡೆಯುತ್ತಾರೆ. ಮಂಡ್ಯ ರಮೇಶ್, ಕುರಿ ಪ್ರತಾಪ್ ಸೇರಿದಂತೆ ಇನ್ನೂ ಹಲವಾರು ಹಾಸ್ಯ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ನಾವು ಇಂದಿನ ಈ ಲೇಖನದಲ್ಲಿ ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರವಹಿಸುವ ಸೃಜನ್ ಲೋಕೇಶ್, ಕುರಿ ಪ್ರತಾಪ್ ಮತ್ತು ಶ್ವೇತ ಚಂಗಪ್ಪ ರವರು ಒಂದು ಎಪಿಸೋಡಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಸ್ನೇಹಿತರೇ ಕಿರುತೆರೆಯ ಮೂಲಗಳ ಪ್ರಕಾರ ಸುಜನ್ ಲೋಕೇಶ್ ರವರು ಒಂದು ಎಪಿಸೋಡ್ ನಲ್ಲಿ ಭಾಗವಹಿಸಲು 70 ರಿಂದ 75 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಇನ್ನು ಒಂದು ಸಿನಿಮಾ ದಿನದ ಶೂಟಿಂಗ್ಗೆ 30ರಿಂದ 35 ಸಾವಿರ ರೂಪಾಯಿ ಪಡೆಯುವ ಕುರಿ ಪ್ರತಾಪ್ ರವರು, ಈ ಕಾರ್ಯಕ್ರಮಕ್ಕೆ ಮಾತ್ರ ನಲವತ್ತರಿಂದ ಐವತ್ತು ಸಾವಿರ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ‌ ಇನ್ನು ಶ್ವೇತಾ ಚಂಗಪ್ಪ ರವರು ಒಂದು ಎಪಿಸೋಡೆ 30 ರಿಂದ 35 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ ಎಂಬುದು ತಿಳಿದುಬಂದಿದೆ. ಒಟ್ಟಿನಲ್ಲಿ ಅದೇನೇ ಆಗಲಿ ಹೀಗೆ ಕಾರ್ಯಕ್ರಮ ಅತ್ಯುತ್ತಮ ವಾಗಿ ಮೂಡಿ ಬರಲಿ ಎಂದು ಆರೈಸುತ್ತೇವೆ.