ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ, ರಾಧೆ ಪಾತ್ರದಾರಿಯ ಕುರಿತು ನಿಮಗೆ ತಿಳಿಯದ ಮಾಹಿತಿ.

54

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ತಿಂಗಳುಗಳಿಂದ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಆಗಿರುವ ದಾರವಾಹಿಗಳು ನಿಜಕ್ಕೂ ಮೋಡಿ ಮಾಡಿವೆ. ಇಷ್ಟು ದಿವಸ ಡಬ್ಬಿಂಗ್ ಧಾರವಾಹಿಗಳನ್ನು ಕನ್ನಡದಲ್ಲಿ ಡಬ್ ಮಾಡಿದರೇ ಯಶಸ್ವಿಯಾಗುತ್ತವೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಮೂಡುತ್ತಿತ್ತು. ಆದರೆ ಎಲ್ಲಾ ಪ್ರಶ್ನೆಗಳನ್ನು ದೂರ ಮಾಡುವಂತೆ ಉತ್ತರ ನೀಡಿದ ಎರಡು ಧಾರವಾಹಿಗಳು ಎಂದರೇ ಒಂದು ಮಹಾಭಾರತ ಮತ್ತೊಂದು ರಾಧಾಕೃಷ್ಣ.

ಈ ದಾರವಾಹಿಗಳು ಕನ್ನಡಕ್ಕೆ ಡಬ್ ಆದ ಬಳಿಕ ನಿಜಕ್ಕೂ ಕನ್ನಡದಲ್ಲಿ ಎಲ್ಲರನ್ನು ಮೋಡಿ ಮಾಡಿದವು. ಈ ದಾರವಾಹಿಗಳು ಪ್ರಸಾರವಾಗುತ್ತಿವೆ ಎಂದರೆ ಇತರ ಚಾನೆಲ್ಗಳಿಗೆ ಟಿಆರ್ಪಿ ಸಿಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಈ ಎರಡು ದಾರವಾಹಿಗಳು ಮೋಡಿ ಮಾಡಿದವು. ಇನ್ನು ರಾಧಾಕೃಷ್ಣ ಧಾರವಾಹಿ ಭಾರಿ ಜನಪ್ರಿಯತೆ ಪಡೆದುಕೊಂಡ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ರಾಧೆ ಹಾಗೂ ಕೃಷ್ಣನ ನಡುವಿನ ನಿಷ್ಕಲ್ಮಶ ಪ್ರೀತಿ, ನಟಿಸಿರುವ ಕಲಾವಿದರ ನಟನೆಯೂ ಕೂಡ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿತ್ತು. ಇನ್ನು ಈ ಧಾರಾವಾಹಿಯಲ್ಲಿ ನಟಿಸಿದ ರಾಧೆಯಂತೆ ಆಕೆಯ ಸೌಂದರ್ಯ ಹಾಗೂ ಅಭಿನಯ ನೋಡಿ ಫಿದಾ ಆಗದವರು ಇಲ್ಲ ಎಂದರೆ ನೀವು ನಂಬಲೇಬೇಕು.

ಪ್ರತಿಯೊಬ್ಬರೂ ಈ ರಾಧೆ ಯನ್ನು ಇಷ್ಟಪಟ್ಟಿದ್ದರು, ಇಂದು ನಾವು ಈ ಧಾರವಾಹಿಯಲ್ಲಿ ರಾಧೆ ಪಾತ್ರ ದಲ್ಲಿ ನಟಿಸಿರುವ ಮಲ್ಲಿಕಾ ಸಿಂಗ್ ರವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ. ಅವರ ಜೀವನದ ಕುರಿತು ಆಸಕ್ತಿ ಮಾಹಿತಿಗಳನ್ನು ಕೂಡ ನೀಡುತ್ತೇವೆ ಕೇಳಿ. ಸ್ನೇಹಿತರೇ ಮಲ್ಲಿಕಾ ಸಿಂಗ್ ಅಥವಾ ರಾಧೆ ಪಾತ್ರಧಾರಿಯು ವೃತ್ತಿಯಲ್ಲಿ ಮಾಡೆಲ್ ಮತ್ತು ಡ್ಯಾನ್ಸರ್. ಇವರು ಮಾಡಲ್ ಆಗಿದ್ದಾಗ ಇವರಿಗೆ ಅವಕಾಶ ಒದಗಿ ಬಂದಿದ್ದು ರಾಧಾಕೃಷ್ಣ ಧಾರವಾಹಿಯಲ್ಲಿ. ಹೌದು ಇವರು ಮೊಟ್ಟ ಮೊದಲ ಬಾರಿಗೆ ನಟನೆಯ ಮಾಡಿದ್ದು ರಾಧಾಕೃಷ್ಣ ದಾರವಾಹಿ ಯಲ್ಲಿಯೇ. ಇವರಿಗೆ ಎತ್ತರ 5.41 ತೂಕ 50 ಕೆಜಿ. ಇವರು 2000 ರಲ್ಲಿ ಸೆಪ್ಟೆಂಬರ್ 15 ರಂದು ಜನಿಸಿದ್ದಾರೆ, ಇವರು ಮೂಲತಹ ಜಮ್ಮುವಿನವರು, ತಾಯಿ ರುಬಿ ಸಿಂಗ್. ತಮ್ಮ ಬಾಲ್ಯ ಶಿಕ್ಷಣವನ್ನು ಸೆವೆಂತ್ ಸ್ಕ್ವೇರ್ ಅಕಾಡೆಮಿ ಸ್ಕೂಲ್ ನಲ್ಲಿ ಕಳೆದ ಇವರು, ಕಾಲೇಜಿನಲ್ಲಿ ಓದುವಾಗ ಸಂಜೆಯ ಕಾಲೇಜಿಗೆ ಸೇರಿಕೊಂಡು ಪದವಿ ಪಡೆದುಕೊಳ್ಳುತ್ತಾರೆ.

