ಬಯಲಾಯಿತು ಶಾಕಿಂಗ್ ಮಾಹಿತಿ, ಬಿಗ್ ಬಾಸ್ 8 ಕ್ಕೆ ಸುದೀಪ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೆ??

Cinema

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಬಿಗ್ ಬಾಸ್ ಕಾರ್ಯ ಕ್ರಮದ ಸೀಸನ್ 8 ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ ನಡೆಸಲು ಭರ್ಜರಿ ಸಿದ್ದತೆಗಳು ನಡೆದಿವೆ. ಹೀಗಿರುವಾಗ ಬಿಗ್ ಬಾಸ್ ಗೆ ಬಂದು ಕಳೆಯನ್ನು ನೀಡುವ ಸುದೀಪ್ ರವರು ಕೂಡ ತಮ್ಮದೇ ಆದ ತಯಾರಿ ನಡೆಸಿದ್ದಾರೆ. ಇತ್ತೀಚಿಗೆ ಸುದೀಪ್ ರವರು ನಟನೆ ಮಾಡಿರುವ ಪ್ರೋಮೋ ಕೂಡ ರಿಲೀಸ್ ಆಗಿದೆ.

ಅದೆಷ್ಟು ಜನ ಬಿಗ್ಬಾಸ್ ಕಾರ್ಯಕ್ರಮವನ್ನು ಕೇವಲ ಕಿಚ್ಚ ಸುದೀಪ್ ರವರಿಗಾಗಿ ನೋಡುತ್ತಾರೆ ಎಂದರೆ ನೀವು ನಂಬಲೇಬೇಕು. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ವಾರದ ಐದು ದಿನಗಳು ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಬಿಗ್ ಬಾಸ್ ಉತ್ತಮ ಟಿಆರ್ಪಿ ಪಡೆದುಕೊಳ್ಳುತ್ತದೆ, ಆದರೆ ಇನ್ನುಳಿದ ಎರಡು ದಿನಗಳು ಅಂದರೆ ಶನಿವಾರ ಭಾನುವಾರ ಕಿಚ್ಚ ಸುದೀಪ್ ರವರು ನಡೆಸಿಕೊಡುವ ಕಾರಣ ಉತ್ತಮ ಅಲ್ಲ ಅತ್ಯುತ್ತಮ ರೈಟಿಂಗ್ ಪಡೆದುಕೊಳ್ಳುತ್ತದೆ.

ಹೀಗಿರುವಾಗ ಬಿಗ್ ಬಾಸ್ ನಿರೂಪಕರಾಗಿ ಸುದೀಪ್ ರವರು ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇನ್ನು ಸುದೀಪ್ ರವರ ಸಂಭಾವನೆ ಕುರಿತು ನಾವು ಮಾತನಾಡುವುದಾದರೆ ಸುದೀಪ್ ರವರು ಕಳೆದ 5 ಸೀಸನ್ ನಿಂದ 21 ಕೋಟಿಗಿಂತಲೂ ಹೆಚ್ಚು ಮೊತ್ತವನ್ನು ಪಡೆದುಕೊಳ್ಳುತ್ತಿದ್ದಾರೆ, ಅಂದರೆ ಅಂದಾಜು ಪ್ರತಿ ಸೀಸನ್ ಗೆ 4 ಕೋತಿ ಯಷ್ಟು ಹಣ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಕೇವಲ ಒಂದೇ ಸೀಸನ್ ಗೆ ಸುದೀಪ್ ರವರು ಬರೋಬ್ಬರಿ 8 ರಿಂದ ಹತ್ತು ಕೋತಿ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಒಂದು ವೇಳೆ ಅದೇ ನಿಜವಾಗಲೂ ಅತಿಹೆಚ್ಚು ಸಂಭಾವನೆ ಪಡೆದ ಕಿರುತೆರೆಯ ನಿರೂಪಕ ಎಂಬ ಖ್ಯಾತಿಗೆ ಸುದೀಪ್ ರವರು ಭಾಜನರಾಗುತ್ತಾರೆ.

Leave a Reply

Your email address will not be published. Required fields are marked *