ಕೊನೆಗೂ ಟೆನ್ನಿಸ್ ಕೃಷ್ಣ ಕೈ ಹಿಡಿದ ಅದೃಷ್ಟ ! ಬಂಪರ್ ಸುದ್ದಿ ಪಡೆದ ಕೃಷ್ಣ ಏನು ಗೊತ್ತಾ??

Cinema

ನಮಸ್ಕಾರ ಸ್ನೇಹಿತರೇ ನಾವು ಚಿಕ್ಕವರಾಗಿದ್ದಾಗ ನಮ್ಮನ್ನು ನಗಿಸಿದ ಪ್ರಖ್ಯಾತ ಹಾಸ್ಯನಟ ರಲ್ಲಿ ಟೆನ್ನಿಸ್ ಕೃಷ್ಣರವರ ಹೆಸರು ಕೂಡ ಕೇಳಿ ಬರುತ್ತದೆ. ಬಹಳ ಅತ್ಯುತ್ತಮವಾಗಿ ನಟನೆ ಮಾಡಿ ತಮ್ಮ ಹಾವಭಾವದಿಂದ ಹಾಗೂ ಡೈಲಾಗ್ ಡಿಲಿವರಿ ಯಿಂದ ನಮ್ಮೆಲ್ಲರನ್ನು ಮನರಂಜಿಸಿದ ಟೆನ್ನಿಸ್ ಕೃಷ್ಣರವರ ಇತ್ತೀಚಿನ ಕೆಲವು ವರ್ಷಗಳಲ್ಲಿ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.

ಕಳೆದ ಬಾರಿ ವೀಕೆಂಡ್ ವಿಥ್ ಕಾರ್ಯಕ್ರಮಕ್ಕೆ ಜಗ್ಗೇಶ್ ರವರು ಬಂದಾಗ ಟೆನಿಸ್ ಕೃಷ್ಣ ರವರು ಅತಿಥಿಯಾಗಿ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಹಿರಿಯ ಹಾಸ್ಯನಟನಿಗೆ ಯಾವುದೇ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ, ಎಲ್ಲ ಯುವಕರು ಇದೀಗ ಅವಕಾಶಗಳನ್ನು ಪಡೆಯುತ್ತಿದ್ದಾರೆ ಅದೇ ಕಾರಣಕ್ಕಾಗಿ ನಾನು ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದೇನೆ ನನಗೆ ಯಾವ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಅವಕಾಶ ಅಲ್ಲ ಅದೃಷ್ಟ ಕೈ ಹಿಡಿದಿದೆ.

ಹೌದು ಸ್ನೇಹಿತರೇ ಬಲ್ಲಮೂಲಗಳ ಪ್ರಕಾರ ಟೆನ್ನಿಸ್ ಕೃಷ್ಣರವರ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಭರ್ಜರಿ ಟಿಆರ್ಪಿ ಪಡೆದುಕೊಳ್ಳುತ್ತಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಆಗಮಿಸಲಿದ್ದಾರೆ ಅಂತ. ಬಿಗ್ ಬಾಸ್ ತಂಡವು ಟೆನಿಸ್ ಕೃಷ್ಣ ರವರನ್ನು ಈ ಕುರಿತು ಸಂಪರ್ಕ ಮಾಡಿದ್ದು, ಟೆನಿಸ್ ಕೃಷ್ಣ ರವರು ಕೂಡ ಒಪ್ಪಿಗೆ ನೀಡಿದ್ದಾರಂತೆ. ಇನ್ನು ಒಂದು ವೇಳೆ ಅದೇ ನೆಲದಲ್ಲಿ ಖಂಡಿತ ಬಿಗ್ ಬಾಸ್ ಮನೆಗೆ ಹಾಸ್ಯ ಕಲೆ ಎದ್ದು ಕಾಣಲಿದೆ. ಏನಂತೀರಾ??

Leave a Reply

Your email address will not be published. Required fields are marked *