ಇನ್ನು ಇವರಿಗೆ ಇಷ್ಟವಾಗುವ ಕಲರ್ ಎಂದರೇ ಅದು ಕೆಂಪು ಬಣ್ಣ. ಬಹಳ ಇಷ್ಟಪಡುವ ಊರು ಯುರೋಪ್, ಇನ್ನು ಇವರು ಹೆಚ್ಚಾಗಿ ಹೊರಹೋಗಲು ಇಷ್ಟಪಡುತ್ತಾರೆ. ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುವುದು ಇವರಿಗೆ ಬಹಳ ಇಷ್ಟವಂತೆ. ಇನ್ನು ಇವರ ಸಂಭಾವನೆ ಕುರಿತು ನಾವು ಹೇಳುವುದಾದರೇ ಒಂದು ಎಪಿಸೋಡಿಗೆ ಬರೋಬ್ಬರಿ ಐವತ್ತು ಸಾವಿರ ರೂಪಾಯಿಯನ್ನು ಇವರು ಪಡೆದುಕೊಳ್ಳುತ್ತಾರೆ, ಇವರ ಒಟ್ಟು ಆಸ್ತಿಯ ಮೊತ್ತವನ್ನು ನಾವು ಗಮನಿಸುವುದಾದರೆ ಸರಿ ಸುಮಾರು ಐದರಿಂದ ಆರು ಕೋಟಿಗಳ ಒಡತಿ, ಇನ್ನು ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಮಲ್ಲಿಕಾ ಸಿಂಗ್ ರವರು ಕೇವಲ ತಾಯಿಯ ಜೊತೆ ಬೆಳೆದಿದ್ದಾರೆ.

ಚಿಕ್ಕಂದಿನಿಂದಲೇ ಡ್ಯಾನ್ಸ್ ಬಗ್ಗೆ ಆಸಕ್ತಿ ಹೊಂದಿದ್ದ ಇವರು ತಾಯಿಯ ಶಾಲೆಯಲ್ಲಿಯೇ ಡ್ಯಾನ್ಸ್ ಕಲಿಯುತ್ತಾರೆ. ವಿಶೇಷವೇನೆಂದರೆ ಇನ್ನೂ ಹತ್ತನೇ ತರಗತಿಯಲ್ಲಿರುವಾಗಲೇ ಇವರಿಗೆ ರಾಧಾಕೃಷ್ಣ ಧಾರವಾಹಿಯಲ್ಲಿ ನಟಿಸಲು ಅವಕಾಶ ಸಿಗುತ್ತದೆ, ಸಿಕ್ಕಿದ ತಕ್ಷಣ ಒಪ್ಪಿಕೊಂಡ ಮಲ್ಲಿಕಾ ಸಿಂಗ್ ರವರು ತದನಂತರ ಕಿರುತೆರೆಯಲ್ಲಿ ಮೋಡಿ ಮಾಡಿ ಇದೀಗ ಕಿರುತೆರೆ ಲೋಕದಲ್ಲಿ ಮಿಂಚುತ್ತಿದ್ದಾರೆ. ಇನ್ನು ಸಿನಿಮಾಗಳಲ್ಲಿ ನಟನೆ ಮಾಡುವ ಅವಕಾಶ ಸಿಕ್ಕರೂ ಕೂಡ ನನ್ನ ಕೈಯಲ್ಲಿರುವ ದಾರವಾಹಿಗಳು ಮುಗಿಯುವ ವರೆಗೂ ನಾನು ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Get real time updates directly on you device, subscribe now.