ಗೋಧಿ ಹಿಟ್ಟಿನಿಂದ ಅತೀ ಸುಲಭವಾಗಿ ರುಚಿಯಾದ ಉತ್ತಪ್ಪ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಗೋಧಿ ಹಿಟ್ಟಿನ ಉತ್ತಪ್ಪ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಗೋಧಿ ಹಿಟ್ಟಿನ ಉತ್ತಪ್ಪ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಗೋದಿ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 4 ಚಮಚ ಮೊಸರು, ಕಾಲು ಬಟ್ಟಲು ಕ್ಯಾಪ್ಸಿಕಂ, ಕಾಲು ಬಟ್ಟಲು ಕ್ಯಾರೆಟ್, 1 ಟೊಮೇಟೊ,1 ದೊಡ್ಡ ಗಾತ್ರದ ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ,ಅರ್ಧ ಚಮಚ ಸೋಡಾ, 2 ಹಸಿಮೆಣಸಿನ ಕಾಯಿ, 4 ಚಮಚ ತುಪ್ಪ.

ಗೋಧಿ ಹಿಟ್ಟಿನ ಉತ್ತಪ್ಪ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಗೋಧಿಹಿಟ್ಟು, 2ಚಮಚ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಒಂದು ಬಾರಿ ಮಿಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚದಷ್ಟು ಉಪ್ಪನ್ನು ಹಾಕಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಮೊಸರು ಹಾಗೂ ನೀರನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಂಡು 5 ನಿಮಿಷಗಳ ಕಾಲ ನೆನೆಯಲು ಬಿಡಿ. 5 ನಿಮಿಷಗಳ ನಂತರ ಹಿಟ್ಟಿಗೆ ಸೋಡಾವನ್ನು ಹಾಕಿ ಮಿಕ್ಸ್ ಮಾಡಿಟ್ಟುಕೊಳ್ಳಿ.

ಮತ್ತೊಂದು ಕಡೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ, ಸಣ್ಣಗೆ ಹಚ್ಚಿದ ಟೊಮೇಟೊ, ಸಣ್ಣಗೆ ಹಚ್ಚಿದ ಕ್ಯಾಪ್ಸಿಕಂ, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ತುರಿದ ಕ್ಯಾರೆಟ್, ಸ್ವಲ್ಪ ಕೊತ್ತಂಬರಿ ಸೊಪ್ಪು, ಕಾಳುಮೆಣಸಿನಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ತದನಂತರ ಗ್ಯಾಸ್ ಮೇಲೆ ದೋಸೆ ಹೆಂಚನ್ನು ಇಟ್ಟು ಕಾಯಲು ಬಿಡಿ. ಕಾದನಂತರ ಇದಕ್ಕೆ ಸೆಟ್ ದೋಸೆ ರೀತಿಯಲ್ಲಿ ಹಿಟ್ಟನ್ನು ಸವರಿಕೊಳ್ಳಿ. ನೆನಪಿನಲ್ಲಿರಲಿ ಗೋಧಿ ಹಿಟ್ಟಿನ ಉತ್ತಪ್ಪ ಮಾಡುವಾಗ ಗ್ಯಾಸ್ ನನ್ನು ಕಡಿಮೆ ಉರಿಯಲ್ಲಿ ಇಡಬೇಕು. ಅದರ ಮೇಲೆ ಮಿಕ್ಸ್ ಮಾಡಿಕೊಂಡ ತರಕಾರಿ ಮಿಶ್ರಣವನ್ನು ಹರಡಬೇಕು. ನಂತರ ಇದರ ಮೇಲೆ ಸ್ವಲ್ಪ ಉಪ್ಪನ್ನು ಉದುರಿಸಬೇಕು. ನಂತರ ಇದರ ಮೇಲೆ ಹಾಗೂ ಸುತ್ತಲೂ ತುಪ್ಪವನ್ನು ಹಾಕಿ ಎರಡು ಬದಿಯಲ್ಲಿ ಬೇಯಿಸಿಕೊಂಡರೆ ಗೋಧಿಹಿಟ್ಟಿನ ಉತ್ತಪ್ಪ ಸವಿಯಲು ಸಿದ್ಧ.