ಜೊತೆ ಜೊತೆಯಲಿ ಧಾರವಾಹಿಯಲ್ಲಿ ರಾಜನಂದಿನಿ ಪಾತ್ರ ಪ್ರಸಾರವಾಗುವುದು ಯಾವಾಗ ಗೊತ್ತಾ??
ನಮಸ್ಕಾರ ಸ್ನೇಹಿತರೇ ಜೊತೆ ಜೊತೆಯಲಿ ಧಾರವಾಹಿ ಆರಂಭವಾದ ಹಲವಾರು ದಿನಗಳಿಂದ ರಾಜನಂದಿನಿ ಪಾತ್ರದ ಕುರಿತು ದಿನೇ ದಿನೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚುತ್ತದೆ. ಪ್ರೇಕ್ಷಕರು ರಾಜನಂದಿನಿ ಹಾಗೂ ಆರ್ಯವರ್ಧನ್ ಗಂಡ ಹೆಂಡತಿ ಎಂದು ತಿಳಿದಿದ್ದರೂ ಕೂಡ ಕತೆಯಲ್ಲಿ ಯಾವ ರೀತಿಯ ಮಹತ್ವದ ತಿರುವನ್ನು ರಾಜನಂದಿನಿ ಪಾತ್ರ ನೀಡಲಿದೆ ಎಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ರಾಜನಂದಿನಿ ಪಾತ್ರ ಯಾವಾಗ ಪ್ರಸಾರವಾಗುತ್ತದೆ ಎಂದು ಎಲ್ಲರೂ ಕಾಯುತ್ತಿರುವಾಗ ಕೊನೆಗೂ ಆ ಕ್ಷಣಗಳು ನಿಮಗಾಗಿ ಬರುತ್ತಿವೆ.
ಹೌದು ಸ್ನೇಹಿತರೇ ಮರಾಠ ಭಾಷೆಯ ಧಾರವಾಹಿಗಳ ಮೂಲಗಳ ಪ್ರಕಾರ ರಾಜನಂದಿನಿ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ದೊರಕಿದ್ದು, ಪಾತ್ರದ ಕುರಿತು ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ. ಸ್ನೇಹಿತರೇ ರಾಜನಂದಿನಿ ಎಂಬ ಪಾತ್ರದ ಕುರಿತು ನಾವು ಮಾತನಾಡುವುದಾದರೇ ರಾಜನಂದಿನಿ ರವರು ವರ್ಧನ್ ಗ್ರೂಪ್ಸ್ ಮಾಲೀಕನ ಮಗಳಾಗಿರುತ್ತಾರೆ. ಶಾರದಾ ದೇವಿಯವರ ದಂಪತಿಗಳ ಮಗಳು. ಕೆಲಸಕ್ಕೆ ಎಂದು ವರ್ಧನ್ ಗ್ರೂಪ್ನಲ್ಲಿ ಸೇರಿಕೊಂಡ ಆರ್ಯವರ್ಧನ್ ರವರು ರಾಜನಂದಿನಿ ರವರನ್ನು ಪ್ರೀತಿಸಿ ಮದುವೆಯಾಗುತ್ತಾರೆ.
ಇಲ್ಲಿ ಕಥೆಯಲ್ಲಿ ಕೊಂಚ ಬದಲಾವಣೆಯಾಗುತ್ತದೆ ಯಾಕೆಂದರೆ ಮರಾಠಿ ಭಾಷೆಯಲ್ಲಿ ರಾಜನಂದಿನಿ ರವರನ್ನು ಆರ್ಯವರ್ಧನ್ ರವರು ವಿಲನ್ ಆಗಿ ಅವರನ್ನು ಇಹಲೋಕ ತ್ಯಜಿಸುವಂತೆ ಮಾಡಿರುತ್ತಾರೆ. ಆದರೆ ಕನ್ನಡದಲ್ಲಿ ಕಥೆ ಕೊಂಚ ಬದಲಾಗಿದ್ದು ರಾಜನಂದಿನಿ ರವರ ಪಾತ್ರ ಅಂತ್ಯ ವಾಗುವುದಕ್ಕೆ ಹಾಗೂ ರಾಜನಂದಿನಿ ಹಳೆಯ ಗೋಡನ್ ಏನೋ ಸಂಬಂಧ ಇರುತ್ತದೆ. ಅದೇ ಕಾರಣಕ್ಕಾಗಿ ಇಂದಿಗೂ ಕೂಡ ಆರ್ಯವರ್ಧನ್ ರವರು ಹಾಗೂ ನನ್ನನ್ನು ಬಿಟ್ಟು ಕೊಟ್ಟಿರುವುದಿಲ್ಲ.
ಇನ್ನು ಹೀಗೆ ರಾಜನಂದಿನಿ ಪಾತ್ರ ಕೊನೆಗೊಂಡ ಮೇಲೆ ಮನೆ ಮಗನಾಗಲು ಆರ್ಯವರ್ಧನ್ ನಿರ್ಧರಿಸುತ್ತಾರೆ. ಶಾರದಾ ದೇವಿ ರವರ ಮಗನಾಗಿ ಆರ್ಯವರ್ಧನ್ ರವರು ವರ್ಧನ ಗ್ರೂಪ್ ಮಾಲೀಕತ್ವವನ್ನು ಕೈಗೆತ್ತಿಕೊಳ್ಳುತ್ತಾರೆ. ಇನ್ನು ಹರ್ಷವರ್ಧನ್ ರವರ ಆರ್ಯವರ್ಧನ್ ಅವರ ಸ್ವಂತ ತಮ್ಮನಲ್ಲ, ಹರ್ಷವರ್ಧನ್ ರವರು ಅಸಲಿಗೆ ರಾಜನಂದಿನಿ ರವರ ತಮ್ಮ. ಶಾರದಾ ದೇವಿ ರವರಿಗೆ ಒಂದು ಗಂಡು ಮಗು ಹಾಗೂ ಒಂದು ಹೆಣ್ಣು ಮಗು ವಿರುತ್ತದೆ, ಹೆಣ್ಣು ಮಗು ರಾಜನಂದಿನಿ, ಹರ್ಷವರ್ಧನ್ ಮತ್ತೊಬ್ಬ ಮಗ. ಹೀಗೆ ಕಥೆ ಸಾಗುತ್ತದೆ. ಇಂತಹ ಸಂದರ್ಭದಲ್ಲಿ ಆರ್ಯ ಹಾಗೂ ಅನು ಸಿರಿಮನೆ ರವರ ಮದುವೆ ನಡೆಯುವ ಸಂದರ್ಭ ಎದುರಾದಾಗ, ರಾಜನಂದಿನಿ ಪಾತ್ರದ ಕುರಿತು ಅನುಸಿರಿಮನೆ ರವರಿಗೆ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಹೀಗೆ ಕಥೆಯಲ್ಲಿ ಇನ್ನು ಕೆಲವೇ ಕೆಲವು ದಿನಗಳಲ್ಲಿ ಹಲವಾರು ತಿರುವುಗಳು ಪಡೆದುಕೊಳ್ಳಲಿವೆ. ಆದಕಾರಣ ಜೊತೆ ಜೊತೆಯಲಿ ಧಾರಾವಾಹಿಯನ್ನು ತಪ್ಪದೆ ನೋಡುತ್ತಿರಿ.